Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ದಾದ್ರಿ ಕೊಲೆ ಬಗ್ಗೆ ಮೋದಿ ಮೌನ, ಸಂಘ...

ದಾದ್ರಿ ಕೊಲೆ ಬಗ್ಗೆ ಮೋದಿ ಮೌನ, ಸಂಘ ಪರಿವಾರದ ದ್ವೇಷ ರಾಜಕೀಯ ಖಂಡಿಸಿದ್ದ ಟಿ.ಎಂ. ಕೃಷ್ಣ

ಚರ್ಚೆಗೆ ಬಂದ ಮ್ಯಾಗ್ಸೆಸೆ ಪುರಸ್ಕೃತನ ಬಹಿರಂಗ ಪತ್ರ

ವಾರ್ತಾಭಾರತಿವಾರ್ತಾಭಾರತಿ28 July 2016 12:15 PM IST
share
ದಾದ್ರಿ ಕೊಲೆ ಬಗ್ಗೆ ಮೋದಿ ಮೌನ, ಸಂಘ ಪರಿವಾರದ ದ್ವೇಷ ರಾಜಕೀಯ ಖಂಡಿಸಿದ್ದ ಟಿ.ಎಂ. ಕೃಷ್ಣ

ಬೆಂಗಳೂರು, ಜು.28 : ಇತ್ತೀಚೆಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆಯಾಗಿರುವ ಕರ್ನಾಟಕದ ಖ್ಯಾತ ಶಾಸ್ತ್ರೀಯ ಸಂಗೀತ ವಿದ್ವಾಂಸ ಟಿ.ಎಂ. ಕೃಷ್ಣ ಅವರು ದಾದ್ರಿ ಕೊಲೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಮೌನ ಹಾಗೂ ಸಂಘ ಪರಿವಾರದ ದ್ವೇಷ ರಾಜಕಾರಣವನ್ನು ಖಂಡಿಸಿ ಮೋದಿಗೆ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಬರೆದ  ಪತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ಎಂ ಎಂ ಕಲಬುರ್ಗಿ ಹಾಗೂ ದಾದ್ರಿಯ ಮೊಹಮ್ಮದ್ ಅಖ್ಲಾಖ್ ಕೊಲೆ ಪ್ರಕರಣಗಳನ್ನು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದ ಕೃಷ್ಣ ``ಪ್ರಧಾನ ಮಂತ್ರೀಜಿ -- ನಿಮ್ಮ ಮೌನ ಮಾತ್ರವಲ್ಲದೆ, ನಿಮ್ಮ ಪ್ರತಿಕ್ರಿಯೆ ಯಾಚಿಸಿದ ನಾಗರಿಕರನ್ನೆಲ್ಲಾ ನಿಂದಿಸಿ, ಅಪಹಾಸ್ಯ ಮಾಡಿ ಗೌಣಗೊಳಸಿದ ವಿಚಾರವೂ ನಮಗೆ ಆಶ್ಚರ್ಯ ತಂದಿದೆ. ನಿಮ್ಮ ಪ್ರತಿಕ್ರಿಯೆ ಕೇಳುವುದು  ಸರಿಯಲ್ಲವೇ ? ನಿಮ್ಮ ಪ್ರತಿಕ್ರಿಯೆ ಕೇಳುವ ಅಧಿಕಾರ ನಮಗಿಲ್ಲವೇ ? ಇಷ್ಟೊಂದು ಮಹತ್ವದ ವಿಚಾರದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಕೇಳಿದ ಮಾತ್ರಕ್ಕೆ ನಾವೇನೋ ದೊಡ್ಡ ತಪ್ಪು ಮಾಡಿದ್ದೇವೆಂಬ ಭಾವನೆಯನ್ನು ಏಕೆ ವ್ಯಕ್ತಪಡಿಸಲಾಗುತ್ತಿದೆ ?''ಎಂದು ಪ್ರಶ್ನಿಸಿದ್ದರು.

``ಪ್ರಧಾನ ಮಂತ್ರೀಜಿ, ನೀವು ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂದು ಆಗಾಗ ಹೇಳುತ್ತಿರುತ್ತೀರಿ. ಆದರೆ ಅದು ಸಾಲದು. ಕಳೆದ ಕೆಲವು ತಿಂಗಳುಗಳಿಂದೀಚೆಗೆ ನಾವು ಒಂದಕ್ಕಿಂತ ಹೆಚ್ಚು ದುರಂತಗಳಿಗೆ ಸಾಕ್ಷಿಯಾಗಿದ್ದೇವೆ. ಈ  ಘಟನೆಗಳ ನಡುವಿನ ಸಂಬಂಧ ನಮಗೆ ಕಾಣದೇ ಇರುವುದೇ? ಕಂತೆಪುರಾಣಗಳನ್ನು ಹೇಳುವ ಸಮಯ ಇದಲ್ಲ, ನಿಮ್ಮಿಂದ ಬಲವಾದ ಖಂಡನೆಯ ಅಗತ್ಯವಿದೆ. ಯಾರೇ ಆಗಲಿ ಮಂಡಿಸಿದ ಅಭಿಪ್ರಾಯ ಅಸಮ್ಮತವಾದಲ್ಲಿ, ಅಥವಾ ಯಾವುದೇ ವ್ಯಕ್ತಿಯ ಧರ್ಮ ಹಾಗೂ ಆಹಾರ ಪದ್ಧತಿಯ ವಿಚಾರದಲ್ಲಿ  ಆತನನ್ನು ಕೊಂದರೆ ಸರಕಾರ ಅದನ್ನು ಸಹಿಸುವುದಿಲ್ಲವೆಂಬುದು ನಿಮ್ಮ ಖಂಡನೆಯ ಮೂಲಕ ನಮಗೆ ತಿಳಿಯಬೇಕು,'' ಎಂದು ಕೃಷ್ಣ ಬರೆದಿರುವ ಪತ್ರ ಹೇಳುತ್ತದೆ.

 ``ನೀವು ಮಾತನಾಡುವುದನ್ನು ನಾವು ಕೆಂಪು ಕೋಟೆ, ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ದುಬೈ, ಸಿಲಿಕಾನ್ ವ್ಯಾಲಿ ಹಾಗೂ ಫೇಸ್ ಬುಕ್ ಕಚೇರಿಯಲ್ಲಿ ಕೇಳಿದ್ದೇವೆ. ನಿಮ್ಮ ತಾಯಿ ಪಟ್ಟ ಪಾಡಿನ ಬಗ್ಗೆ ನೀವು ಮಾತನಾಡಿದ್ದನ್ನು ಕೇಳಿದ್ದೇವೆ. ಆದರೆ ಗೋಮಾಂಸ ಸೇವಿಸಿದ್ದಾನೆಂದು ಹೇಳಲಾದ ವ್ಯಕ್ತಿಯ ದಾರುಣ ಕೊಲೆಯ ಬಗ್ಗೆ ನೀವೇಕೆ ಮೌನವಾಗಿದ್ದೀರಿ?''ಎಂದೂ ಅವರು ಪ್ರಶ್ನಿಸಿದ್ದಾರೆ.

`ಆರೆಸ್ಸೆಸ್ ಹಾಗೂ ಸಂಘ ಪರಿವಾರ ಸಂಘಟನೆಗಳು ಜನರನ್ನು ವಿಭಜಿಸಲು ಯತ್ನಿಸುತ್ತವೆ. ನೀವು ಪ್ರಧಾನಿಯಷ್ಟೇ ಅಲ್ಲದೆ ಬಿಜೆಪಿಯನ್ನು ನಿಯಂತ್ರಿಸುವ ದೈತ್ಯ ನಾಯಕ ಹಾಗಿರುವಾಗ ಈ ಸಂಘ ಪರಿವಾರಗಳು ನಡೆಸುವ ಎಲ್ಲಾ ಕಾರ್ಯಗಳಿಗೂ ನೀವೂ ಜವಾಬ್ದಾರರಾಗಿರುತ್ತೀರಿ. ಹಿಂದೂಗಳು ಹಾಗೂ ಮುಸ್ಲಿಮರು  ಒಬ್ಬರ ವಿರುದ್ಧ ಒಬ್ಬರು ಹೋರಾಡಬೇಕೇ ಅಥವಾ ಬಡತನದ ವಿರುದ್ಧ ಹೋರಾಡಬೇಕೇ ಎಂದು ನಿರ್ಧರಿಸಬೇಕು ಎಂದು ನೀವು ಹೇಳಿದ್ದೀರಿ. ಇದು ಖಾಲಿ ಘೋಷಣೆಯಲ್ಲದೆ ಮತ್ತಿನ್ನೇನಲ್ಲ ಏಕೆಂದರೆ ಬಡತನವು ಧರ್ಮ, ಜಾತಿ, ವರ್ಗಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ನಮ್ಮ ಮುಂದಿರುವ ಸವಾಲುಗಳನ್ನು ಪ್ರಾಮಾಣಿಕತೆ ಹಾಗೂ ಧೈರ್ಯದಿಂದ ಎದುರಿಸದೇ ಹೋದರೆ ನಮ್ಮ ಬಡತನ ಹಾಗೂ ನಮ್ಮ ಹಿಂದುಳುವಿಕೆಯ ಸಮಸ್ಯೆ ಹಾಗೆಯೇ ಉಳಿದು ಬಿಡುವುದು,''ಎಂದಿದ್ದಾರೆ ಕೃಷ್ಣ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X