ಕತರ್:ಮಹಿಳೆಯ ಕೊಲೆ ಆರೋಪಿಗೆ ಗಲ್ಲುಶಿಕ್ಷೆ

ದೋಹ, ಜುಲೈ 28: ಗ್ರಹಿಣಿಯ ಕೊಲೆ ಪ್ರಕರಣವೊಂದರಲ್ಲಿ ಸ್ವದೇಶಿ ಆರೋಪಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ ಎಂದುವರದಿಯಾಗಿದೆ. ನಿಕಟ ಸಂಬಂಧಿಯಾದ ಆರೋಪಿಯನ್ನು ಮಹಿಳೆಯ ಪತಿ ಮನೆಗೆ ಬರಬಾರದೆಂದು ತಡೆದಿದ್ದರು. ಇದರ ನೆಪದಲ್ಲಿ ಹಲವು ಸಂದರ್ಭದಲ್ಲಿ ಅವರೊಳಗೆ ಜಗಳ ಸಂಭವಿಸಿತ್ತು. ಈ ದ್ವೇಷದಲ್ಲಿ ಆರೋಪಿಯು ಮಹಿಳೆಯ ಹತ್ಯೆ ನಡೆಸಿದ್ದಾನೆ ಎಂದು ನ್ಯಾಯಾಲಯಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಆರೋಪಿಗೆ ವಧೆ ಶಿಕ್ಷೆ ನೀಡಲಾಗಿದೆ ಎಂದು ವರದಿಯಾಗಿದೆ.
ಕೆಳಕೋರ್ಟು ನೀಡಿದ್ದ ವಧೆ ಶಿಕ್ಷೆಯ ತೀರ್ಪನ್ನು ಅಪೀಲು ಕೋರ್ಟು ಪುಷ್ಟೀಕರಿಸಿದ್ದು, ಕೊಲೆಯಾದ ಗ್ರಹಿಣಿಯ ಮಕ್ಕಳು ವಯಸ್ಕರಾಗುವವರೆಗೂ ಆರೋಪಿಯನ್ನು ಜೈಲಿನಲ್ಲಿರಿಸಬೇಕು. ನಂತರ ಅವರು ವಯಸ್ಕರಾದ ಬಳಿಕ ಇಸ್ಲಾಮಿಕ್ ಶರೀಅತ್ ಪ್ರಕಾರ ಆರೋಪಿಗೆ ಕ್ಷಮೆ ನೀಡಲು ಒಪ್ಪದಿದ್ದರೆ ವಧೆ ಶಿಕ್ಷೆ ಜಾರಿಗೊಳಿಸಬೇಕೆಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.
ಗ್ರಹಿಣೆಯನ್ನು ಹತ್ಯೆ ಮಾಡುವ ಉದ್ದೇಶದಿಂದ ಆರೋಪಿ ಹಲವು ಬಾರಿ ಆಕೆಯ ಮನೆಗೆ ಬಂದಿದ್ದ ಎಂಬುದನ್ನು ಸಾಕ್ಷಿಗಳು ನೀಡಿದ ಸಾಕ್ಷ್ಯ ಮತ್ತು ಇತರ ಪುರಾವೆಗಳಿಂದ ಪ್ರಾಸಿಕ್ಯೂಶನ್ ಪತ್ತೆಹಚ್ಚಿತ್ತು. ಪತಿ ಹೊರಗೆ ಹೋದ ಸಂದರ್ಭದಲ್ಲಿ ಮನೆಯೊಳಗೆ ನುಗ್ಗಿದ ಆರೋಪಿಯು ಮಹಿಳೆಯನ್ನು ಹಿಂಭಾಗದಿಂದ ಚಾಕುವಿನಿಂದ ತಿವಿದು ಕೆಡವಿ ಹಾಕಿ ಉಸಿರು ಕಟ್ಟಿಸಿ ಕೊಲೆಮಾಡಿದ್ದಾನೆ ಎಂಬುದು ನ್ಯಾಯಾಲಯದಲ್ಲಿ ಸಾಬೀತಾಗಿದೆ ಎಂದು ವರದಿಯಾಗಿದೆ.





