ಆರ್ಟ್ ಆಫ್ ಲಿವಿಂಗ್ ಗೆ 120 ಕೋಟಿಯ ಬರೆ
ಹಿರಿಯ ಐಎಎಸ್ ಅಧಿಕಾರಿಗೆ 'ಜ್ವರ' !

ಯಮುನಾ ದಡದಲ್ಲಿ ಮಾಡಿದ ವಿಶ್ವ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮದಿಂದ ಆರ್ಟ್ ಆಫ್ ಲಿವಿಂಗ್ ಯುಮುನಾ ತಟಕ್ಕೆ ಹಾನಿಯುಂಟು ಮಾಡಿದೆ ಎನ್ನುವ ಪ್ರಕರಣದಲ್ಲಿ ಹಿರಿಯ ಅಧಿಕಾರಿಯೊಬ್ಬರ ಗೌಪ್ಯ ಪತ್ರವೊಂದು ಹೊಸ ವಿವಾದಕ್ಕೆ ಕಾರಣವಾಗಿದೆ. ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಕಾರ್ಯದರ್ಶಿ ಶಶಿ ಶೇಖರ್ ಅವರು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಅಧ್ಯಕ್ಷ ನ್ಯಾಯಮೂರ್ತಿ ಸ್ವತಂತರ್ ಕುಮಾರ್‌ಗೆ ಬರೆದ ಪತ್ರದಲ್ಲಿ ನ್ಯಾಯಾಧಿಕರಣ ಸ್ಥಾಪಿಸಿದ ಸಮಿತಿಯು ಆರ್ಟ್ ಆಫ್ ಲಿವಿಂಗ್ ಮೇಲೆ ರೂ. 120 ಕೋಟಿ ದಂಡವನ್ನು ಹೇರಿರುವುದು ಪ್ರಮಾದವಶಾತ್ ಮಾಡಿದ ಶಿಫಾರಸ್ ಆಗಿದೆ ಎಂದು ಹೇಳಿದ್ದಾರೆ. ಈ ಶಿಫಾರಸುಗಳಿಗೆ ಯಾವುದೇ ವೈಜ್ಞಾನಿಕ ಆಧಾರಗಳಿರಲಿಲ್ಲ ಮತ್ತು ಅತಿಯಾದ ಜ್ವರ ಇದ್ದ ಕಾರಣ ವಿವರಗಳನ್ನು ನೋಡಲು ಸಾಧ್ಯವಾಗದೆ ಈ ಪ್ರಮಾದವಾಗಿದೆ ಎಂದೂ ಪತ್ರದಲ್ಲಿ ಹೇಳಿದ್ದಾರೆ.
2016 ಮಾರ್ಚ್ 3ರಂದು ಶೇಖರ್ ಬರೆದ ಪತ್ರದಲ್ಲಿ, ನನಗೆ ತೀವ್ರ ಜ್ವರ ಇದ್ದ ಕಾರಣ ವಾಸ್ತವಾಂಶಗಳನ್ನು ನೋಡಲು ಸಾಧ್ಯವಾಗದೆ ಪ್ರಮಾದವಾಗಿದೆ. ನಾನು ತಜ್ಞರು ತಯಾರಿಸಿದ ಸಂಪೂರ್ಣ ವರದಿಯನ್ನು ಓದಲು ಸಾಧ್ಯವಾಗಿಲ್ಲ. ಈ ವಿಷಯ ಚರ್ಚೆಗೆ ಬರಲಿಲ್ಲ ಎಂದು ನಾನು ಹೇಳದೆ ಇದ್ದರೂ, ಯಮುನಾ ತಟವನ್ನು ಮರಳಿ ಹಿಂದಿನ ಸ್ವರೂಪಕ್ಕೆ ತರಲು ರೂ. 120 ಕೋಟಿ ದಂಡ ಹೇರುವ ಬಗ್ಗೆ ಚರ್ಚಿಸಲಾಗಿತ್ತು. ನಾನು ಆ ಅಭಿಪ್ರಾಯವನ್ನು ಬೆಂಬಲಿಸಲಿಲ್ಲ. ಬದಲಾಗಿ ಕಾರ್ಯಕ್ರಮ ಮುಗಿದ ಮೇಲೆ ಆಯೋಜಕರೇ ಯಮುನಾ ತಡವನ್ನು ವೈಜ್ಞಾನಿಕವಾಗಿ ತಜ್ಞರು ಅಂದಾಜಿಸಲಾದ ವೆಚ್ಚದಲ್ಲಿ ಸರಿಪಡಿಸಬೇಕು ಮತ್ತು ಈ ಕಾರ್ಯವು ನ್ಯಾಯಾಧಿಕರಣ ರಚಿಸಿದ ಸಮಿತಿಯ ನೇತೃತ್ವದಲ್ಲಿ ನಡೆಯಬೇಕು ಎಂದು ಹೇಳಿದ್ದೆ. ತಜ್ಞರು ರೂ. 120 ಕೋಟಿ ಅಂದಾಜಿಸಿದ್ದು ತಾತ್ಕಾಲಿಕವಾಗಿತ್ತು ಮತ್ತು ತಕ್ಷಣದ ಸಲಹೆಯಾಗಿತ್ತು. ಅದರ ಹಿಂದೆ ಯಾವುದೇ ವೈಜ್ಞಾನಿಕ ವಿಶ್ಲೇಷಣೆಯಿರಲಿಲ್ಲ ಎಂದು ಶೇಖರ್ ಹೇಳಿದ್ದಾರೆ. ಒಟ್ಟಾರೆಯಾಗಿ ಯಮುನಾ ತಟ ಹಿಂದಿನ ಸ್ವರೂಪಕ್ಕೆ ಬರಬೇಕು ಮತ್ತು ಅದರ ವೆಚ್ಚವನ್ನು ಆಯೋಜಕರು ಭರಿಸಬೇಕು ಎನ್ನುವುದಷ್ಟೇ ಉದ್ದೇಶವಾಗಿತ್ತು. ನ್ಯಾಯಾಧಿಕರಣವು ಈ ಅಭಿಪ್ರಾಯವನ್ನು ಶಿಫಾರಸು ಎಂದು ಪರಿಗಣಿಸಬೇಕೇ ವಿನಾ ಆಧಾರಗಳಿಲ್ಲದೆ ಅಂದಾಜಿಸಿದ ರೂ. 120 ಕೋಟಿ ವೆಚ್ಚವನ್ನು ಯಮುನಾ ತಟದ ಮರುನಿರ್ಮಾಣಕ್ಕೆ ಭರಿಸಬೇಕು ಎನ್ನುವುದನ್ನಲ್ಲ ಎಂದು ಶೇಖರ್ ಪತ್ರದಲ್ಲಿ ಬರೆದಿದ್ದಾರೆ.
ನ್ಯಾಯಾಧಿಕರಣವು ಐದು ಕೋಟಿ ರೂಪಾಯಿ ಪರಿಹಾರ ಭರಿಸಲು ಆದೇಶಿಸಿದ ಹಿನ್ನೆಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ಸುಪ್ರೀಂ ಕೋರ್ಟಿಗೆ ಹೋಗಲು ಉದ್ದೇಶಿಸಿದ ಸಂದರ್ಭದಲ್ಲಿ ಈ ಪತ್ರ ಮುಂದಕ್ಕೆ ಬಂದಿದೆ. ಆರ್ಟ್ ಆಫ್ ಲಿವಿಂಗ್ ಅಧಿಕಾರಿಗಳು ಮತ್ತು ನ್ಯಾಯಾಧಿಕರಣದ ಸಮಿತಿಯ ನಡುವೆ ವಾಗ್ವಾದಗಳು ನಡೆಯುತ್ತಿರುವಾಗ ಈ ಪತ್ರ ಹೊರಗೆ ಏಕೆ ಬರಲಿಲ್ಲ ಎನ್ನುವುದೇ ಈಗಿನ ಪ್ರಶ್ನೆ. ಈ ಬಗ್ಗೆ ಶೇಖರ್ ಯಾವುದೇ ಸ್ಪಷ್ಟನೆ ನೀಡುತ್ತಿಲ್ಲ.
ಈಗಾಗಲೇ ಆರ್ಟ್ ಆಫ್ ಲಿವಿಂಗ್ ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ರು. 4.75 ಕೋಟಿ ತೆತ್ತಿದೆ. ಹಾಗಿದ್ದರೂ ಈ ಪರಿಹಾರ ನಿರ್ಧಾರದ ಹಿಂದೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದು ಆರ್ಟ್ ಆಫ್ ಲಿವಿಂಗ್ ಹೇಳುತ್ತಾ ಬಂದಿದೆ.
ಪರಿಸರ ಸಲಹೆಗಾರ ಪ್ರಭಾಕರ ರಾವ್ ಪ್ರಕಾರ ಹಬ್ಬದ ಮುಖ್ಯ ಜಾಗವು ಕೇವಲ 24.44 ಎಕರೆಗಳಷ್ಟೇ ಆಗಿದ್ದ ಕಾರಣ ನದೀ ತಟಕ್ಕೆ ಹಾನಿಯಾಗುವುದು ಸಾಧ್ಯವಿಲ್ಲ. ಅಲ್ಲದೆ ಆರ್ಟ್ ಆಫ್ ಲಿವಿಂಗ್ ರಸ್ತೆ ಮತ್ತು ಬೇಲಿ ಹಾಕಿರುವುದೂ ಸುಳ್ಳು. 2007ರಲ್ಲಿ ಮಾಧ್ಯಮ ಸಂಸ್ಥೆಯೊಂದರ ಕಾರ್ಯಕ್ರಮಕ್ಕೆ ಇವು ನಿರ್ಮಾಣವಾಗಿತ್ತು. ಆದರೆ ನ್ಯಾಯಾಧಿಕರಣದ ಸಮಿತಿಯ ಸದಸ್ಯ ಸಿಆರ್ ಬಾಬು ಮತ್ತು ಅವರ ಸಹಚರರು ಭೂಮಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿರುವುದಾಗಿ ಆರೋಪಿಸಿದ್ದರು. ಇದರ ಆಧಾರದಲ್ಲೇ ದಂಡ ಹೇರಲಾಗಿತ್ತು. ಅಲ್ಲದೆ ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯ ಎಕೆ ಗೋಸೈನ್ ಮತ್ತು ಪ್ರೊಫೆಸರ್ ಬೃಜ್ ಗೋಪಾಲ್ ಕೂಡ ಯಮುನಾ ತಟಕ್ಕೆ ಅತಿಯಾದ ಹಾನಿಯಾಗಿರುವುದಾಗಿ ಹೇಳಿದ್ದರು. ಬೃಜ್ ಗೋಪಾಲ್ ಅವರಿಗೆ ಶೇಖರ್ ಬರೆದ ಪತ್ರದ ಬಗ್ಗೆ ಯಾವುದೇ ವಿವರಗಳಿಲ್ಲ. ಅಂತಹ ಪತ್ರವ್ಯವಹಾರವು ಅಧ್ಯಕ್ಷ ಮತ್ತು ನ್ಯಾಯಾಧೀಶರ ನಡುವೆ ಆಗಿರುವುದು ನನಗೆ ಗೊತ್ತಿಲ್ಲ. ಈ ನಿಟ್ಟಿನಲ್ಲಿ ಮತ್ತೊಂದು ವರದಿ ಮುಂದಿನ ತಿಂಗಳು ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಆದರೆ ಆರ್ಟ್ ಆಫ್ ಲಿವಿಂಗ್ ವಕೀಲ ಕೇದಾರ್ ದೇಸಾಯಿ ಪ್ರಕಾರ, ಈ ಪತ್ರದ ಆಧಾರದಲ್ಲಿ ಸಂಸ್ಥೆಯು ನ್ಯಾಯಾಧಿಕರಣದ ಮುಂದೆ ಹೊಸ ಅಫಿದಾವತ್ ಸಲ್ಲಿಸಿದೆ. ಈಗಿನ ಸಮಿತಿ ತೆಗೆದುಹಾಕಿ ಹೊಸ ಸದಸ್ಯರನ್ನೊಳಗೊಂಡ ಹೊಸ ಸಮಿತಿ ರಚಿಸಲು ಅಫಿದಾವತ್ ಕೋರಿದೆ. ಸಮಿತಿ ಪತ್ರವನ್ನು ಏಕೆ ಅಲಕ್ಷಿಸಿದೆ ಎಂದು ನನಗೆ ಅಚ್ಚರಿಯಾಗಿದೆ. ಅದು ಉದ್ದೇಶಪೂರ್ವಕ ಆಗಿದೆಯೇ ಎಂದು ನಾವು ತಿಳಿಯಬಯಸಿದ್ದೇವೆ ಎಂದು ದೇಸಾಯಿ ಹೇಳಿದ್ದಾರೆ. ಇದರ ವಿಚಾರಣೆ ಆಗಸ್ಟ್ 10 ಮತ್ತು 11ರಂದು ನಡೆಯಲಿದೆ.
ಕೃಪೆ: www.firstpost.com







