ಅಂಬಾನಿ ಪತ್ನಿಗೆ ಸಿಆರ್ ಪಿಎಫ್ ಯೋಧರ ರಕ್ಷಣೆ !
ವಾಷಿಂಗ್ಟನ್ ಪೋಸ್ಟ್ ಅಚ್ಚರಿ

ವಾಷಿಂಗ್ಟನ್,ಜು.28 : ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯ ಪತ್ನಿ ನೀತಾ ಅಂಬಾನಿಗೆ ಭಾರತ ಸರಕಾರ ವಿವಿಐಪಿ ಭದ್ರತೆಯೊದಗಿಸಿರುವುದಕ್ಕೆ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ಅಚ್ಚರಿ ವ್ಯಕ್ತಪಡಿಸಿದೆ.
‘‘ಇಂಡಿಯಾ ಸೆಂಡ್ಸ್ ಇಲೈಟ್ ಕಮಾಂಡೋಸ್ ಟು ಗಾರ್ಡ್ ಬಿಲ್ಲಿಯನೇರ್ಸ್ ವೈಫ್; ಔಟ್ರೇಜ್ ಎನ್ಶೂಸ್’’ ಎಂಬ ಶೀರ್ಷಿಕೆಯಡಿ ಬರೆಯಲಾದ ವರದಿಯೊಂದರಲ್ಲಿ ಇಂತಹ ಒಂದು ಭದ್ರತೆಯನ್ನು ಅಮೇರಿಕಾ ಸರಕಾರ ಬಿಲ್ ಗೇಟ್ಸ್ ಅವರ ಪತ್ನಿ ಮೆಲಿಂಡಾ ಗೇಟ್ಸ್ ಅವರಿಗೆ ಒದಗಿಸಿದ್ದಲ್ಲಿ ಸಾರ್ವಜನಿಕರ ಆಕ್ರೋಶ ಎದುರಿಸಬೇಕಾಗಿತ್ತು ಎಂದು ಹೇಳಿದೆ.
ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಮುಖೇಶ್ ಅಂಬಾನಿಗೆ ಸರಕಾರಿ ವೆಚ್ಚದಲ್ಲಿ ಝೆಡ್ ಕೆಟಗರಿ ಭದ್ರತೆಯನ್ನು 2013 ರಿಂದಲೇಒದಗಿಸಲಾಗಿದ್ದರೂ ಅದರ ವೆಚ್ಚವನ್ನು ಅವರೇ ವಹಿಸುತ್ತಿದ್ದಾರೆ.
ಪೊಲೀಸ್ ಸಿಬ್ಬಂದಿಯ ಕೊರತೆಯೆದುರಿಸುತ್ತಿರುವ ಭಾರತದಲ್ಲಿ 10 ಹೆಚ್ಚುವರಿ ಅಧಿಕಾರಿಗಳನ್ನು ನೀತಾ ಅಂಬಾನಿಯ ಭದ್ರತೆಗೆ ನಿಯೋಜಿಸಿದ್ದುಆಕ್ಷೇಪಾರ್ಹವೇ ಸರಿ, ಎಂದು ವರದಿ ಹೇಳಿದೆ.
ನೀತಾ ಅಂಬಾನಿಗೆ ನೀಡಲಾದ ವಿವಿಐಪಿ ಭದ್ರತೆಭಾರತದಲ್ಲಿ ಸಾಕಷ್ಟು ಚರ್ಚಾ ವಿಷಯವಾಗಿದೆಯಲ್ಲದೆ ಸರಕಾರ ಇಂತಹ ವಿವಿಐಪಿಗಳಿಗಾಗಿಅನಗತ್ಯ ಖರ್ಚು ಮಾಡುತ್ತಿದೆಯೆಂದು ದೂರಲಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ತಿಳಿಸಿದೆ.
ಈ ವರದಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಟ್ವೀಟ್ ಒಂದನ್ನೂ ಉಲ್ಲೇಖಿಸಲಾಗಿದೆ. ‘‘ದೆಹಲಿಯಲ್ಲಿ ಪ್ರತಿ ದಿನ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ.ಹಲವಾರು ಮನವಿಗಳ ಹೊರತಾಗಿಯೂ ಅವರಿಗೆ ಭದ್ರತೆಯಿಲ್ಲ. ಆದರೆ (ಪ್ರಧಾನಿ ನರೇಂದ್ರ ಮೋದೀಜಿ) ತಮ್ಮ ಸ್ನೇಹಿತರಿಗೆ ಭದ್ರತೆಯೊದಗಿಸುತ್ತಿದ್ದಾರೆ’’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದರು.







