ಫಿಲಿಫ್ಪೀನ್ಸ್‌ನಲ್ಲಿ ಡ್ರಗ್‌ಮಾಫಿಯಾ ಇತಿಶ್ರೀಗೆ ಅನುಮತಿ ನೀಡಿದ ಅಧ್ಯಕ್ಷರು!
ಅಟ್ಟಾಡಿಸಿ ಕ್ರೂರವಾಗಿ ಕೊಲ್ಲುತ್ತಿರುವ ಅಲ್ಲಿನ ಜನರ ಗುಂಪು!

ಫಿಲಿಪ್ಪೀನ್ಸ್,ಜುಲೈ 28: ಫಿಲಿಪ್ಪೀನ್ಸ್‌ನಲ್ಲಿ ಮಾದಕವ್ಯಸನ ದುರಂತ ಅವಸ್ಥೆ ತಾರಕಕ್ಕೇರಿದ್ದು ಅದನ್ನು ನಿಯಂತ್ರಿಸುವುದಕ್ಕಾಗಿ ಡ್ರಗ್ ಮಾಫಿಯಾವನ್ನು ಕೊಲ್ಲಲು ಜನರಿಗೆ ದೇಶದ ಅಧ್ಯಕ್ಷರಾದ ರೋಡ್ರಿಗೊ ಡ್ಯುಟರ್ಟ್ ಅನುಮತಿ ನೀಡಿದ ವಿಪರ್ಯಾಸಕರ ಪ್ರಸಂಗ ವರದಿಯಾಗಿದೆ. ಮಾದಕವಸ್ತು ಮಾರಾಟಗಾರರನ್ನು, ಜೈಲಿಗೆ ಹಾಕಲು ಇಲ್ಲದಿದ್ದರೆ ಕೊಲ್ಲಲು ಅಧ್ಯಕ್ಷರು ಕರೆ ನೀಡಿದ್ದು ಆನಂತರ ಇದಕ್ಕೆ ಸಂಬಂಧಿಸಿದ ಕ್ರೂರ ಕೊಲೆಪಾತಕಗಳು ಅಲ್ಲಿ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.
ಹೀಗೆ ಕೊಲೆಯಾದವರ ಮೃತದೇಹಗಳು ಫಿಲಿಪ್ಪೀನ್ಸ್‌ನ ಬೀದಿಗಳಲ್ಲಿ ಅನಾಥವಾಗಿ ಬಿದ್ದಿರುವುದು ದಿನನಿತ್ಯದ ಘಟನೆಯಾಗಿ ಪರಿವರ್ತನೆಗೊಂಡಿದ್ದು ಕೆಲವು ಮೃತದೇಹದಲ್ಲಿಒಳ ಉಡುಪು ಮಾತ್ರ ಇದ್ದು ರಕ್ತದಲ್ಲಿ ಮಿಂದು ಹೋದ ಸ್ಥಿತಿಯಲ್ಲಿವೆ ಎನ್ನಲಾಗಿದೆ. ಕೆಲವರ ಮೃತದೇಹಗಳು ರಕ್ತಸಿಕ್ತವಾಗಿದ್ದು ಕೈಕಾಲುಗಳನ್ನು ಕಟ್ಟಿಹಾಕಿದ ಸ್ಥಿತಿಯಲ್ಲಿದ್ದರೆ ಇನ್ನು ಕೆಲವು ಮೃತದೇಹಗಳ ಮುಖಕ್ಕೆ ಟೇಪ್ ಅಂಟಿಸಲಾಗಿದೆ ಎಂದು ತಿಳಿದು ಬಂದಿದೆ.
ಹೀಗೆ ಮೃತರಾದ ಡ್ರಗ್‌ಮಾಫಿಯಾದ ಜನರ ಮೃತದೇಹದ ಬಳಿ ಅವರ ಕುಟುಂಬದವರು ಆಕ್ರಂದನ ಗೈಯ್ಯುತ್ತಿರುವ ಫೋಟೊಗಳು ಬಹಿರಂಗಗೊಂಡಿದ್ದು ಇವರನ್ನುಪೊಲೀಸರೋ ಅಥವಾ ಜನರೋ ಕೊಂದು ಹಾಕಿದ್ದಾರೆ ಎನ್ನಲಾಗುತ್ತಿದೆ. ಈ ಕೃತ್ಯಗಳಿಗೆ ಅಧ್ಯಕ್ಷರ ಬೆಂಬಲ ಸಿಕ್ಕಿರುವುದರಿಂದ ವಿಚಾರಣೆಯೂಇಲ್ಲದೆ ಹೆಚ್ಚಿನವರು ಮಾದಕವಸ್ತುಗಳ ಮಾಫಿಯಾ ಎನ್ನಲಾದವರು ಹತರಾಗುತ್ತಿರುವ ಹೃದಯ ವಿದ್ರಾವಕ ಘಟನೆಗಳಿಗೆ ಪಿಲಿಪ್ಪೀನ್ಸ್ ಸಾಕ್ಷಿಯಾಗುತ್ತಿದೆ. ಜುಲೈಯಿಂದ ಅಧಿಕಾರಿಗಳು ಮುನ್ನೂರಕ್ಕೂ ಅಧಿಕ ಮಾದಕವಸ್ತು ವ್ಯಾಪಾರಿಗಳನ್ನು ಕೊಂದುಎಸೆದಿದ್ದಾರೆ. ಜನರಿಗೆ ಕೂಡಾ ಮಾಫಿಯಾಗಳ ಮೇಲೆ ಕೈಯೆತ್ತುವ ಅವಕಾಶ ಒದಗಿದ್ದರಿಂದ ಮೃತರಾಗುವವರ ಸಂಖ್ಯೆ ಹೆಚ್ಚಳವಾಗಿದೆ. ಇಂತಹ ಕೊಲೆಕೃತ್ಯಗಳು ಹೆಚ್ಚುತ್ತಿರುವುದರಿಂದ ಅಧ್ಯಕ್ಷರ ವಿರುದ್ಧ ಕಟು ಆರೋಪಗಳು ಕೇಳಿ ಬಂದರೂ ಅಧ್ಯಕ್ಷ ಡ್ಯುಟರ್ಟ್ ಕ್ಯಾರೇ ಮಾಡಿಲ್ಲ. ಅವರನ್ನು ದಿ ಪನಿಷರ್ ಎಂದು ಕರೆಯಲಾಗುತ್ತಿದೆ ಎಂದುವರದಿಯಾಗಿದೆ.
ತನ್ನ ದೇಶ ಮಾದಕವಸ್ತುವಿನಿಂದ ಮುಳುಗಿಹೋಗಿದೆ ಅದನ್ನು ಇಲ್ಲದಾಗಿಸಲು ತಾನು ಏನು ಮಾಡಲಿಕ್ಕೂ ತಯಾರು ಎಂದು ಅಧ್ಯಕ್ಷರು ದೃಢವಾಗಿ ಹೇಳುತ್ತಿದ್ದಾರೆ.ಇಂತಹವರನ್ನು ದಮನಿಸುವ ಯತ್ನಗಳನ್ನು ದ್ವಿಗುಣಗೊಳಿಸುವುದು ಅಗತ್ಯವೆಂದಾದರೆ ಅಂತಹ ಕ್ರಮಗಳನ್ನುಮೂರುಪಟ್ಟು ಹೆಚ್ಚಿಸಲು ಅಧ್ಯಕ್ಷರು ಕರೆ ನೀಡಿದ್ದಾರೆ. ಕೊನೆಯ ಮಾದಕವಸ್ತು ಕೊಂಡಿ ದೇಶದಿಂದ ಮೂಲೋತ್ಪಾಟನೆಯಾಗುವವರೆಗೆ ಈ ಕ್ರಮ ಕೊನೆಗೊಳ್ಳುವುದಿಲ್ಲ ಎಂದು ಅಧ್ಯಕ್ಷರು ಹೇಳುತ್ತಿದ್ದಾರೆ. ಜುಲೈ ಒಂದರಿಂದ ಜುಲೈ 24ರವರೆಗೆ ಇಂತಹ 293 ಮಂದಿಯನ್ನು ಕೊಂದು ಹಾಕಲಾಗಿದೆ ಎಂದು ಪೊಲೀಸರ ಮಾಹಿತಿ ಹಿನ್ನೆಲೆಯಲ್ಲಿ ಮಾನವಹಕ್ಕುಗಳ ಸಂಘಟನೆಗಳು ಬಹಿರಂಪಡಿಸಿವೆ. ಕೊಲೆಯಾದವರಲ್ಲಿ ಮಾದಕವಸ್ತು ಸೇವಿಸುವವರು ಮತ್ತು ಮಾರುವವರು ಸೇರಿದ್ದಾರೆ ಎಂದು ಅವುಗಳು ತಿಳಿಸಿವೆ. ಮಾದಕವಸ್ತುವಿರುದ್ಧ ಹೋರಾಟ ರಂಗಕ್ಕಿಳಿದ ಗುಂಪುಗಳು ಕೊಂದು ಹಾಕಿರುವ ಮಾದಕವಸ್ತು ವ್ಯಾಪಾರಿಗಳ ಲೆಕ್ಕ ಇದರಲ್ಲಿ ಸೇರಿಲ್ಲ ಎನ್ನಲಾಗಿದೆ. ಈ ಗುಂಪುಗಳು ಕಾನೂನನ್ನು ಕೈಗೆತ್ತಿಕೊಂಡು ಇಂತಹ ಕಗ್ಗೊಲೆಯನ್ನು ನಡೆಸುತ್ತಿವೆ ಎಂದು ಮಾನವಹಕ್ಕು ಸಂಘಟನೆಗಳು ಹೇಳುತ್ತಿವೆ.
ತನ್ನ ಆದೇಶವನ್ನು ಜಾರಿಗೊಳಿಸುವ ವೇಳೆ ಪೊಲೀಸ್ ಅಧಿಕಾರಿಗಳು ಮಾದಕವಸ್ತು ಮಾರಾಟಗಾರರ ಮಾನವಹಕ್ಕುಗಳನ್ನು ಉಲ್ಲಂಘಿಸಿದರೆ ಕೂಡಾ ತಾನು ಕ್ಷಮಿಸುವೆ ಎಂದು ಅಧ್ಯಕ್ಷರ ನೀತಿ ಸ್ಪಷ್ಟಪಡಿಸುತ್ತಿದೆ ಎನ್ನಲಾಗಿದ್ದು ಮಾದಕವಸ್ತುಮಾರುವವರನ್ನು ಮತ್ತು ಅದನ್ನು ಸೇವಿಸುವವರನ್ನುಕ್ರೂರವಾಗಿ ಕೊಲ್ಲಲು ಜನರಿಗೆ ಅಧ್ಯಕ್ಷರು ಕರೆ ನೀಡಿದ ಬಳಿಕ ಈ ತಿಂಗಳಲ್ಲಿ ಸುಮಾರು 60,000 ಫಿಲಿಪ್ಪಿನೊ ಮಾದಕವಸ್ತು ವ್ಯಸನಿಗಳು ಮತ್ತು ಮಾಟರಗಾರರು ಸರಕಾರಕ್ಕೆಶರಣಾಗಿದ್ದಾರೆಂದು ವರದಿತಿಳಿಸಿದೆ. ಅಧ್ಯಕ್ಷರು ಅಧಿಕಾರಕ್ಕೆ ಬಂದ ಮೇಲೆ 110 ಮಂದಿಯನ್ನು ಕೊಂದಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಇನ್ನೂರಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಕೊಂದಿದ್ದಾರೆಂದುಪ್ರಾದೇಶಿಕ ಮಾಧ್ಯಮಗಳು ವರದಿಮಾಡಿವೆ.







