ಇನ್ನು ಬರಲಿದೆ ಜಿರಳೆಯ ಹಾಲು

ಜಿರಳೆಯ ಹಾಲಿನಲ್ಲಿ ಮಾಡಿದ ಕುಕೀಸ್ ತಿನ್ನುವ ಕಾಲ ಬರಲಿದೆಯೆ? ಜಿರಳೆಯ ಹಾಲು ಮಾನವ ಸೇವನೆಗೆ ಉತ್ತಮ ಆಹಾರ ಪರ್ಯಾಯ ಎಂದು ಸಂಶೋಧಕರು ಹೇಳಿದ್ದಾರೆ. ಫೆಸಿಫಿಕ್ ಬೀಟಲ್ ಜಿರಳೆ ತನ್ನ ಮರಿಗಳಿಗೆ ಕುಡಿಸುವ ಹಾಲು ಪ್ರೊಟೀನ್, ಕೊಬ್ಬು ಮತ್ತು ಸಕ್ಕರೆಯಿಂದ ಶ್ರೀಮಂತವಾಗಿದೆ. ಆದರೆ ಅದು ಮುಂದಿನ ಡೈರಿ ವಿಭಾಗದಲ್ಲಿ ಬರಲಿದೆ ಎಂದು ಈಗಲೇ ಹುಡುಕುವುದು ಸಾಧ್ಯವಿಲ್ಲ.
"ಜಿರಳೆಯಿಂದ ನೇರವಾಗಿ ತೆಗೆದ ಹಾಲು ನಿಜವಾದ ಹಾಲಲ್ಲ. ಜಿರಳೆಯಲ್ಲಿರುವ ಪ್ರೊಟೀನ್ ಹರಳುಗಳು ಅದರ ಮರಿಗಳಿಗೆ ಆಹಾರ. ಅದು ಮರಿಗಳ ಬೆಳವಣಿಗೆಗೆ ಅತೀ ಮುಖ್ಯ" ಎಂದು ಅಟ್ಲಾಂಟ ಸಂಸ್ಥೆಯ ಅದ್ಯಯನಕಾರರು ಹೇಳಿದ್ದಾರೆ. ಹರಳುಗಳಲ್ಲಿ ಅದೇ ಗಾತ್ರದ ಎತ್ತಿನ ಹಾಲಿಗೆ ಹೋಲಿಸಿದರೆ ಮೂರುಪಟ್ಟು ಹೆಚ್ಚು ಶಕ್ತಿಯಿದೆ. ಮತ್ತು ದನದ ಹಾಲಿಗೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚಿದೆ.
ಆದರೆ ಈ ಹಾಲು ಯಾವುದರಿಂದ ಮಾಡಿದೆ ಎನ್ನುವುದೇ ವಿಜ್ಞಾನಿಗಳ ಕುತೂಹಲ. ಡಿಪ್ಲೋಪೆಟ್ರಾ ಪಂಕ್ಟಾಟ ಜಿರಳೆ ಪ್ರಭೇದವನ್ನು ಅಧ್ಯಯನ ಮಾಡಿದ ಸಂಶೋಧಕರು ತಾಯಿಯ ದೇಹದಲ್ಲಿ ಬೆಳೆದ ಜೀವಂತ ಮರಿಗಳನ್ನು ಪಡೆದಿದ್ದಾರೆ. ಸಾಮಾನ್ಯವಾಗಿ ಜಿರಳೆಗಳು ಮೊಟ್ಟೆ ಇಟ್ಟೇ ಮರಿ ಮಾಡುತ್ತವೆ. ಉಳಿದ ವಿವಿಪಾರಸ್ ಜಿರಳೆಗಳಂತೆ ಡಿಪ್ಲೋಪೆಟ್ರಾಗಳೂ ಕೂಡ ಇತರ ಗರ್ಭಾಶಯದಂತೆಯೇ ಪ್ರೊಟೀನ್ ಶ್ರೀಮಂತ ದ್ರವವನ್ನು ಮರಿಗಳಿಗೆ ನೀಡಿವೆ. ಗರ್ಭಕ್ಕೆ ಈ ದ್ರವ ಹೋದ ಕೂಡಲೇ ಪ್ರೊಟೀನ್ ಹರಳುಗಳು ಅಭಿವೃದ್ಧಿ ಹೊಂದುತ್ತವೆ. ಈ ಹರಳುಗಳನ್ನು ಹೊರ ತೆಗೆದ ವಿಜ್ಞಾನಿಗಳು ಅದರ ಬಗ್ಗೆ ತಿಳಿದುಕೊಂಡಿದ್ದಾರೆ. ಪರೀಕ್ಷೆಗಳನಂತರ ಅದು ಪೂರ್ಣಪ್ರಮಾಣದ ಆಹಾರ ಎಂದು ತಿಳಿದುಬಂದಿದೆ. "ಆ ಹರಳಿನಲ್ಲಿ ಪ್ರೊಟೀನ್, ಅಗತ್ಯ ಅಮಿನೋ ಆಸಿಡ್, ಲಿಪಿಡ್ ಮತ್ತು ಸಕ್ಕರೆ ಅಂಶಗಳಿದ್ದವು" ಎನ್ನುತ್ತಾರೆ ಅಧ್ಯಯನಕಾರರು. ಈ ಹರಳುಗಳು ಮಾನವ ಸೇವನೆಗೆ ಸಾಧ್ಯವಾಗುವ ಪ್ರೊಟೀನುಗಳನ್ನು ಹೊಂದಿರುವ ಸಾಧ್ಯತೆಯಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಜಿರಳೆ ಹಾಲು ಪಡೆಯುವುದು ಹೇಗೆ?
ಈಗ ಹರಳುಗಳನ್ನು ಜಿರಳೆಯ ಗರ್ಭದಿಂದ ತೆಗೆಯಲಾಗುತ್ತಿದೆ. ಆದರೆ ಜಗತ್ತಿನ ಜನಸಂಖ್ಯೆಗೆ ಆಹಾರವಾಗಬೇಕಾದರೆ ಇದು ಸುಲಭದ ದಾರಿಯಲ್ಲ. ಹೀಗಾಗಿ ಅಧ್ಯಯನಕಾರರು ಈಗ ಈ ಆಹಾರ ಸಿದ್ಧವಾಗುವ ಜೈವಿಕ ಮತ್ತು ರಾಸಾಯನಿಕ ಪ್ರಕ್ರಿಯೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಹಾಗೆ ಸರಳವಾಗಿ ದೊಡ್ಡ ಪ್ರಮಾಣದಲ್ಲಿ ಈ ಹಾಲನ್ನು ಉತ್ಪಾದಿಸುವ ದಾರಿಯನ್ನು ಹುಡುಕುತ್ತಿದ್ದೇವೆ ಎಂದು ಅಧ್ಯಯನಕಾರರು ಹೇಳಿದ್ದಾರೆ. ಅಣು ಸ್ಫೋಟದಲ್ಲೂ ಬದುಕುಳಿಯುವ ಸಾಮರ್ಥ್ಯವಿರುವ ಜಿರಳೆ ಅಂತಿಮವಾಗಿ ಜಗತ್ತಿಗೆ ಸೂಪರ್ ಆಹಾರವನ್ನು ಕೊಡಲೂಬಹುದು ಎನ್ನುವ ಭರವಸೆ ವಿಜ್ಞಾನಿಗಳಲ್ಲಿದೆ.
ಕೃಪೆ: edition.cnn.com







