ಭಟ್ಕಳ: ಸಮುದ್ರದಲ್ಲಿ ಈಜಲು ತೆರಳಿದ ವಿದ್ಯಾರ್ಥಿ ಮೃತ್ಯು

ಭಟ್ಕಳ, ಜು.28: ಸಮುದ್ರಕ್ಕೆ ಈಜಲು ತೆರಳಿದ ನಾಲ್ವರು ಬಾಲಕ ಪೈಕಿ ಓರ್ವ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ಇಲ್ಲಿನ ಜಾಲಿಕೋಡಿ ಬೀಚ್‌ನಲ್ಲಿ ಜರಗಿದೆ.
ಮೃತ ಬಾಲಕನನ್ನು ಜಾಲಿಕೋಡಿ ಸರಕಾರಿ ಪ್ರಾಥಮಿಕ ಶಾಲೆಯ 7ನೆ ತರಗತಿ ವಿದ್ಯಾರ್ಥಿ ಗೋವರ್ಧನ್ ಮಂಜುನಾಥ್ ನಾಯ್ಕ (13) ಎಂದು ಗುರುತಿಸಲಾಗಿದೆ.
ನಾಲ್ಕು ಜನ ಗುರುವಾರ ಮಾರಿ ಮೂರ್ತಿ ವಿಸರ್ಜನೆ ಮಾಡುವ ಸ್ಥಳದಲ್ಲಿ ಈಜಲು ಹೋಗಿದ್ದು ಮಾರಿ ವಿಸರ್ಜನೆಗೆ ಅರ್ದಗಂಟೆ ಮೊದಲು ಈ ದುರ್ಘಟನೆ ಜರಗಿದೆ. ನಾಲ್ವರಲ್ಲಿ ಮೂವರನ್ನು ರಕ್ಷಿಸಲಾಗಿದ್ದು ಅಸ್ವಸ್ಥಗೊಂಡ ಗೋವರ್ಧನ್ ಆಸ್ಪತ್ರೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
Next Story





