ಮೂಡುಬಿದಿರೆ ಪುರಸಭೆಯ ಸ್ವಾಗತ ಗೋಪುರ ಲೋಕಾರ್ಪಣೆ
.jpg)
ಮೂಡುಬಿದಿರೆ, ಜು.28: 2016-17ನೆ ಸಾಲಿನ ಪುರಸಭಾ ನಿಧಿಯಿಂದ ಸುಮಾರು 13 ಲಕ್ಷ ರೂ.ವೆಚ್ಚದಲ್ಲಿ ವಿದ್ಯಾಗಿರಿ, ಬಿರಾವು ಹಾಗೂ ಅಲಂಗಾರಿನಲ್ಲಿ ನಿರ್ಮಿಸಲಾದ ಸ್ವಾಗತ ಗೋಪುರವನ್ನು ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಗುರುವಾರ ಉದ್ಘಾಟಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಿಭಜಿತ ದ.ಕ ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರ ಜೈನಕಾಶಿ ಮೂಡುಬಿದಿರೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಮಂಗಳೂರು- ಮೂಡುಬಿದಿರೆ ಹೆದ್ದಾರಿಯ ವಿದ್ಯಾಗಿರಿ, ಬಂಟ್ವಾಳ-ಮೂಡುಬಿದಿರೆ ರಾಜ್ಯ ಹೆದ್ದಾರಿಯ ಬಿರಾವು, ಕಾರ್ಕಳ-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಅಲಂಗಾರಿನಲ್ಲಿ ಸ್ವಾಗತಗೋಪುರ ನಿರ್ಮಿಸಲಾಗಿದೆ. ಇದೊಂದು ಉತ್ತಮ ಯೋಜನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೂಡುಬಿದಿರೆ ಪುರಸಭಾ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಪುರಸಭಾ ಸದಸ್ಯರಾದ ರತ್ನಾಕರ ದೇವಾಡಿಗ, ಪಿ.ಕೆ ಥೋಮಸ್, ಬಾಹುಬಲಿ ಪ್ರಸಾದ್, ದಿನೇಶ್, ನಾಗರಾಜ್ ಪೂಜಾರಿ, ಎಲಿಜಾ ಮಿನೇಜಸ್, ಸುಪ್ರಿಯಾ ಶೆಟ್ಟಿ,ಹರಿಣಾಕ್ಷಿ, ಕರೀಂ, ಪ್ರಸಾದ್, ವಿನೋದ್ ಸೆರಾವೋ, ಮೂಡಾ ಸದಸ್ಯ ಸುರೇಶ್ ಪ್ರು, ಪುರಸಬಾ ಮುಖ್ಯಾಧಿಕಾರಿ ಶೀನ ನಾಯ್ಕಾ, ಆರೋಗ್ಯ ಅಧಿಕಾರಿ ಇಂದು, ಪರಿಸರ ಅಧಿಕಾರಿ ಶಿಲ್ಪಾ, ಕಂದಾಯ ಅಧಿಕಾರಿ ಧನಂಜ್, ಸಿಬ್ಬಂದಿ ಸುಧೀಶ್ ಹೆಗ್ಡೆ, ಕಾಂಗ್ರೆಸ್ ಮುಖಂಡ ಚಂದ್ರಹಾಸ್ ಸನಿಲ್, ಅನಿಲ್ ಲೋಬೋ, ಗುತ್ತಿಗೆದಾರ ಅನಂತಕೃಷ್ಣ ಶೆಟ್ಟಿ ಮೊದಲಾದವರಿದ್ದರು.







