ಜಲ ಪ್ರಳಯದ ಎಫೆಕ್್ಟ : 1.50 ಕೋ.ರೂ. ನಷ್ಟ

ಶಿವಮೊಗ್ಗ, ಜು. 28: ನಗರದ ಮೂಲಕ ಹಾದು ಹೋಗಿರುವ ತುಂಗಾ ಎಡದಂಡೆ ನಾಲೆಯ ಏರಿ ಕುಸಿತದಿಂದ ಬುಧವಾರ ಬೆಳಗ್ಗೆ ಹಳೇ ಮಂಡ್ಲಿ ಸುತ್ತಮುತ್ತಲಿನ ಬಡಾವಣೆಗಳ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮದಿಂದ ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಧಕ್ಕೆ ಉಂಟಾಗಿದೆ. ಹಲವು ಬಡ ಕುಟುಂಬಗಳು ಸೂರು ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ. ಈ ನಡುವೆ ಜಿಲ್ಲಾಡಳಿತದ ಸೂಚನೆಯಂತೆ ತಾಲೂಕು ಆಡಳಿತವು ಪ್ರಾಥಮಿಕ ಸಮೀಕ್ಷೆ ಕಾರ್ಯ ಆರಂಭಿಸಿದ್ದು, ಸಮೀಕ್ಷೆಯಲ್ಲಿ ಸುಮಾರು 1.5 ಕೋಟಿ ರೂ. ವೌಲ್ಯದ ಆಸ್ತಿಪಾಸ್ತಿ ನಷ್ಟ ಉಂಟಾಗಿರುವ ಅಂದಾಜು ಮಾಡಲಾಗಿದೆ. ಅಧಿಕಾರಿಗಳು ಸಮೀಕ್ಷಾ ಕಾರ್ಯವನ್ನು ಮುಂದುವರಿಸಿದ್ದು, ನಷ್ಟದ ಪ್ರಮಾಣ ಮತ್ತಷ್ಟು ಏರುವ ಸಾಧ್ಯತೆಯಿದೆ ಎಂದು ತಾಲೂಕು ಆಡಳಿತದ ಉನ್ನತ ಮೂಲಗಳು ಮಾಹಿತಿ ನೀಡಿವೆ. ಜಲಾವೃತಕ್ಕೀಡಾದ ಹಳೇ ಮಂಡ್ಲಿ, ಎನ್.ಟಿ. ರಸ್ತೆ, ಎಡ-ಬಲದ ಏರಿಯಾಗಳು, ಕುರುಬರಪಾಳ್ಯ, ನ್ಯೂ ಮಂಡ್ಲಿಯ ಅರ್ಧ ಭಾಗದ ಪ್ರದೇಶಗಳಲ್ಲಿ ಸುಮಾರು 12 ಮನೆಗಳು ಸಂಪೂರ್ಣವಾಗಿ ಕುಸಿದು ಬಿದ್ದಿವೆ. ಅಲ್ಲದೆ, ಸುಮಾರು 56 ಮನೆಗಳು ಭಾಗಶಃ ಹಾನಿಗೀಡಾಗಿವೆ. ಕೆಲ ಮನೆಗಳು ಯಾವಾಗ ಬೇಕಾದರೂ ಬೀಳುವ ಸ್ಥಿತಿಯಲ್ಲಿವೆ. ಇಂತಹ ಮನೆಗಳಲ್ಲಿ ವಾಸಿಸದಂತೆ ಸಂಬಂಧಿಸಿದ ನಿವಾಸಿಗಳಿಗೆ ಅಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ. ಇತರ ಏರಿಯಾಗಳಿಗೆ ಹೋಲಿಕೆ ಮಾಡಿದರೆ ಹಳೇ ಮಂಡ್ಲಿ ಪ್ರದೇಶದಲ್ಲಿ ಭಾರೀ ಪ್ರಮಾಣದ ನಷ್ಟ ಉಂಟಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳು ಹಾನಿಗೀಡಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಮೀಕ್ಷಾ ಕಾರ್ಯ ಮುಂದುವರಿದಿದ್ದು, ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಆತಂಕ: ಹಳೇ ಮಂಡ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಸಾಕಷ್ಟು ಮನೆಗಳು ಮಣ್ಣಿನಿಂದ ಕಟ್ಟಿದವುಗಳಾಗಿವೆ. ಭಾರೀ ಪ್ರಮಾಣದ ನೀರು ಮನೆಗಳಿಗೆ ನುಗ್ಗಿದ್ದ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳು ಹಾನಿಗೀಡಾಗುವಂತಾಗಿದೆ. ಇನ್ನೂ ಹಲವು ಮನೆಗಳು ಕುಸಿದು ಬೀಳುವ ಸ್ಥಿತಿಯಲ್ಲಿವೆ. ಇದರಿಂದ ಸಂಬಂಧಿಸಿದ ಮನೆಯವರು ದಿಕ್ಕು ಕಾಣದೆ ಕಂಗಲಾಗಿದ್ದು, ಆತಂಕಿತರಾಗಿದ್ದಾರೆ. ಸಂಚಾರ ಪುನಾರಂಭ: ಶಿವಮೊಗ್ಗ-ತೀರ್ಥಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ ಎನ್.ಟಿ. ರಸ್ತೆಯಲ್ಲಿ ಬುಧವಾರ ನೀರು ಹರಿಯುತ್ತಿದ್ದ ಕಾರಣ ರಸ್ತೆಯಲ್ಲಿ ವಾಹನ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿತ್ತು. ನೀರಿನ ಹರಿವು ಕಡಿಮೆಯಾಗಿ ಪರಿಸ್ಥಿತಿ ತಹಬದಿಗೆ ಬರುತ್ತಿದ್ದಂತೆ ರಸ್ತೆಯಲ್ಲಿ ವಾಹನ ಸಂಚಾರ ಪುನಾರಂಭಗೊಂಡಿದೆ.
ಜಿಲ್ಲಾಧಿಕಾರಿಯಿಂದ ಸಕಲ ನೆರವಿನ ಭರವಸೆ
ಜಲಾವೃತಕ್ಕೀಡಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪಸೇರಿದಂತೆ ಅಧಿಕಾರಿಗಳು ಗುರುವಾರ ಭೇಟಿ ನಿಡಿ ಪರಿಶೀಲನೆ ನಡೆಸಿ, ಸಾರ್ವಜನಿಕರ ಅಹವಾಲು ಆಲಿಸಿದರು. ಸಂತ್ರಸ್ತರಿಗೆ ಸ
ಕಾರದಿಂದ ದೊರಕಬಹುದಾದ ಸಕಲ ನೆರವು ಕಲ್ಪಿಸುವ ಭರವಸೆಯನ್ನು ಜಿಲ್ಲಾಧಿಕಾರಿಯವರು ನೀಡಿದ್ದಾರೆ. ಜಲಾವೃತ ಪ್ರದೇಶದಲ್ಲಿ ತಹಶೀಲ್ದಾರ್ ರಾತ್ರಿ ವಾಸ್ತವ್ಯ
ಬುಧವಾರ ಬೆಳಗ್ಗೆ ಹಳೇ ಮಂಡ್ಲಿ ಸುತ್ತಮುತ್ತಲಿನ ಬಡಾವಣೆಗಳು ಜಲಾವೃತವಾಗುತ್ತಿದ್ದಂತೆ ಜಿಲ್ಲಾಡ ಳಿತವು ಸಮರೋಪಾದಿಯ ಕಾರ್ಯಾಚರಣೆ ನಡೆಸಿ ಸಂಕಷ್ಟದಲ್ಲಿದ್ದ ಗ್ರಾಮಸ್ಥರಿಗೆ ನೆರವಾಗುವ ಕೆಲಸ ಮಾಡಿತು. ಹಾಗೆಯೇ ರಾತ್ರಿ ವೇಳೆ ಕೂಡ ಅಧಿಕಾರಿಗಳು ಜಲಾವೃತಕ್ಕೀಡಾದ ಬಡಾ ವಣೆಗಳಲ್ಲಿಯೇ ಬೀಡುಬಿಟ್ಟು ಪರಿಸ್ಥಿತಿಯ ಅವ ಲೋಕನ ನಡೆಸಿದ್ದಾರೆ. ನಿವಾಸಿಗಳ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ತಹಶೀಲ್ದಾರ್ ಸತ್ಯನಾರಾಯಣ ಮತ್ತು ಸಿಬ್ಬಂದಿ ರಾತ್ರಿಯಿಡೀ ಹಳೇ ಮಂಡ್ಲಿ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಸಂಚರಿಸಿ ಗ್ರಾಮಸ್ಥರ ಅಹವಾಲು ಆಲಿಸುವ ಕೆಲಸ ನಡೆಸಿದ್ದಾರೆ. ಸಂತ್ರಸ್ತರಿಗಾಗಿ ತೆರೆಯಲಾಗಿದ್ದ ಎರಡು ಗಂಜಿ ಕೇಂದ್ರ, ತಾತ್ಕಾಲಿಕ ಆಸ್ಪತ್ರೆಗೆ ನಿರಂತರವಾಗಿ ಭೇಟಿನೀಡಿ ಪರಿಶೀಲನೆ ನಡೆಸುತ್ತಿದ್ದರು. ಗ್ರಾಮಸ್ಥರಿಗೆ ಸಮರ್ಪಕವಾಗಿ ಊಟೋಪಚಾರ, ಔಷಧ ಇತರ ಮೂಲಸೌಕರ್ಯಗಳು ಲಭ್ಯವಾಗುವಂತೆ ವ್ಯವಸ್ಥೆ ಕೈಗೊಂಡಿದ್ದರು. ರಾತ್ರಿಯಿಡೀ ತಾಲೂಕು ಆಡಳಿ ತದ ಅಧಿಕಾರಿ ವರ್ಗ ನಿದ್ರೆಯಿಲ್ಲದೆ ಸಂತ್ರಸ್ತರಿಗೆ ಸಹಾಯಹಸ್ತ ಚಾಚುವ ಕೆಲಸ ಮಾಡಿದೆ.







