ಅಕ್ರಮ ಮರಳು ಸಾಗಾಟ: ಲಾರಿಗಳು ವಶಕ್ಕೆ
ಮಂಗಳೂರು,ಜು.28: ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸ್ ನಿರೀಕ್ಷಕರು ಠಾಣಾ ಸರಹದ್ದಿನಲ್ಲಿ ಗಸ್ತುನಿರತರಾಗಿದ್ದ ವೇಳೆ ಕಂಕನಾಡಿ ಗ್ರಾಮದ ಉಜ್ಜೋಡಿ ಪೆಟ್ರೋಲ್ ಬಂಕ್ ಸಮೀಪ ಅಕ್ರಮ ಮರಳು ಸಾಗಾಟ ಲಾರಿಗಳನ್ನು ಪತ್ತೆಹಚ್ಚಿದ್ದಾರೆ.
ರಾ.ಹೆ. 66 ರ ಬದಿಯಲ್ಲಿ ಪಂಪ್‌ವೆಲ್‌ನಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ಎರಡು ಲಾರಿಗಳನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಎರಡು ಲಾರಿಗಳಲ್ಲಿ ಅಕ್ರಮ ಮರಳು ಸಾಗಾಟ ಪತ್ತೆಯಾಗಿದೆ.
ಎರಡೂ ಲಾರಿಗಳು ಇಬ್ರಾಹೀಂ ಪಿ.ಪಿ. ಎಂಬವರಿಗೆ ಸೇರಿದಾಗಿದ್ದು ಲಾರಿಯನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
Next Story





