ವಿಸ್ತರಣೆ ಮಸೂದೆ ಲೋಕಸಭೆಯಲ್ಲಿ ಮಂಜೂರು
ಎನ್‌ಜಿಒಗಳ ಆಸ್ತಿ ಘೋಷಣೆ ಗಡುವು
ಹೊಸದಿಲ್ಲಿ, ಜು.28: ಕೇಂದ್ರ ಸರಕಾರದ 50 ಲಕ್ಷ ನೌಕರರು, ಎನ್‌ಜಿಒಗಳ ನಿರ್ದೇಶಕರು ಹಾಗೂ ವಿಶ್ವಸ್ಥರು ಆಸ್ತಿ ಘೋಷಣೆ ಮಾಡಬೇಕಾದ ಜು.31ರ ಗಡುವನ್ನು ವಿಸ್ತರಿಸಲು ಲೋಕಸಭೆಯು ಮಂಗಳವಾರ ಮಸೂದೆಯೊಂದನ್ನು ಸದ್ದಿಲ್ಲದೆ ಮಂಜೂರು ಮಾಡಿದೆ.
ಲೋಕಪಾಲ ಹಾಗೂ ಲೋಕಾಯುಕ್ತ ಕಾಯ್ದೆಯ ಸೆ.44ರ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ, ಯಾವುದೇ ಚರ್ಚೆ ನಡೆಸದೆ ಧ್ವನಿ ಮತದಿಂದ ಅಂಗೀಕರಿಸಲಾಗಿದೆ. ಕೇವಲ ಒಬ್ಬರು ಸಿಪಿಎಂ ಸದಸ್ಯ ಮಾತ್ರ ಅದಕ್ಕೆ ವಿರೋಧ ಸೂಚಿಸಿದ್ದರು. ತಿದ್ದುಪಡಿ ಮಂಜೂರು ಮಾಡಲು ಅವಸರ ಯಾಕೆಂದು ಪ್ರಶ್ನಿಸಿದ್ದ ಎಡಪಕ್ಷ, ಅದು ಭ್ರಷ್ಟಾಚಾರ ವಿರೋಧಿ ಕಾಯ್ದೆಯನ್ನು ದುರ್ಬಲಗೊಳಿಸಿದಂತಾಗಬಹುದೆಂದು ಚಿಂತೆ ವ್ಯಕ್ತಪಡಿಸಿತ್ತು.
ಮಸೂದೆಯನ್ನು ಮಂಜೂರಾತಿಗಾಗಿ ರಾಜ್ಯಸಭೆಗೆ ಹೋಗಲಿದೆ. ಅದನ್ನು ಸಂಸದೀಯ ಸಮಿತಿಯೊಂದು ಪರಾಮರ್ಶಿಸಲಿದೆ. ಸಮಿತಿಯು ಮುಂದಿನ ಸಂಸತ್ ಅಧಿವೇಶನದ ವೇಳೆಗಷ್ಟೇ ತನ್ನ ವರದಿ ನೀಡುವ ನಿರೀಕ್ಷೆಯಿದೆ.
Next Story





