ಮುಡಿಪು: ಯೋಗ ಸರ್ಟಿಫಿಕೇಟ್ ಕೋರ್ಸ್ ಸಮಾರೋಪ ಕಾರ್ಯಕ್ರಮ

ಕೊಣಾಜೆ, ಜು.28: ಮುಡಿಪುವಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಮತ್ತು ರೇಂಜರ್ಸ್/ರೋವರ್ಸ್ ಘಟಕದ ಜಂಟಿ ಆಶ್ರಯದಲ್ಲಿ ನಡೆದ ಬೇಸಿಕ್ ಯೋಗ ಸರ್ಟಿಫಿಕೇಟ್ ಕೋರ್ಸ್‌ನ ಸಮಾರೋಪ ಕಾರ್ಯಕ್ರಮ ಬುಧವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಷ್ಪಕ್ ಅಹ್ಮದ್ ಎ. ಮ್ಯಾಗೇರಿ, ಶಿಬಿರಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಯೋಗ ಮತ್ತು ಪ್ರಾಣಾಯಾಮದ ಮಹತ್ವ, ಉಪಯೋಗ ಹಾಗೂ ಅದರ ಮೂಲಕ ತಮ್ಮ ಜೀವನ ಶೈಲಿ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಬಲ್ಲುದು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಗಿರಿಧರ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಂಯೋಜಕಿ ಶುಭ ಕೆ.ಎಚ್. ಸ್ವಾಗತಿಸಿದರು. ಆವಿಷ್ಕಾರ ಯೋಗ ಸಂಸ್ಥೆಯ ಸಂಚಾಲಕಕುಶಾಲಪ್ಪ ಗೌಡ ಮತ್ತು ಗಿರಿಯಪ್ಪ ಉಪಸ್ಥಿತರಿದ್ಧರು.
ವಿನುತಾ ಪ್ರಾರ್ಥಿಸಿದರು. ಲೋಕೇಶ್ ರೈ ವಂದಿಸಿದರು. ಕುಶಿತ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.





