ಜು. 31ರಂದು ನೂತನ ’ಜಾಗೋ ಬಿಲ್ಲವಾಸ್’ ಸಂಘಟನೆ ಉದ್ಘಾಟನೆ
ಬಂಟ್ವಾಳ, ಜು. 28: ತಾಲೂಕು ಬಿಲ್ಲವ ಸಮಾಜಸೇವಾ ಸಂಘದ ನೇತೃತ್ವದಲ್ಲಿ ’ಜಾಗೋ ಬಿಲ್ಲವಾಸ್’ ಎಂಬ ನೂತನ ಬಿಲ್ಲವ ಯುವ ಬ್ರಿಗೇಡ್‌ನ ಸಂಸ್ಥೆಯೊಂದು ಅಸ್ಥಿತ್ವಕ್ಕೆ ಬರಲಿದ್ದು ಜು. 31ರಂದು ಬಿ.ಸಿ.ರೋಡಿನ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಬಾ ವನದಲ್ಲಿ ಇದರ ಅಧಿಕೃತ ಉದ್ಘಾಟನೆ ನಡೆಯಲಿದೆ.
ತಾಲೂಕಿನ 84 ಗ್ರಾಮಗಳಿಂದಲೂ ತಲಾ 10 ಸೃಜನಶೀಲ ಯುವಕರನ್ನು ಇದಕ್ಕೆ ಅಹ್ವಾನಿಸಲಾಗಿದ್ದು ಬಲ್ಲವ ಯುವಕರಲ್ಲಿ ಹೊಸ ರಾಜಕೀಯ ನಾಯಕತ್ವದ ಕಲ್ಪನೆ, ಹೊಸ ಸಾಮಾಜಿಕ ಬದಲಾವಣೆಯ ಅನಿವಾರ್ಯತೆ, ಹೊಸ ದಾರ್ಮಿಕ ಚಿಂತನೆಯ ಮಹತ್ವದ ಕುರಿತು ಚಿಂತನ ಮಂತನ ನಡೆಯಲಿದೆ ಎಂದು ಬಿಲ್ಲವ ಸಮಾಜ ಸೇವ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಪ್ರ.ಕಾರ್ಯದರ್ಶಿ ಬೇಬಿ ಕುಂದರ್ ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ತಾಲೂಕಿನ ಬಿಲ್ಲವ ಸಮಾಜದ ಪ್ರಮುಖರು, ಜನಪ್ರತಿನಿಧಿಗಳು, ಸಂಘದ ಪದಾದಿಕಾರಿಗಳು, ಸದಸ್ಯರು ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಯುವಕ, ಯುವತಿಯರು ಪಾಲ್ಗೊಳ್ಳುವಂತೆ ಅವರು ಪ್ರಕಟನೆಯಲ್ಲಿ ಕೋರಿದ್ದು ರಾಷ್ಟ್ರೀಯ ಬಿಲ್ಲವರ ಮಹಾ ಮಂಡಳದ ವಕ್ತಾರ ಹರಿಕೃಷ್ಣ ಬಂಟ್ವಾಳ ಮಾರ್ಗದರ್ಶನ ಬಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.





