ಡೆಂಗ್ ಜ್ವರಕ್ಕೆ ಇಬ್ಬರು ಬಲಿ

ಮಂಜೇಶ್ವರ, ಜು.28: ಡೆಂಗ್ ಜ್ವರ ಪೀಡಿತರಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಪಳ್ಳತ್ತಡ್ಕ ಸಮೀಪದ ಕೋರಿಕ್ಕಾರು ನಿವಾಸಿ ಇಬ್ರಾಹೀಂ (60) ಬುಧವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಿಡ್ನಿ ಸಂಬಂಧ ರೋಗದಿಂದ ಬಳಲುತ್ತಿದ್ದ ಇಬ್ರಾಹೀಂರಿಗೆ 10 ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಬದಿಯಡ್ಕದ ಖಾಸಗಿ ಆಸ್ಪತ್ರೆಯಲ್ಲಿ ಔಷಧ ಪಡೆದು, ರಕ್ತ ತಪಾಸಣೆ ನಡೆಸಿದಾಗ ಡೆಂಗ್ ಇರುವುದು ಪತ್ತೆಯಾಯಿತು. ಕೂಡಲೇ ಮಂಗಳೂರು ಫಾದರ್‌ಮುಲ್ಲರ್‌ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಇನ್ನೊಂದು ಪ್ರಕರಣದಲ್ಲಿ ಸುಳ್ಯದ ಕೊಡಿಯಾಲಬೈಲು ನಿವಾಸಿ ಕೆ. ಮಲ್ಲ ಎಂಬ ವರು ಡೆಂಗ್ ಜ್ವರದಿಂದ ಮೃತಪಟ್ಟಿದ್ದಾರೆ. ಇವರಿಗೆ 63 ವರ್ಷ ವಯಸ್ಸಾಗಿತ್ತು. ಮಲ್ಲರವರು ಸುಳ್ಯ ತಾಲೂಕು ಕಚೆೇರಿ ಚುನಾವಣಾ ಶಾಖೆಯ ನಿವೃತ್ತ ಉದ್ಯೋಗಿ.
Next Story





