ಮಹಾದಾಯಿ: ಜಯ ಕರ್ನಾಟಕದಿಂದ ಧರಣಿ

ಉಡುಪಿ, ಜು.28: ಮಹಾದಾಯಿ ನ್ಯಾಯಾಧೀಕರಣ ರಾಜ್ಯ ಸರಕಾರದ ಮಧ್ಯಾಂತರ ಅರ್ಜಿಯನ್ನು ತಿರಸ್ಕರಿಸಿ ರುವುದನ್ನು ವಿರೋಧಿಸಿ ಜಯ ಕರ್ನಾಟಕ ಉಡುಪಿ ಜಿಲ್ಲಾ ಘಟಕ ಗುರುವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಧರಣಿ ನಡೆಸಿತು.
ಜಯ ಕರ್ನಾಟಕ ಜಿಲ್ಲಾಧ್ಯಕ್ಷ ದಿವಾಕರ ಶೆಟ್ಟಿ ಮಾತನಾಡಿ, ಮಹಾದಾಯಿ ವಿಚಾರದಲ್ಲಿ ಜನಪ್ರತಿ ನಿಧಿಗಳಿಗೆ ಇಚ್ಛಾಶಕ್ತಿ ಇಲ್ಲವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ಇದಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ಮುಂದೆ ರಾಜಕಾರಣಿಗಳನ್ನು ನಂಬದೆ ರಾಜ್ಯದ ಜನತೆಯೇ ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೋರಾಟ ಮಾಡಬೇಕಾಗಿದೆ ಎಂದರು.
ಹಿರಿಯ ಮುಖಂಡ ಎಸ್.ಎಸ್. ತೋನ್ಸೆ ಮಾತನಾಡಿ, ರಾಜ್ಯ ಸಂಸದರು ವೌನವಾಗಿದ್ದಾರೆ. ನ್ಯಾಯಾಧೀಕರಣ ದಿಂದ ರಾಜ್ಯಕ್ಕೆ ನಿರಂತರ ಅನ್ಯಾಯ ಆಗುತ್ತಿದೆ. ಆದುದರಿಂದ ಪ್ರಧಾನಿಗೆ ಒತ್ತಡ ಹಾಕಿ ಅವರ ಮಧ್ಯಸ್ಥಿಕೆಯಲ್ಲಿ ಈ ಸಮಸ್ಯೆ ಪರಿಹರಿಸಿಕೊಳ್ಳ್ಳಬೇಕಾಗಿದೆ. ರಾಜಕಾರಣಿಗಳು ವೌನ ಮುರಿದು ಪಕ್ಷಾತೀತವಾಗಿ ರಾಜ್ಯ ಹಿತದೃಷ್ಟಿ ಯಿಂದ ಈ ಬಗ್ಗೆ ಹೋರಾಟ ಮಾಡ ಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಸಂಘಟನೆಯ ಮಾಜಿ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ, ಮುಖಂಡರಾದ ನಾಗೇಶ್, ರಮೇಶ್ ಮೆಂಡನ್, ವಿಜಯ ಹೆಗ್ಡೆ, ಸುರೇಶ್ ಪೂಜಾರಿ, ಶಶಿಕುಮಾರ್, ಸುರೇಶ್ ಮೆಂಡನ್, ಜಾನ್ ಲೆಲ್ನಿ, ಮುನ್ನಾ, ಶಶಿ ಮತ್ತಿತರರು ಉಪಸ್ಥಿತರಿದ್ದರು.





