ಜಗತ್ತು ಯುದ್ಧದ ತೆಕ್ಕೆಯಲ್ಲಿದೆ: ಪೋಪ್

ಕ್ರೋಕ್ಕಾವ್,ಜುಲೈ 29: ಜಗತ್ತು ಯುದ್ಧದ ಹಾದಿಯಲ್ಲಿ ಮುಂದೆ ಸಾಗುತ್ತಿದೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ. ತನ್ನ ಪ್ರಥಮ ಪೋಲೆಂಡ್ ಸಂದರ್ಶನದ ವೇಳೆ ಈ ಗಮನಾರ್ಹ ಹೇಳಿಕೆಯನ್ನು ಅವರು ನೀಡಿದ್ದು ಯುರೋಪಿನ ಕೆಲವು ರಾಷ್ಟ್ರಗಳ ನಿರಾಶ್ರಿತರ ಕುರಿತ ನಿಲುವನ್ನು ಅವರು ಟೀಕಿಸಿದ್ದಾರೆ ಎಂದು ವರದಿಯಾಗಿದೆ.
ವಿಶ್ವ ಯುವಜನ ದಿನಾಚರಣೆಯನ್ನು ಉದ್ಘಾಟಿಸಲಿಕ್ಕಾಗಿ ದಕ್ಷಿಣ ಪೋಲಿಶ್ ನಗರವಾದ ಕ್ರೋಕ್ಕಾವ್‌ಗೆ ಪೋಪ್ ಭೇಟಿ ನೀಡಿದ್ದರು ಎನ್ನಲಾಗಿದೆ. ಜಗತ್ತಿನ ವಿವಿಧ ಕಡೆಗಳಿಂದಯುವಜನ ದಿನಾಚರಣೆಗಾಗಿ ಕ್ರೋಕ್ಕಾವ್‌ಗೆ ಹತ್ತುಲಕ್ಷಕ್ಕೂ ಅಧಿಕ ಕ್ಯಾಥೋಲಿಕ್ ಯುವಕರನ್ನು ಉದ್ದೇಶಿಸಿ ಮಾತಾಡಿದ ಪೋಪ್, ಜಗತ್ತು ಯುದ್ಧದ ತೆಕ್ಕೆಯಲ್ಲಿದೆ ಎಂದು ಹೇಳುವ ನಾವು ಯಾರಿಗೂ ಹೆದರಬೇಕಾಗಿಲ್ಲ. ಪ್ರಾನ್ಸಿನ್‌ಲ್ಲಿ ನಡೆದ ಕ್ರೈಸ್ತ ಧರ್ಮಗುರುವೊಬ್ಬರ ಹತ್ಯೆಯನ್ನು ಈ ಸಂದರ್ಭದಲ್ಲಿ ಕಠಿಣವಾಗಿ ಖಂಡಿಸಿದ್ದಾರೆ. ಐಸಿಸ್ ನಡೆಸುತ್ತಿರುವ ಅಕ್ರಮಗಳಿಂದಾಗಿ ಫ್ರಾನ್ಸ್ ಮತ್ತು ಜರ್ಮನಿಯಲ್ಲಿಮುಸ್ಲಿಮರ ವಿರೋಧಿ ಭಾವನೆ ಬೆಳೆಯುತ್ತಿದೆ. ಆದರೆ ಧರ್ಮಗಳು ಯುದ್ಧವನ್ನು ಬಯಸುವುದಿಲ್ಲ.ಉಳಿದವರು ಬಯಸುತ್ತಿದ್ದಾರೆ. ಹಣ. ಸಂಪತ್ತು. ಜನರಮೇಲಿನ ಅಧಿಪತ್ಯ ದ ಹಿತಾಸಕ್ತಿಗಳು ಇದರ ಹಿಂದಿವೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆಂದು ವರದಿ ತಿಳಿಸಿದೆ.
ಮುಸ್ಲಿಮರ ಕುರಿತು ಕೃತಕ ಭೀತಿ ಹುಟ್ಟುಹಾಕಲು ಶ್ರಮಿಸುವ ಅಧಿಕಾರಿಗಳಿಗೆ ಪೋಪ್ ದೇಶಕ್ಕೆ ಬರುವ ಮೂರು ದಿವಸ ಮೊದಲು ಪೋಲಿಶ್ ಸರಕಾರ ಕಠಿಣ ಎಚ್ಚರಿಕೆ ನೀಡಿತ್ತು. ಆದರೆನಿರಾಶ್ರಿತರನ್ನು ದೇಶಪ್ರವೇಶಿಸದಂತೆ ಕಠಿಣವಾಗಿ ತಡೆದ ರಾಷ್ಟ್ರಗಳಲ್ಲಿ ಪೋಲೆಂಡ್ ಕೂಡಾ ಒಂದಾಗಿದೆ. ಫ್ರಾನ್ಸಿನ ನೀಸ್‌ನಲ್ಲಿ ನಡೆದ ಭಯೋತ್ಪಾದನ ದಾಳಿಯ ನಂತರ ಪೋಲೆಂಡ್ ಗ್ರಹಸಚಿವ ಮಾರಿಯಸ್ ಬ್ಲಾಸಕ್ ದೇಶದ ಸುರಕ್ಷೆಯ ದೃಷ್ಟಿಯಲ್ಲಿ ನಿರಾಶ್ರಿತರನ್ನು ತಡೆಯಲು ಗಡಿಯಲ್ಲಿ ಕಾವಲನ್ನು ಹೆಚ್ಚಿಸಿದ್ದರು.
ಅದೇವೇಳೆ ನಿರಾಶ್ರಿತ ವಲಸೆ ಎಂಬ ಸಂಕೀರ್ಣ ವಿಷಯವನ್ನು ಸ್ವೀಕರಿಸಲು ಸಿದ್ಧರಾಗಬೇಕು ಎಂದು ಪೋಪ್ ಪೋಲೆಂಡ್‌ಗೆ ಸಲಹೆ ನೀಡಿದ್ದಾರೆ. ಅದು ಭೀತಿಯನ್ನು ಇಲ್ಲದಾಗಿಸುವ ಕರುಣೆಪೂರಿತ ವಿವೇಕಯುತ ಹಾಗೂ ಮಹತ್ತಾದ ಪ್ರವೃತ್ತಿಯಾಗಿದೆ. ಹಸಿವಿನಿಂದ ಯುದ್ಧದಿಂದ ರಕ್ಷಣೆ ಕೋರಿ ಬರುವವರನ್ನು ಕೈಚಾಚಿ ಸ್ವೀಕರಿಸಲು ಸಿದ್ಧರಾಗಿರಿ. ನಂಬಿಕೆ ಸ್ವಾತಂತ್ರ್ಯ. ಭದ್ರತೆ ಮುಂತಾದ ಮೂಲಭೂತ ಹಕ್ಕುಗಳನ್ನುಅವರಿಗೂ ಹಂಚಿರಿ ಎಂದು ಪೋಪ್ ಹೇಳಿರುವುದಾಗಿ ವರದಿಯಾಗಿದೆ.







