ಬಿಜೆಪಿ ಸಂಸದ, ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಇನ್ನು ಲೆಫ್ಟಿನೆಂಟ್

ಹೊಸದಿಲ್ಲಿ, ಜು. ೨೯: ಹಿಮಾಚಲ ಪ್ರದೇಶದ ಬಿಜೆಪಿ ಸಂಸದ ಹಾಗು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಶುಕ್ರವಾರ ಸೇನೆಯ ಲೆಫ್ಟಿನೆಂಟ್ ಆಗಿ ಸೇನಾ ಮುಖ್ಯಸ್ಥ ಜನರಲ್ ದಲಬೀರ್ ಸುಹಾಗ್ ಅವರಿಂದ ಪ್ರಮಾಣ ಸ್ವೀಕರಿಸಿದರು. ಸಂದರ್ಭ ಬಿದ್ದಾಗ, ತಾನು ಸೇನೆಯಲ್ಲಿ ಸೇವೆ ಸಲ್ಲಿಸಲು ಸಿದ್ಧ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು. ಮಿಲಿಟರಿ ಸೇವೆಗೆ ಸೇರಿದ ಪ್ರಪ್ರಥಮ ಬಿಜೆಪಿ ಸಂಸದ ಅನುರಾಗ್ .
" ಇದು ನನಗೆ ಮತ್ತು ನನಗೆ ಕುಟುಂಬಕ್ಕೆ ಬಹುದೊಡ್ಡ ಗೌರವ. ನಾನು ಹಿಮಾಚಲ ಪ್ರದೇಶದ ವೀರಭೂಮಿಯಿಂದ ಬಂದಿದ್ದೇನೆ. ನನ್ನ ಅಜ್ಜ ಸೇನೆಯಲ್ಲಿದ್ದರು. ಸೇನೆಯಲ್ಲಿ ದೇಶ ಸೇವೆ ಸಲ್ಲಿಸುವ ನನ್ನ ಕನಸು ಇಂದು ನನಸಾಗಿದೆ " ಎಂದು ಲೆ. ಠಾಕೂರ್ ಹೇಳಿದ್ದಾರೆ.
Video:Piping Ceremony at South Block in the presence of Chief of Army Staff General Dalbir S Suhag. #TerritorialArmy pic.twitter.com/unK0a5kmHL
— Lt. Anurag Thakur (@ianuragthakur) July 29, 2016
Next Story







