ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಧರಣಿ

ತೀರ್ಥಹಳ್ಳಿ, ಜು.29: ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ೆಡರೇಷನ್ ತೀರ್ಥಹಳ್ಳಿ ಸಮಿತಿ ವತಿಯಿಂದ ನನೆಗುದಿಗೆ ಬಿದ್ದಿರುವ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ ಹಾಗೂ ಮಹಿಳಾ ವಿರೋಧಿ ನೀತಿ ಖಂಡಿಸಿ ಪಟ್ಟಣದಲ್ಲಿ ಬೃಹತ್ ಧರಣಿ ನಡೆಸಿ ತಾಲೂಕು ಕಚೇರಿ ಮುಂಭಾಗದಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು.ಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷೆ ಗಾಯತ್ರಿ ಎನ್.ಹೆಗಡೆ, ಐಸಿಡಿಎಸ್ ಯೋಜನೆಯು ದೇಶ ಹಾಗೂ ನಮ್ಮ ರಾಜ್ಯದಲ್ಲಿ ಜಾರಿಗೆ ಬಂದು 40 ವರ್ಷಗಳಾಗಿದೆ. ಈ ಯೋಜನೆಯಿಂದ ಕೋಟ್ಯಂತರ ಮಕ್ಕಳು, ಗರ್ಭಿಣಿ ಬಾಣಂತಿಯರು ಹಾಗೂ ಕಿಶೋರಿಯರು ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ ಈ ಯೋಜನೆಯು ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕನಿಷ್ಠ ವೇತನ ನೀಡುತ್ತಿಲ್ಲ. ಈ ಇಬ್ಬಗೆ ನೀತಿಯಿಂದ ಮಹಿಳೆಯರ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು ಹಾಗೂ ನೌಕರರ ಸೌಲಭ್ಯ ಗಳನ್ನು ನೀಡುವಂತಾಗಬೇಕು. ಕನಿಷ್ಠ 3 ಸಾವಿರ ರೂ.ಪಿಂಚಣಿ ನೀಡುವಂತಹ ಯೋಜನೆ ರೂಪಿಸಬೇಕು. ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಪ್ರಾರಂಭಿಸುವ ಬದಲು ಅಂಗನವಾಡಿ ಕೇಂದ್ರಗಳಿಗೆ ಇಂಗ್ಲಿಷ್ ಕಲಿಸಲು ಅಗತ್ಯ ಪುಸ್ತಕ ಒದಗಿಸಬೇಕು. ಸರಕಾರಗಳು ಖಾಸಗೀಕರಣದತ್ತ ವಾಲುತ್ತಿರುವುದನ್ನು ತಮ್ಮ ಮನವಿಯಲ್ಲಿ ಖಂಡಿಸಿದರು.
ತಹಶೀಲ್ದಾರ್ ಲೋಕೇಶ್ವರಪ್ಪ ಮುಖಾಂತರ ೆಡರೇಷನ್ ತಾ. ಸಮಿತಿಯವರು ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ರ್ಝಾನ ಖಾನಂ, ಕು. ರಜನಿ, ರವೀಂದ್ರಸಾಗರ್, ವಾಣಿ, ಸಾವಿತ್ರಮ್ಮ, ಸುಶೀಲಾ ಬಾಯಿ, ಜಯಶೀಲಾ, ಸರೋಜಾ, ಟಿ.ಕುಸುಮಾ, ಅನಸೂಯ, ಸೀತಾಲಕ್ಷ್ಮೀ, ಚಿತ್ರಾ ಟಿ.ಎಸ್. ಮತ್ತಿತರರು ಉಪಸ್ಥಿತರಿದ್ದರು.





