ತನಿಖೆ ನಡೆಸುವವರು ಯಾರು..?
ಮಾನ್ಯರೆ,
ಹಲ್ಲಿಲ್ಲದ ಹಾವಿನಂತಾಗಿದ್ದ ಲೋಕಾಯುಕ್ತ ಸಂಸ್ಥೆಯ ಬದಲಿಗೆ ಎಸಿಬಿ ಅಸ್ತಿತ್ವಕ್ಕೆ ಬಂದು ತಿಂಗಳುಗಳೇ ಕಳೆಯಿತು. ಆದರೆ ಈ ಮುಂಚೆ ಲೋಕಾಯುಕ್ತಕ್ಕೆ ಸಲ್ಲಿಕೆಯಾದ 2,264 ಪ್ರಕರಣಗಳು ತನಿಖೆಯಾಗದೇ ನನೆಗುದಿಗೆ ಬಿದ್ದಿವೆ. ಇದೀಗ ಮೂಲೆ ಸೇರಿರುವ ಈ ಪ್ರಕರಣಗಳ ಬಗ್ಗೆ ತನಿಖೆ ಬಿಡಿ, ಎಫ್‌ಐಆರ್ ಕೂಡಾ ದಾಖಲಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಹಣ ಹಿಡಿದಿರುವ ಈ ಪ್ರಕರಣಗಳನ್ನು ತನಿಖೆ ಮಾಡುವವರು ಯಾರು ಅನ್ನುವುದೇ ಈಗಿನ ಮುಖ್ಯ ಪ್ರಶ್ನೆ. ಯಾಕೆಂದರೆ ಸರಕಾರ ಲೋಕಾಯುಕ್ತ ಪೊಲೀಸರ ಅಧಿಕಾರ ಕಿತ್ತುಕೊಂಡ ಬಳಿಕ ಅವರಿಗೆ ಈ ಪ್ರಕರಣಗಳ ಬಗ್ಗೆ ಎಫ್‌ಐಆರ್ ದಾಖಲಿಸುವ ಅಧಿಕಾರವೇ ಇಲ್ಲದಂತಾಗಿದೆ. ಅಷ್ಟೇ ಅಲ್ಲ, ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದ 14 ಇನ್‌ಸ್ಪೆಪೆಕ್ಟರ್‌ಗಳು ವರ್ಗಾವಣೆಯಾಗಿದ್ದಾರೆ.
ಹೀಗಾಗಿ ವಿವಿಧ ಜಿಲ್ಲೆಗಳಿಂದ ದಾಖಲಾಗಿರುವ 2,264 ಪ್ರಕರಣಗಳ ತನಿಖೆ ಮುಗಿಸಲು ಪೊಲೀಸ್ ಠಾಣೆಗೆ ಮರಳಿ ಅಧಿಕಾರ ನೀಡಬೇಕಾದ ಅನಿವಾರ್ಯತೆ ಇರುವುದರಿಂದ ಹೈಕೋರ್ಟು ಸರಕಾರಕ್ಕೆ ನಿರ್ದೇಶನ ನೀಡುವ ಅಗತ್ಯತೆ ಇದೆ.
Next Story





