ಮಲಾರ್: ಪುಸ್ತಕ ವಿತರಣೆ, ಸನ್ಮಾನ ಕಾರ್ಯಕ್ರಮ

ಕೊಣಾಜೆ, ಜು.29: ಮಲಾರ್ ಯಾದ್ ಫೌಂಡೇಶನ್ ವತಿಯಿಂದ ಪಾವೂರು ಗ್ರಾಮ ವ್ಯಾಪ್ತಿಯ ಮದ್ರಸ ಮಕ್ಕಳಿಗೆ ಕುರ್‌ಆನ್, ಪಠ್ಯ ಹಾಗೂ ಬರೆಯುವ ಪುಸ್ತಕ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಗುರುವಾರ ಅರಸ್ತಾನ ಹಿದಾಯತುಲ್ ಇಸ್ಲಾಮ್ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಉಸ್ಮಾನ್ ಹಾಜಿ ಬೋಳಿಯಾರ್ ದುಆ ಮಾಡಿದರು. ಕಾರ್ಯಕ್ರಮದಲ್ಲಿ ಗೋರಿಗುಂಡಿ ತೋಡುವ ಕಾರ್ಯ ನಡೆಸುವ ಅಝೀಝ್ ಮೇಸ್ತ್ರಿ ಮಲಾರ್ , ಶರೀಫ್ ಮೇಸ್ತ್ರಿ ಅರಸ್ತಾನ ಹಾಗೂ ರಿಕ್ಷಾ ಚಾಲಕ ಅಬ್ದುಲ್ ಕಬೀರ್ ಅವರನ್ನು ಸನ್ಮಾನಿಸಲಾಯಿತು.
ಅಲ್ ಮುಬಾರಕ್ ಜುಮಾ ಮಸೀದಿಯ ಖತೀಬ್ ರಿಯಾಝ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಅರಸ್ತಾನ ಅಲ್ ಮುಬಾರಕ್ ಜುಮಾ ಮಸೀದಿಯ ಅಧ್ಯಕ್ಷ ಮಹಮ್ಮದ್ ಮೋನು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಲ್ ಮುಬಾರಕ್ ಜುಮಾ ಮಸೀದಿಯ ಸದರ್ ಮುಅಲ್ಲಿಂ ಖಾಲಿದ್ ಮದನಿ, ಜಿಪಂ ಮಾಜಿ ಸದಸ್ಯ ಎನ್.ಎಸ್.ಕರೀಂ, ತಾಪಂ ಸದಸ್ಯ ಅಬ್ದುಲ್ ಜಬ್ಬಾರ್ ಬೋಳಿಯಾರ್, ಅಂಬ್ಲಮೊಗರು ಗ್ರಾಪಂ ಅಧ್ಯಕ್ಷ ಮುಹಮ್ಮದ್ ರಫೀಕ್, ಬೆಳ್ಮ ಗ್ರಾಪಂ ಉಪಾಧ್ಯಕ್ಷ ಸಿ.ಎಂ.ಅಬ್ದುಲ್ ಸತ್ತಾರ್, ಕಿನ್ಯ ಗ್ರಾಪಂ ಉಪಾಧ್ಯಕ್ಷ ಸಿರಾಜ್, ಎಸ್ಕೆಎಸ್ಸೆಸ್ಸೆಫ್ ಮಲಾರ್ ಘಟಕಾಧ್ಯಕ್ಷ ಹಸನ್ ಫೈಝಿ, ತಾಪಂ ಮಾಜಿ ಸದಸ್ಯ ಅಹ್ಮದ್ ಕುಂಞಿ, ಮಲಾರ್ ಕೋಡಿ ಶಂಸುಲ್ ಉಲಮಾ ಮದ್ರಸ ಅಧ್ಯಕ್ಷ ಮಜೀದ್ ಮಾಸ್ಟರ್, ರಹ್ಮಾನಿಯಾ ಜುಮಾ ಮಸೀದಿ ಅಧ್ಯಕ್ಷ ಶೌಕತ್ ಅಲಿ, ಪಾವೂರು ಗ್ರಾಪಂ ಮಾಜಿ ಸದಸ್ಯ ನಾಸೀರ್ ಮಲಾರ್, ಹಸನಬ್ಬ ಅಮ್ಮೆಂಬಳ, ಉದ್ಯಮಿ ಸಿ.ಎಂ.ಫಾರೂಕ್ ಮೊದಲಾದವರು ಉಪಸ್ಥಿತರಿದ್ದರು. ಮುಹಮ್ಮದ್ ಫಿರೋಝ್‌ಸ್ವಾಗತಿಸಿದರು. ರಿಯಾಝ್ ಗಾಡಿಗದ್ದೆ ವಂದಿಸಿದರು. ಅಲ್ತಾಫ್ ಮಲಾರ್ ಕಾರ್ಯಕ್ರಮ ನಿರೂಪಿಸಿದರು. ವನಮಹೋತ್ಸವ ಪ್ರಯುಕ್ತ ಸುರಪಾಲ ಸಪ್ತಾಹ ಆಚರಣೆ
ಉಡುಪಿ, ಜು.29: ಉಡುಪಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ದ್ರವ್ಯಗುಣ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದೊಂದಿಗೆ ವನಮಹೋತ್ಸವ ಪ್ರಯುಕ್ತ ಇತ್ತೀಚೆಗೆ ಸುರಪಾಲ ಸಪ್ತಾಹವನ್ನು ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಕಾಂತ್ ಯು. ಕಾಲೇಜು ಪರಿಸ ರದಲ್ಲಿ ಗಿಡನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿ ಗಳಾಗಿ ಉಡುಪಿ ಜೆಯಿಂಟ್ಸ್ ಗ್ರೂಪಿನ ರಮೇಶ್ ಪೂಜಾರಿ, ಮಧು ಸೂದನ್ ಹೇರೂರ್, ಆನಂದ್ ಭಾಗವಹಿಸಿದ್ದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ.ಶ್ರೀಕಾಂತ್ ಪಿ. ಕಾರ್ಯಕ್ರಮ ನಿರೂಪಿಸಿದರು. ಈ ಸಪ್ತಾಹದಲ್ಲಿ ಆಯುರ್ವೇದದ ಪಂಚಕರ್ಮ ಚಿಕಿತ್ಸೆಯಲ್ಲಿ ಉಪ ಯುಕ್ತವಾದ ಅಗ್ನಿಮಂಥ(ಅರಣಿ), ಏರಂಡ (ಔಡಲಗಿಡ), ದತ್ತೂರ (ಉಮ್ಮತ್ತಿಗಿಡ),ನಿರ್ಗುಂಡಿ(ನೆಕ್ಕಿಗಿಡ), ಅರ್ಕ (ಎಕ್ಕದ ಗಿಡ), ಬಂದದ ಗಿಡ, ನಿಂಬ(ಕಹಿಬೇವು) ಎಂಬ ಏಳು ಬಗೆಯ ಔಷಧ ಸಸ್ಯಗಳನ್ನು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಕಿರುವೈದ್ಯರು ಕಾಲೇಜಿನ ಔಷಧಿ ಮೂಲಿಕೋದ್ಯಾನದ ಸಪ್ತವನದಲ್ಲಿ ನೆಟ್ಟರು.







