ಪದಕದ ಬೇಟೆಗೆ ಹೊರಟ ಶೂಟರ್ ಜಿತೂ ರಾಯ್

ಹೊಸದಿಲ್ಲಿ, ಜು.29: ನೇಪಾಳ ಮೂಲದ ಜಿತು ರಾಯ್ ಸ್ಪೇನ್‌ನಲ್ಲಿ ನಡೆದ 51ನೆ ಆವೃತ್ತಿಯ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ 50 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಜಯಿಸುವ ಮೂಲಕ 2016ರ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡ ಭಾರತದ ಮೊದಲ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
2014ರ ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿರುವ ಜಿತು ಎರಡು ಬಾರಿ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಪದಕ ಜಯಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಮುಂಬರುವ ರಿಯೋ ಗೇಮ್ಸ್‌ನಲ್ಲಿ ಪಿಸ್ತೂಲ್ ಶೂಟಿಂಗ್ನ ಲ್ಲಿ ಭಾರತದ ಪರ ಪದಕ ಜಯಿಸುವ ಫೇವರಿಟ್ ಶೂಟರ್ ಆಗಿದ್ದಾರೆ.
2014 ಜಿತು ಪಾಲಿಗೆ ಯಶಸ್ವಿ ವರ್ಷವಾಗಿತ್ತು. ಮ್ಯೂನಿಚ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ ವರ್ಲ್ಡ್‌ಕಪ್‌ನಲ್ಲಿ 10 ಮೀ. ಏರ್ ಪಿಸ್ತೂಲ್ ಇವೆಂಟ್‌ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ ಜಿತು ಮರಿಬೊರ್‌ನಲ್ಲಿ ನಡೆದ ವಿಶ್ವಕಪ್‌ವೊಂದರಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಶೂಟರ್ ಎನಿಸಿಕೊಂಡಿದ್ದರು. ವಿಶ್ವಕಪ್‌ನಲ್ಲಿ ಜಿತು 10 ಮೀ. ಏರ್ ಪಿಸ್ತೂಲ್‌ನಲ್ಲಿ ಚಿನ್ನ ಹಾಗೂ 50 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದುಕೊಂಡಿದ್ದರು.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 50 ಮೀ. ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ 562 ಅಂಕ ಗಳಿಸಿದ್ದ ಜಿತು ಹೊಸ ದಾಖಲೆ ಬರೆದಿದ್ದರು. ಫೈನಲ್‌ನಲ್ಲಿ 194.1 ಅಂಕ ಗಳಿಸಿದ್ದ ಅವರು ಚಿನ್ನದ ಪದಕ ಜಯಿಸಿದ್ದರು.
ಏಷ್ಯನ್ ಗೇಮ್ಸ್‌ನಲ್ಲಿ 50 ಮೀ. ಪಿಸ್ತೂಲ್‌ನಲ್ಲಿ ಚಿನ್ನ ಹಾಗೂ ಪುರುಷರ 10 ಮೀ. ಏರ್‌ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಜಯಿಸಿದ್ದ ಜಿತು ಮತ್ತೊಂದು ದಾಖಲೆ ನಿರ್ಮಿಸಿದ್ದರು.
2015ರ ಆಗಸ್ಟ್‌ನಲ್ಲಿ ಜಿತು ರಾಯ್‌ಗೆ ಅರ್ಜುನ ಪ್ರಶಸ್ತಿ ಲಭಿಸಿತು.
ಜಿತು ರಾಯ್ ಪ್ರಮುಖ ಸಾಧನೆಗಳು
*2016ರ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ 50 ಮೀ.ನಲ್ಲಿ ಚಿನ್ನ
*2015ರ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 50 ಮೀ.ನಲ್ಲಿ ಬೆಳ್ಳಿ
*2015ರಲ್ಲಿ ಚಾಂಗ್ವಾನ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ 10 ಮೀ.ನಲ್ಲಿ ಕಂಚು
*2014ರಲ್ಲಿ ಇಂಚೋನ್‌ನಲ್ಲಿ ನಡೆದ 2014ರ ಏಷ್ಯನ್ ಗೇಮ್ಸ್‌ನಲ್ಲಿ 50 ಮೀ.ನಲ್ಲಿ ಚಿನ್ನ
*2014ರಲ್ಲಿ ಇಂಚೋನ್‌ನಲ್ಲಿ ನಡೆದ 2014ರ ಏಷ್ಯನ್ ಗೇಮ್ಸ್‌ನಲ್ಲಿ 10ಮೀ.(ಟೀಮ್)ನಲ್ಲಿ ಕಂಚು
*2014ರಲ್ಲಿ ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 50 ಮೀ.ನಲ್ಲಿ ಚಿನ್ನ.
*2014ರಲ್ಲಿ ಸ್ಲೋವೇನಿಯಾದಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ 10 ಮೀ.ನಲ್ಲಿ ಚಿನ್ನ
*2014ರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 50 ಮೀ.ನಲ್ಲಿ ಬೆಳ್ಳಿ
* ಮ್ಯೂನಿಚ್‌ನಲ್ಲಿ 2014ರಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ 10 ಮೀ.ನಲ್ಲಿ ಬೆಳ್ಳಿ
*2014ರಲ್ಲಿ ಸ್ಲೋವೇನಿಯಾದಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ 50 ಮೀ.ನಲ್ಲಿ ಬೆಳ್ಳಿ
*2014ರಲ್ಲಿ ಇಂಚೋನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ 50 ಮೀ.ನಲ್ಲಿ ಚಿನ್ನ
*2014ರಲ್ಲಿ ಇಂಚೋನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ 10 ಮೀ.ನಲ್ಲಿ ಕಂಚು
*2014ರಲ್ಲಿ ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 50 ಮೀ.ನಲ್ಲಿ ಚಿನ್ನ.
ಜಿತು ರಾಯ್ ಇವೆಂಟ್
10ಮೀ. ಏರ್ ಪಿಸ್ತೂಲ್, 50 ಮೀ. ಪಿಸ್ತೂಲ್
ಒಲಿಂಪಿಕ್ಸ್: ಮೊದಲ ಬಾರಿ ಪ್ರವೇಶ
ಸ್ಪರ್ಧಾ ಸಮಯ: ಆಗಸ್ಟ್ 6(ರಾತ್ರಿ 9:30), ಆ.10(ರಾತ್ರಿ 10:30)
ಸ್ಥಳ: ಒಲಿಂಪಿಕ್ ಶೂಟಿಂಗ್ ಸೆಂಟರ್
ಹೆಸರು: ಜಿತು ರಾಯ್
ಜನ್ಮಸ್ಥಳ: ನೇಪಾಳ
ವಿಭಾಗ(ಸ್ಪೋರ್ಟ್): ಶೂಟಿಂಗ್
ಈವೆಂಟ್: 10 ಮೀ. ಏರ್ ಪಿಸ್ತೂಲ್, 50 ಮೀ. ಪಿಸ್ತೂಲ್.
ಈಗಿನ ರ್ಯಾಂಕಿಂಗ್: 2(50 ಮೀ. ಪಿಸ್ತೂಲ್), 3 (10 ಮೀ. ಪಿಸ್ತೂಲ್)







