ಪಾದ್ರಿ ಟೋಂ ಉಯುನ್ನಾಲ್‌ರ ಅಪಹರಣ: ಮೂವರು ಭಯೋತ್ಪಾದಕರ ಸೆರೆ

ಹೊಸದಿಲ್ಲಿ,ಜುಲೈ 30: ಯಮನ್‌ನಲ್ಲಿ ಕೇರಳ ಮೂಲದ ಪಾದ್ರಿ ಟೋಂ ಉಯುನ್ನಾಲ್‌ರನ್ನು ಅಪಹರಿಸಿದರೆನ್ನಲಾದ ಮೂವರು ಭಯೋತ್ಪಾದಕರನ್ನು ಸೆರೆಹಿಡಿಯಲಾಗಿದೆ ಎಂದು ವಿದೇಶ ಸಚಿವಾಲಯದ ಮೂಲಗಳು ಅನಧಿಕೃತವಾಗಿ ದೃಢೀಕರಿಸಿವೆ ಎಂದು ವರದಿಯಾಗಿದೆ. ಆದರೆ ಪಾದ್ರಿಯವರ ಕುರಿತು ಹೆಚ್ಚಿನ ವಿವರಗಳು ಲಭಿಸಿಲ್ಲ. ಮೂವರು ಭಯೋತ್ಪಾದಕರನ್ನು ಸೈಲ ಎಂಬ ಸ್ಥಳದಿಂದ ಸೆರೆಹಿಡಿಯಲಾಗಿದೆ ಎಂದು ತಿಳಿದು ಬಂದಿದೆ.
ಯಮನ್‌ನ ಭಾರತೀಯ ರಾಯಭಾರ ಕಚೇರಿಗೆ ಈ ಕುರಿತು ಮಾಹಿತಿ ದೊರಕಿದೆ ಎನ್ನಲಾಗಿದೆ. ವೃದ್ಧಸದನಕ್ಕೆ ತಾವೇ ದಾಳಿ ನಡೆಸಿದ್ದು ಈ ದಾಳಿಯಲ್ಲಿ ಹದಿನಾರು ಮಂದಿಯನ್ನು ಕೊಂದು ಹಾಕಿದ್ದೇವೆಂದು ಸೆರೆಹಿಡಿಯಲಾದ ಭಯೋತ್ಪಾದಕರು ಸಮ್ಮತಿಸಿದ್ದಾರೆಂಬ ಮಾಹಿತಿಯೂ ಲಭ್ಯವಾಗಿದೆ.
ಕಳೆದ ಮಾರ್ಚ್‌ನಲ್ಲಿ ಪಾದ್ರಿಯ ಅಪಹರಣ ನಡೆದಿತ್ತು. ವೃದ್ಧ ಸದನಕ್ಕೆ ದಾಳಿ ನಡೆಸಿದ ವೇಳೆ ನಾಲ್ವರು ಕ್ರೈಸ್ತಸನ್ಯಾಸಿನಿಯರು ಹಾಗೂ ಇತರ ಹನ್ನೆರಡು ಮಂದಿ ಹತರಾಗಿದ್ದರು. ಹತ್ಯೆಯಾದವರಲ್ಲಿ ಓರ್ವ ಭಾರತೀಯ ಕ್ರೈಸ್ತ ಸನ್ಯಾಸಿನಿ ಕೂಡಾ ಇದ್ದರೆಂದು ವರದಿ ವಿವರಿಸಿದೆ.
Next Story





