ಇದ್ದಕ್ಕಿದ್ದಂತೆ ಒಂದು ದಿನ ನೀವು 'ಅಕ್ರಮ ವಲಸಿಗ' ಎಂದು ಸರಕಾರ ಹೇಳಿದರೆ ?
ಮೊಯಿನುಲ್ ಮುಲ್ಲಾರ ಕರುಣಾಜನಕ ವ್ಯಥೆ ಕೇಳಿ

ನಿಮ್ಮ ಪೂರ್ಣ ಕುಟುಂಬಕ್ಕೆ ನೀವು ದೇಶದ ಪ್ರಜೆಯೆಂದು ಸಾಬೀತು ಮಾಡಲು ನೊಟೀಸು ಸಿಗುತ್ತದೆ ಎಂದುಕೊಳ್ಳಿ. ನಿಮ್ಮ ಹೆತ್ತವರು ಈ ದೇಶದ ಪ್ರಜೆಯೆಂದು ಮಾನ್ಯತೆ ಕೊಡುತ್ತಾರೆ. ಆದರೆ ನೀವು ಅನಕ್ಷರಸ್ಥರಾಗಿದ್ದು ಬಡತನದ ಕೆಳಗಿನ ರೇಖೆಯಲ್ಲಿ ನೆಲೆಸಿರುತ್ತೀರಿ. ವಕೀಲರ ಪ್ರಕಾರ ಹೆತ್ತವರು ಈ ದೇಶದ ಪ್ರಜೆಗಳೆನ್ನುವ ಪುರಾವೆ ಇರುವ ಕಾರಣ ಭಯಪಡಬೇಕಾಗಿಲ್ಲ.
ವಕೀಲರ ಮಾತು ಕೇಳಿ ಚಿಂತೆ ಮಾಡದೆ ಸುಮ್ಮನಿದ್ದಾಗಲೇ ವಿದೇಶಿಯರ ನ್ಯಾಯಮಂಡಳಿ ಅಕ್ರಮ ವಲಸಿಗರೆಂದು ಹೇಳುತ್ತದೆ. ಹೈಕೋರ್ಟ್ ಕೂಡ ನ್ಯಾಯ ಕೊಡುವುದಿಲ್ಲ. ಸುಪ್ರೀಂಕೋರ್ಟ್‌ಗೆ ಹೋಗಲು ಹಣವಿರುವುದಿಲ್ಲ. ಹೀಗಾಗಿ ವರ್ಷಗಟ್ಟಲೆ ಬಂಧನದಲ್ಲಿ ಕಳೆಯಬೇಕಾಗುತ್ತದೆ. ಅಂತಿಮವಾಗಿ ನಾಗರಿಕ ಹಕ್ಕುಗಳ ಸಂಘಟನೆ ಎಂವೈಸ್ ಫ್ಯಾಕ್ಟ್ಸ್ ನೆರವಿಗೆ ಬಂದು ಕುಟುಂಬ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತದೆ. ಸುಪ್ರೀಂಕೋರ್ಟ್ ನ್ಯಾಯಮಂಡಳಿ ಬಳಿ ಮರುವಿಚಾರಣೆಗೆ ಆದೇಶಿಸುತ್ತದೆ. ಆದರೆ ಅದಾಗಲೇ ವರ್ಷಾನುಗಟ್ಟಲೆ ಜೈಲಿನಲ್ಲಿ ಕಾಲ ಕಳೆದಾಗಿರುತ್ತದೆ. ಇದು ಮೊಯಿನುಲ್ ಮುಲ್ಲಾ ಎನ್ನುವ ಬರ್ಪೆಟ್ಟಾದ ಬಂಗಾಳಿ ಮುಸ್ಲಿಂ ಕುಟುಂಬದ ಕತೆ. 1998ರಲ್ಲಿ ಬರ್ಪೆಟ್ಟಾದ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಪ್ರಾಂತದಿಂದ ಮೂರು ಅಕ್ರಮ ವಲಸಿಗರ ಪ್ರಕರಣಗಳನ್ನು ನ್ಯಾಯಮಂಡಳಿಗೆ ಕಳುಹಿಸಿದ್ದರು. 2003ರಲ್ಲಿ ಐಎಂಡಿಟಿ ಬರ್ಪೆಟ್ಟಾದ ನ್ಯಾಯಮಂಡಳಿ ಮೊನಾಲ್ ಮೊಲ್ಲಾಹ್ ಹೆತ್ತವರು ಭಾರತೀಯ ಪ್ರಜೆಗಳೆಂದು ಹೇಳಿದೆ. ಐಎಂಡಿಟಿ ನ್ಯಾಯಮಂಡಳಿ ಮೊನಾಲ್ ಮೊಲ್ಲಾಹ್ ಪ್ರಕರಣ ಕೈಗೆತ್ತಿಕೊಳ್ಳಲಿಲ್ಲ. ಆದರೆ ಆಗ ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾಗಿದ್ದ ಈಗಿನ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಕಾರಣ ಐಎಂಡಿಟಿ ಕಾಯ್ದೆ ರದ್ದಾಯಿತು. ಆಗ ಡಿ-ವೋಟರ್ ಮೊನಾಲ್ ಮೊಲ್ಲಾಹ್ ಪ್ರಕರಣ ಬರ್ಪೆಟ್ಟಾದ ವಿದೇಶಿಗರ ನ್ಯಾಯಮಂಡಳಿಗೆ ವರ್ಗಾವಣೆಯಾಯಿತು.
ಹಲವು ಬಾರಿ ನ್ಯಾಯಮಂಡಳಿ ಮುಂದೆ ಮೊಯಿನುಲ್ ಮುಲ್ಲಾ ಹಾಜರಾದರು. ಮೊಯಿನುಲ್ ಮುಲ್ಲಾ ಅವರ ಹಿಂದಿನ ವಕೀಲರು ಸರಿಯಾಗಿ ಸಲಹೆ ನೀಡಿರಲಿಲ್ಲ ಎಂದು ಈಗಿನ ವಕೀಲರು ಹೇಳುತ್ತಾರೆ. ಹೆತ್ತವರು ಭಾರತೀಯ ಪ್ರಜೆಯಾಗಿರುವ ಕಾರಣ ಚಿಂತೆಗೆ ಕಾರಣವಿಲ್ಲ. ಹೀಗಾಗಿ ವಿದೇಶಿಗರ ನ್ಯಾಯಮಂಡಳಿ ಮುಂದೆ ಹಾಜರಾಗಬೇಕಿಲ್ಲ ಎಂದು ಹಿಂದಿನ ವಕೀಲರು ಹೇಳಿದ್ದರು. ಅನಕ್ಷರಸ್ತ ಮೊನಾಲ್ ಮೊಲ್ಲಾಹ್ ಈ ಕೌನ್ಸಲನ್ನು ನಂಬದೆ ಇರಲು ಕಾರಣಗಳಿರಲಿಲ್ಲ. ಆದರೆ ನ್ಯಾಯಮಂಡಳಿಯ ಮುಂದೆ ಹಾಜರಾಗದ ಮೊಯಿನುಲ್ ಮುಲ್ಲಾರಿಗೆ 2010ರಲ್ಲಿ ವಿದೇಶಿಗನೆನ್ನುವ ಪಟ್ಟ ಸಿಕ್ಕಿತು. ಮೊಯಿನುಲ್ ಮುಲ್ಲಾಗೆ ತನ್ನ ತಪ್ಪಿನ ಅರಿವಾಗಿ ತನ್ನ ವಕೀಲರ ಮೇಲೆ ಬಾರ್ ಕೌನ್ಸಿಲಲ್ಲಿ ದೂರು ನೀಡಿ ಹೈಕೋರ್ಟಿಗೆ ಹೋದರು. ಹೈಕೋರ್ಟ್ ಅರ್ಜಿ ತಿರಸ್ಕರಿಸಿ ಮೊಯಿನುಲ್ ಮುಲ್ಲಾರನ್ನು ದೇಶದಿಂದ ಹೊರಗೆ ಕಳುಹಿಸಲು ಆದೇಶಿಸಿತು. 2013 ಸೆಪ್ಟಂಬರಲ್ಲಿ ಪೊಲೀಸರು ಅವರನ್ನು ಬಂಧಿಸಿ ಗೋಲಾಪಾರ ಶಿಬಿರದಲ್ಲಿ ಬಂಧನದಲ್ಲಿಟ್ಟಿತು
ಸ್ವಾತಂತ್ರ್ಯ ಬಂದಂದಿನಿಂದ ಮೊಯಿನುಲ್ ಮುಲ್ಲಾ ಅವರ ಹೆತ್ತವರು, ಮುತ್ತಜ್ಜ ಕೂಡ ಭಾರತದಲ್ಲಿ ಮತ ಹಾಕಿದ್ದಾರೆ. ಮೊಯಿನುಲ್ ಮುಲ್ಲಾರ ಮುತ್ತಾತನ ಬಳಿ ಭೂಮಿಯ ದಾಖಲೆ ಕೂಡ ಸ್ವಾತಂತ್ರ್ಯಕ್ಕೆ ಮೊದಲೇ ಇತ್ತು. ಈ ದಾಖಲೆಗಳನ್ನು ಹೈಕೋರ್ಟ್ ಮುಂದಿಟ್ಟರೂ ಅದನ್ನು ಪರಿಗಣಿಸಿರಲಿಲ್ಲ. ಈಗ ಸುಪ್ರೀಂಕೋರ್ಟ್ ಮೊಯಿನುಲ್ ಮುಲ್ಲಾಗೆ ಎರಡನೇ ಅವಕಾಶ ನೀಡಿದೆ. ನಾಲ್ಕು ವಾರಗಳಲ್ಲಿ ಮತ್ತೆ ನ್ಯಾಯಮಂಡಳಿ ಮುಂದೆ ಅವರು ಹಾಜರಾಗಬೇಕಿದೆ. ಇದು ದೊಡ್ಡ ವಿಜಯ. ಬಡ ಅನಕ್ಷರಸ್ತ ಜನರನ್ನು ತಪ್ಪಾಗಿ ವಿದೇಶಿಗರು ಎಂದು ನ್ಯಾಯಮಂಡಳಿ ಮುಂದೆ ಇಡಲಾಗುತ್ತಿದೆ ಎಂದು ಮೈಫ್ಯಾಕ್ಟ್ಸ್‌ನ ವಕೀಲ ಅಮನ್ ವಾಡಡ್ ಹೇಳುತ್ತಾರೆ. 52,000ಕ್ಕೂ ಅಧಿಕ ಮಂದಿಯನ್ನು ನ್ಯಾಯಮಂಡಳಿ ವಿದೇಶಿಗರೆಂದು ಹೇಳಿದೆ. ಅವರಲ್ಲಿ ಬಹಳಷ್ಟು ಮಂದಿ ಅಕ್ರಮ ವಲಸಿಗರಾಗಿದ್ದರೂ ತಾಂತ್ರಿಕ ಕಾರಣಗಳಿಂದ ಅವರ ಪೌರತ್ವವನ್ನು ರದ್ದು ಮಾಡಲಾಗಿದೆ. ಈಗಿನ ಸರ್ಕಾರ ಅಸ್ಸಾಂನ್ನು ಅಕ್ರಮ ವಲಸಿಗರಿಂದ ಮುಕ್ತವನ್ನಾಗಿಸಲು ಪಣತೊಟ್ಟಿದೆ. ಆದರೆ ಇದರಿಂದ ಯಾರಿಗೂ ತೊಂದರೆಯಾಗದಂತೆ ನಿಭಾಯಿಸಬೇಕಿದೆ.
ಕೃಪೆ: www.news18.com







