13 ವರ್ಷದ ಬಾಲಕನಿಗೆ ತಂದೆಯಿಂದ ಮಾರಣಾಂತಿಕ ಥಳಿತ

ಗಾಂಧಿನಗರ, ಜುಲೈ 30:ಚಿಕ್ಕಪ್ಪನ ಫೋನ್ ತೆಗೆದ ಎಂದು ಹದಿಮೂರು ವರ್ಷದ ಬಾಲಕನಿಗೆ ಅವನ ತಂದೆ ಮೃಗೀಯವಾಗಿ ಥಳಿಸಿದ ಘಟನೆ ವರದಿಯಾಗಿದೆ. ಪತ್ತನಂತಿಟ್ಟ ಕೋಟ್ಟಂಙಾಲ್ ಕೋಟ್ಟಯಂ ಮಣ್ಣು ಎಂಬಲ್ಲಿನ ಝಕೀರ್ ಎಂಬವರು ತನ್ನ ಪುತ್ರ ಫಿರೋಝ್ ಎಂಬ ಬಾಲಕನ್ನು ಮಾರಣಾಂತಿಕವಾಗಿ ಥಳಿಸಿದ್ದಾರೆ. ಶುಕ್ರವಾರ ಸಂಜೆ ಮೂರುಗಂಟೆಗೆ ಘಟನೆ ನಡೆದಿದ್ದು ಹೊಡೆತದಿಂದಾಗಿಬಾಲಕನ ಮಂಡಿಗೆ ಹಾನಿಯಾಗಿದೆ. ತುಟಿ ಸೀಳಿದೆ. ನೆತ್ತಿಗೆ ಗಾಯವಾಗಿದೆ ಎಂದು ವರದಿತಿಳಿಸಿದೆ.
ಘಟನೆಯ ಕುರಿತು ಬಾಲಕನ ತಾಯಿ ಶೈಲ ಹೇಳುವ ಪ್ರಕಾರ "ನಿನ್ನೆ ಝಕೀರ್‌ರ ಸಹೋದರ ಶಂಸುರ ಕೆಟ್ಟುಹೋದ ಮೊಬೈಲ್‌ನ್ನು ಫಿರೋರ್ ತೆಗೆದು ಆಟವಾಡುತ್ತಿದ್ದ. ಇದನ್ನು ತಿಳಿದು ತಂದೆ ಝಕೀರ್ ಫಿರೋಝ್ ಗೆ ಹೊಡೆದಿದ್ದಾನೆ. ಮೊದಲು ಕೈಯಿಂದ ಹೊಡೆದು ಬಳಿಕ ಕುರ್ಚಿಯನ್ನುಅಪ್ಪಳಿಸಿದ್ದಾನೆ. ಈ ಸಂದರ್ಭದಲ್ಲಿ ಶೈಲಾ ಅತ್ತು ಬೊಬ್ಬೆ ಹೊಡೆದದ್ದರಿಂದ ನೆರೆಯವರು ಓಡಿ ಬಂದು ಬಿಡಿಸಿದ್ದಾರೆ"
ಹುಡುಗನನ್ನು ಹೊಡೆದು ಕೋಪ ತೀರಿಸಿದ ಬಳಿಕ ತಂದೆ ಮನೆಯಿಂದ ಹೊರಟು ಹೋಗಿದ್ದಾನೆ. ನಂತರ ಬಾಲಕನನ್ನು ಊರವರೇ ಸ್ಥಳೀಯ ಆಸ್ಪತ್ರೆಗೆ ಅಲ್ಲಿಂದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಿದ್ದಾರೆ. ಆರ್ ಎಂ ಒ ಡಾ. ಆರ್‌ಪಿ ರಂಜಿನ್ ಬಾಲಕನನ್ನುಪರೀಕ್ಷಿಸಿದ್ದಾರೆ. ನಂತರ ಬಾಲಕ ನ ತಂದೆಯ ವಿರುದ್ಧ ಪೊಲೀಸು ಕೇಸು ನೀಡಲು ತಿಳಿಸಿದರೆನ್ನಲಾಗಿದೆ. ತಲೆಗೆ ಏಟಾಗಿದೆಯೇ ಎಂದು ಪರೀಕ್ಷಿಸಲು ಸ್ಕಾನಿಂಗ್ ಸಹಿತ ಹೆಚ್ಚಿನ ಪರೀಕ್ಷೆ ನಡೆಸಲು ಆರ್‌ಎಂಐ ಸೂಚಿಸಿದ್ದಾರೆ. ಮೀನುಮಾರಾಟಗಾರನಾದ ತಂದೆ ಮದ್ಯಪಾನದ ವ್ಯಸನಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ ಎಂದುವರದಿಯಾಗಿದೆ.







