Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನೀವು ಕ್ರೆಡಿಟ್ ಕಾರ್ಡ್...

ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ?

ಹಾಗಾದರೆ ಈ ವಿಷಯಗಳು ನಿಮಗೆ ತಿಳಿದಿರಲೇಬೇಕು

ವಾರ್ತಾಭಾರತಿವಾರ್ತಾಭಾರತಿ30 July 2016 8:00 PM IST
share
ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ?

ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಹೊಂದಿರುವ ಸರಾಸರಿ ಭಾರತೀಯನ ಸಾಲ ಅಪಾಯಕಾರಿ ಮಟ್ಟದಲ್ಲಿ ಏರುತ್ತಿದೆ. ಆರ್‌ಬಿಐ ದಾಖಲೆಗಳ ಪ್ರಕಾರ ಕ್ರೆಡಿಟ್ ಕಾರ್ಡ್ ಒಟ್ಟು ಮೊತ್ತ 2016 ಮೇ ಅಂತ್ಯಕ್ಕೆ ರು. 42,100 ಕೋಟಿ ಇತ್ತು. 2008ರ ಬಿಕ್ಕಟ್ಟಿನ ಅವಧಿಯಲ್ಲಿ ಈ ಮೊತ್ತ ರು. 27,000 ಕೋಟಿ ಇತ್ತು. ಇದರಲ್ಲಿ ಅಧಿಕ ಮೊತ್ತ ಶಾಪಿಂಗಿಗಾಗಿಯೇ ಖರ್ಚಾಗಿದೆ! ಕ್ರೆಡಿಟ್ ಕಾರ್ಡ್ ಸಾಲವು ನಿಮ್ಮ ಹಣಕಾಸು ವ್ಯವಹಾರಗಳ ಮೇಲೆ ರಚನಾತ್ಮಕವಲ್ಲದ ಸಾಲವನ್ನು ಹೇರಲಿದೆ. ದೊಡ್ಡ ಮೊತ್ತದ ಸಾಲ ನಿಮ್ಮ ಕಾರ್ಡಿನ ಮೇಲಿದ್ದರೆ ತಾಜಾ ಖರೀದಿಗಳನ್ನು ಮಾಡುವುದು ಬಿಡಿ. ಸಾಧ್ಯವಾದಷ್ಟು ಬೇಗ ಬಾಕಿ ಮೊತ್ತ ಪಾವತಿಸುವತ್ತ ಗಮನಹರಿಸಿ. ಕ್ರೆಡಿಟ್ ಕಾರ್ಡ್ ಬಳಸಲು ಇಲ್ಲಿ ಕೆಲವು ಸಲಹೆಗಳಿವೆ.

ಕ್ರೆಡಿಟ್ ಕಾರ್ಡ್ ಸಾಲವನ್ನು ಉಳಿಸಿಕೊಳ್ಳಬೇಡಿ

ಪ್ರತೀ ತಿಂಗಳು ಕ್ರೆಡಿಟ್ ಕಾರ್ಡಿನ ಶೇ. 5ರಷ್ಟು ಮೊತ್ತವನ್ನು ಪಾವತಿಸಲೇಬೇಕು. ನೀವು ಇದರಿಂದ ತಪ್ಪಿಸಿಕೊಳ್ಳುವಂತಿಲ್ಲ. ಇದರ ಬದಲಾಗಿ ಪಾವತಿ ದಿನವೇ ಪೂರ್ಣ ಮೊತ್ತವನ್ನು ಭರಿಸಿ. ಆ ಮೂಲಕ ಮುಂದಿನ ಬಿಲ್ಲಿಂಗ್ ಸಮಯದಲ್ಲಿ ಮಾಸಿಕ ಬಡ್ಡಿ ದರವನ್ನು ಶೇ.3-4ರಷ್ಟು ಕಡಿಮೆಯಾಗಲಿದೆ. ಆದರೆ ಹಿಂದಿನ ಮೊತ್ತವನ್ನು ಉಳಿಸಿಕೊಂಡು ಹೊಸ ಖರೀದಿ ಮಾಡಿದಲ್ಲಿ ಬಡ್ಡಿ ದರದ ಮೊತ್ತ ದುಪ್ಪಟ್ಟಾಗಿ ಸಾಲದ ಸುಳಿಯೊಳಗೆ ಸಿಲುಕುತ್ತೀರಿ.

ಮಿತ ಬಳಕೆ

ಕ್ರೆಡಿಟ್ ಕಾರ್ಡ್ ಖರೀದಿಯಲ್ಲಿ ಬಡ್ಡಿದರವಿಲ್ಲದ ಅವಧಿಯಿದೆ. ಅದು 45 ದಿನಗಳಿಗೂ ಮೀರಿ ಇರಲಿದೆ. ಈ ಲಾಭ ಪಡೆಯಲು ಬಾಕಿ ಮೊತ್ತ ಶೂನ್ಯವಾಗಿರಬೇಕು. ನೀವು ಸ್ವಲ್ಪ ಮೊತ್ತವನ್ನು ಮುಂದಿನ ತಿಂಗಳಿಗೆ ಉಳಿಸಿದರೆ ಹೊಸ ಖರೀದಿಯ ಮೇಲೆ ಬಡ್ಡಿದರವಿಲ್ಲದ ಅವಧಿ ಸಿಗುವುದಿಲ್ಲ. ಹಲವರ ಬಳಿ ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಇರುತ್ತದೆ. ಕೆಲವರ ಬಳಿ 12ಕ್ಕೂ ಅಧಿಕವಿದೆ. ನಿಮ್ಮ ಒಟ್ಟು ಕಾರ್ಡ್ ಮಿತಿಯ ಶೇ. 50ಕ್ಕಿಂತ ಹೆಚ್ಚು ಬಳಕೆಯಾಗದಂತೆ ಗಮನಹರಿಸಿ. ಅಧಿಕ ಸಾಲ ಮಾಡಿದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಕಳಪೆಯಾಗಲಿದೆ.

ನಗದು ತೆಗೆಯಬೇಡಿ

ಕ್ರೆಡಿಟ್ ಕಾರ್ಡ್‌ನಿಂದ ನಗದು ತೆಗೆಯಬೇಡಿ. ಅದಕ್ಕೆ ಬಡ್ಡಿದರವಿಲ್ಲದ ಅವಧಿಯಿಲ್ಲ.

ಇಎಂಐಗೆ ಬದಲಿಸಿ

ಕೆಲ ಕಾರಣಗಳಿಂದ ಪೂರ್ಣ ಮೊತ್ತ ಪಾವತಿಸಲು ಆಗದೆ ಇದ್ದಲ್ಲಿ ಇಎಂಐ ಮೂಲಕ ಪಾವತಿಸುವ ಸೌಲಭ್ಯ ಮಾಡಿಕೊಂಡರೆ ಕಡಿಮೆ ಬಡ್ಡಿದರದಲ್ಲಿ ಸಿಗಲಿದೆ. ಹೀಗೆ ಇಎಂಐಗೆ ಪರಿವರ್ತಿಸಿದಲ್ಲಿ ಬಡ್ಡಿದರವು ಶೇ. 18-24 ಕಡಿಮೆಯಾಗಲಿದೆ.

ಕೊಡುಗೆಗಳು

ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯುವುದು ಕ್ರೆಡಿಟ್ ಕಾರ್ಡ್ ಇರುವವರಿಗೊಂದು ಹುಚ್ಚಾಗಿದೆ. ಕಾರ್ಡ್ ವಿಧವನ್ನು ಅನುಸರಿಸಿ ಕಾರ್ಡ್ ಹೊಂದಿದವರು ಪ್ರತೀ ಖರೀದಿ ಮೇಲೆ ಪಾಯಿಂಟು ಪಡೆಯಬಹುದು. ಉದಾಹರಣೆಗೆ ರು. 100 ಖರ್ಚುಮಾಡಿದರೆ 1 ಪಾಯಿಂಟು ಸಿಗುತ್ತದೆ. ಹೆಚ್ಚು ಖರ್ಚು ಮಾಡಿದರೆ ಹೆಚ್ಚು ಲಾಭ. 1 ಪಾಯಿಂಟಿಗೆ 25ರಿಂದ 50 ಪೈಸೆ ಸಿಗುತ್ತದೆ. ಈ ಪಾಯಿಂಟುಗಳನ್ನು ಮತ್ತೆ ವಿವಿಧ ಸೇವೆಗಳಲ್ಲಿ ರಿಡೀಮ್ ಮಾಡಿಕೊಳ್ಳಬಹುದು. ಆದರೆ ಪಾಯಿಂಟು ಪಡೆಯಲು ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ.

ಖಾತೆಯಿಂದ ಯಾಂತ್ರಿಕವಾಗಿ ಡೆಬಿಟ್ ಆಗುವುದು

ಒಟ್ಟು ಮೊತ್ತವನ್ನು ಪ್ರತೀ ತಿಂಗಳು ಯಾಂತ್ರಿಕವಾಗಿ ನಿಮ್ಮ ಖಾತೆಯಿಂದ ಕಡಿತವಾಗುವಂತೆ ಸೆಟ್ ಮಾಡಿಕೊಳ್ಳಿ. ಆ ಮೂಲಕ ನೀವು ಮುಂದಿನ ತಿಂಗಳಿಗೆ ಸಾಲ ಉಳಿಸಿಕೊಳ್ಳಬೇಕಾಗಿಲ್ಲ. ನೀವು ಪ್ರತೀ ತಿಂಗಳು ಒಂದು ನಿಗದಿತ ಮೊತ್ತವನ್ನು ಪಾವತಿಸಬಹುದು.

ಗಮನವಿರಲಿ

ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್‌ಗಳಲ್ಲಿ ಯಾವುದೇ ತಾಂತ್ರಿಕ ಧೋಷವಿಲ್ಲದೆ ಇರುವುದನ್ನು ಗಮನಿಸಿ ಬಡ್ಡಿ ಕಟ್ಟುವ ಅಗತ್ಯವಿಲ್ಲದಂತೆ ನೋಡಿಕೊಳ್ಳಿ. ಯಾವುದೇ ತಡವಾದ ಪಾವತಿಗೆ ಬಡ್ಡಿದರ ಬೀಳಬಹುದು.

ಖರ್ಚು ಮಾಡುವ ವಿಧಾನ

ವೆಚ್ಚಗಳು ಮತ್ತು ಅವುಗಳನ್ನು ಖರೀದಿಸಿದ ಬಗ್ಗೆ ಕಾರ್ಡ್ ಸ್ಟೇಟ್‌ಮೆಂಟ್‌ಗಳನ್ನು ವಿಶ್ಲೇಷಿಸಿ. ನಿಮ್ಮ ಖರ್ಚಿನ ಬಾಬ್ತು ಕಡಿಮೆ ಮಾಡುವ ನಿರ್ಧಾರವೂ ಇದರಿಂದ ಸರಳವಾಗಲಿದೆ.

ಅಂತರರಾಷ್ಟ್ರೀಯ ಬಳಕೆ

ವಿದೇಶದಲ್ಲಿ ಕ್ರೆಡಿಟ್ ಕಾರ್ಡ್ ಬಳಸುವುದು ದುಬಾರಿಯಾಗಬಹುದು. ಹಣದ ತೀರಾ ಅಗತ್ಯವಿದ್ದರೆ ಮಾತ್ರ ಬಳಸಿ. ಅಂತರರಾಷ್ಟ್ರೀಯ ವ್ಯವಹಾರದಲ್ಲಿ ವಿಪರೀತ ಶುಲ್ಕಗಳು ಇರಬಹುದು.

ಕೃಪೆ : economictimes.indiatimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X