ನಾವು ಬಾಂಗ್ಲಾದೇಶೀಯರಲ್ಲ, ನಮ್ಮ ಬಗ್ಗೆ ಸಂಶಯ ಬೇಡ: ಅಸ್ಸಾಂ ಮೂಲದ ಕಾರ್ಮಿಕರ ಅಳಲು

ಸಕಲೇಶಪುರ, ಜು.30: ಸಿಡಿಲು ಬಡಿತಕ್ಕೆ ಒಳಗಾಗಿ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ಸಾಂ ರಾಜ್ಯದ ಕಾರ್ಮಿಕರನ್ನು ಕೆಲವು ಮಾಧ್ಯಮಗಳು ಬಾಗ್ಲಾ ಪ್ರದೇಶದವರೆಂದು ಸುದ್ದಿ ಮಾಡಿರುವ ಹಿನ್ನಲೆಯಲ್ಲಿ ತಮ್ಮ ಅಳಲನ್ನು ಪತ್ರಿಕೆಯೊಂದಿಗೆ ಹೇಳಿಕೊಂಡ ಕಾರ್ಮಿಕರು ನಾವು ಭಾರತೀಯರು ಎಂದು ದಾಖಲೆ ಸಮೇತ ವಿವರಿಸಿದ್ದಾರೆ.
ವಾರ್ತಾಭಾರತಿಯೊಂದಿಗೆ ಮಾತನಾಡಿದ ಗಾಯಾಳು ಅಮೀರ್(24) ತಾಲೂಕಿನ ಕುಂಬಾರಡಿ ಗ್ರಾಮದಲ್ಲಿ ಕಾಫಿ ತೋಟದಲ್ಲಿ ಕೆಲಸಮಾಡುತ್ತಿದ್ದೇವೆ ಎಂದು ವಿವರಿಸಿದರು.ಕಳೆದ 2 ವರ್ಷಗಳಿಂದ ಸಕಲೇಶಪುರದಲ್ಲಿ ವಾಸ ಮಾಡುತ್ತಿದ್ದೇವೆ. ನಮ್ಮಲ್ಲಿ ಅಸ್ಸಾಂ ರಾಜ್ಯದ ಎಲ್ಲಾ ದಾಖಲೆಗಳಿವೆ ಎಂದು ಮತದಾರರ ಚೀಟಿ ಸಹಿತ ಇತರ ದಾಖಲೆಗಳನ್ನು ಪ್ರದರ್ಶಿಸಿದರು.
ಗುರುವಾರ ಸಂಜೆ 5:30ರ ಸಮಯದಲ್ಲಿ ಸಿಡಿಲು ಬಡಿಯಿತು. ಇದರಿಂದಾಗಿ ಅಮೀರ್ ಸೇರಿದಂತೆ ಇವರ ಪತ್ನಿ ಮಸೂಮ್ (20), ನೂನಾಸರ್ (35) ಮತ್ತು ಸದ್ದಾಂ ಹುಸೇನ್(35) ಗಾಯಗೊಂಡಿದ್ದರು. ನೂನ್ ಸರ್ ಮತ್ತು ಸದ್ದಾಂ ಹುಸೇನ್ ಬಿ.ಎ ಪದವಿದಾರರಾಗಿದ್ದು ಕೆಲಸಕ್ಕಾಗಿ ಸಕಲೇಶಪುರಕ್ಕೆ ವಲಸೆ ಬಂದು ಕೂಲಿ ಮಾಡುತ್ತಿದ್ದಾರೆ.





