ಹತ್ತನೇ ದಿನಕ್ಕೆ ಕಾಲಿಟ್ಟ ರೇಷ್ಮೆ ಕೃಷಿ ವಿದ್ಯಾರ್ಥಿಗಳ ಪ್ರತಿಭಟನೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
ಕುಶಾಲನಗರ, ಜು. 30: ರಾಜ್ಯದ ಏಕೈಕ ರೇಷ್ಮೆ ಕೃಷಿ ವಿಶ್ವವಿದ್ಯಾಲಯದ ರೇಷ್ಮೆ ಕೃಷಿ ವಿದ್ಯಾರ್ಥಿಗಳು ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಹಾಗೂ ಇನ್ನಿತರ ಅವಕಾಶಗಳನ್ನು ಕಲ್ಪಿಸಲು ಆಗ್ರಹಿ
ಸಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರವು ಇಂದು 10 ನೆ ದಿನಕ್ಕೆ ಕಾಲಿಟ್ಟಿದೆ. ರೇಷ್ಮೆ ಕೃಷಿ ಪದವೀಧರರಿಗೆ ಕೃಷಿಗೆ ಸಂಬಂಧಿಸಿದ ಎಲ್ಲ್ಲ ಸ್ನಾತಕೋತ್ತರ ಪದವಿಗಳಲ್ಲಿ ಕರ್ನಾಟಕದ ಎಲ್ಲಾ ವಿಶ್ವ ವಿದ್ಯಾನಿಲಯಗಳಲ್ಲಿ ಅವಕಾಶ ನೀಡಬೇಕು. ರಾಜ್ಯ ರೇಷ್ಮೆ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ಪುನಶ್ಚೇತನ ಮಾಡಬೇಕು. ಪ್ರತಿ ವರ್ಷ ರೇಷ್ಮೆ ಕೃಷಿ ಪದವಿ ಪಡೆದ ವಿ ದ್ಯಾರ್ಥಿಗಳಿಗೆ ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಹುದ್ದೆಗಳಿಗೆ ಆದ್ಯತೆ ನೀಡಬೇಕು. ಕೇಂದ್ರಿಯ ರೇಷ್ಮೆ ಮಂಡಳಿಯಲ್ಲಿ ರೇಷ್ಮೆ ಕೃಷಿ ಪದವೀದರರಿಗೆ ನೇಮಕಾತಿ ಆದ್ಯತೆ ನೀಡುವುದು. ಸೇರಿದಂತೆ ಇನ್ನಿತ್ಯಾದಿ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು.
ರೇಷ್ಮೆ ಕೃಷಿ ಕಾಲೇಜು ಆರಂಭವಾದ ವರ್ಷದಲ್ಲಿ ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳು ಐಸಿಎಅರ್‌ಜೆಅರ್‌ಎಫ್ ಪರೀಕ್ಷೆಯಲ್ಲಿ ಆರ್ಹರಾದವರಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶ ನೀಡುತ್ತಿದ್ದರು. ಆದರೆ 5-6 ವರ್ಷಗಳಿಂದ ಕೆಲವು ವಿಶ್ವವಿದ್ಯಾನಿಲಯಗಳು ರೇಷ್ಮೆ ಕೃಷಿ ಪದವಿದರರಿಗೆ ಅವಕಾಶ ನೀಡುತ್ತಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ರೇಷ್ಮೆ ಸಚಿವರಿಗೆ, ಕೃಷಿ ಸಚಿವರಿಗೆ ಹಾಗೂ ಮುಖ್ಯ ಮಂತ್ರಿಗಳಿಗೆ ಕೃಷಿ ವಿಶ್ವ ವಿದ್ಯಾನಿಲಯದ ಕುಲಪತಿಗಳು, ಮತ್ತು ಉಪಕುಲಪತಿಗಳಿಗೂ ಮನವಿ ನೀಡಲಾಗಿದೆ. ಆದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾ ನಿರತರು ದೂರಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯ ರೈತ ಸಂಘದ ಜೆ.ವಿ. ರಘುನಾಥರೆಡ್ಡಿ, ರೇಷ್ಮೆ ಕಾಲೇಜು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗೆ ವರದಾನವಾಗಿದೆ. ಇದರ ಅವನತಿಗೆ ಅವಕಾಶ ನೀಡುವುದಿಲ್ಲ. ಕಾಲೇಜಿನ ಅವಸಾನದ ದಿನಗಳು ಎದುರಾದರೆ, ರೈತ ಸಂಘದ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದರು. ಈ ಸಂದರ್ಭ ಪ್ರತಿಭಟನಾ ವಿದ್ಯಾರ್ಥಿಗಳು ಮಾತನಾಡಿ ನಮ್ಮ ಬೇಡಿಕೆ ಈಡೇರುವವವರಿಗೂ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಹೇಳಿದರು. ಜಿಕೆವಿಕೆ ಆಡಳಿತ ಮಂಡಳಿಯ ಮಾಜಿ ಸದಸ್ಯ ಕೆ.ಸಿ. ಶ್ರೀಕಂಠೇಗೌಡ. ಎಬಿವಿಪಿ ಸುರೇಶ. ರಾಜ್ಯದ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯ ಸದಸ್ಯ ಕೆ.ಸಿ. ಶಂಕರೇಗೌಡ ಸ್ಥಳಕ್ಕೆ ಭೇಟಿ ಮಾತನಾಡಿದರು.







