ಬೆಟ್ಟಿಂಗ್: ಆರು ಆರೋಪಿಗಳ ಬಂಧನ
ವಿಟ್ಲ, ಜು.30: ಕಬಡ್ಡಿ ಪಂದ್ಯಾಟಕ್ಕೆ ಬೆಟ್ಟಿಂಗ್ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಎಸ್ಸೈ ನಂದಕುಮಾರ್ ನೇತೃತ್ವದ ಪೊಲೀಸರ ತಂಡ ನಗದು ಸಹಿತ ಆರು ಆರೋಪಿಗಳನ್ನು ದಸ್ತಗಿರಿ ಮಾಡಿದ ಘಟನೆ ಪಾಣೆಮಂಗಳೂರು ಪೇಟೆಯಲ್ಲಿ ಶನಿವಾರ ನಡೆದಿದೆ.
ಬಂಧಿತ ಆರೋಪಿಗಳನ್ನು ಗಣೇಶ್(32), ಹನೀಫ್(28), ಶಂಕರ್(27), ಭಾಸ್ಕರ್ ದೇವಾಡಿಗ (45), ಇರ್ಷಾದ್(19), ಸಂಜೀವ ಪೂಜಾರಿ(46) ಎಂದು ಗುರುತಿಸಲಾಗಿದೆ. ಪಾಣೆಮಂಗಳೂರು ಪೇಟೆಯ ಅಂಗಡಿಯೊಂದನ್ನು ಕೇಂದ್ರೀ ಕರಿಸಿಕೊಂಡು ಕಳೆದ ಕೆಲ ದಿನಗಳಿಂದ ಈ ಕಬಡ್ಡಿ ಬೆಟ್ಟಿಂಗ್ ದಂಧೆ ನಡೆಯುತ್ತಿತ್ತು ಎನ್ನಲಾಗಿದೆ. ಆಸುಪಾಸಿನ ಹಲವು ಯುವಕರು ಇಲ್ಲಿ ಜಮಾಯಿಸಿ ದಂಧೆಯಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 11,333 ರೂ. ನಗದು ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ.
Next Story





