ನಕ್ಸಲ್ ಬೆಂಬಲಿತ ಬರಹಗಳಿರುವ ಬ್ಯಾನರ್, ಪೋಸ್ಟರ್ ವಶ
ಕಾರ್ಕಳ, ಜು.30: ನೂರಾಲ್‌ಬೆಟ್ಟು ಗ್ರಾಮ ಪುಂಜಾಜೆ ಎಂಬಲ್ಲಿ ಗುರುವಾರ ರಾತ್ರಿ ಹಾಕಲಾಗಿದ್ದ ನಕ್ಸಲ್ ಬೆಂಬಲಿತ ಬರಹಗಳಿರುವ ಬ್ಯಾನರ್ ಹಾಗೂ ಪೋಸ್ಟರ್‌ಗಳನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪುಂಜಾಜೆ ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕಂಪೌಂಡ್ ಮತ್ತು ಶೀಟು ಹಾಕಿ ನಿರ್ಮಿಸಿದ ತಾತ್ಕಾಲಿಕ ಬಸ್‌ಸ್ಟಾಂಡ್‌ಗೆ ಅಪರಿಚಿತ ನಕ್ಸಲೀಯರು ನಕ್ಸಲ್ ಬೆಂಬಲಿತ ಬರಹಗಳಿರುವ ಬ್ಯಾನರ್ ಹಾಗೂ ಧ್ವಜಗಳನ್ನು ಕಟ್ಟಿದ್ದು, ಇದರಲ್ಲಿ ಸರಕಾರದ ವಿರುದ್ಧ ಸಾರ್ವಜನಿಕರು ಬಂಡೇಳುವಂತೆ ಹಾಗೂ ನಕ್ಸಲ್‌ಗೆ ಬೆಂಬಲ ನೀಡುವಂತೆ ಕರೆಕೊಟ್ಟ ಬರಹಗಳಿದ್ದವು.
ಈ ಕುರಿತು ಮಾಹಿತಿ ಪಡೆದ ಪೊಲೀಸರು ಶುಕ್ರವಾರ ಬೆಳಗ್ಗೆ ಸ್ಥಳಕ್ಕೆ ತೆರಳಿ ನಕ್ಸಲ್ ಬೆಂಬಲಿತ ಬರಹಗಳಿರುವ ಐದು ಬ್ಯಾನರ್‌ಗಳು ಮತ್ತು ನಾಲ್ಕು ಪೋಸ್ಟರ್‌ಗಳು, ಮೂರು ಬಾವುಟಗಳು ಹಾಗೂ 7 ಮುದ್ರಿತ ಮತ್ತು 7 ಕೈಬರಹದಲ್ಲಿ ಬರೆದ ಒಟ್ಟು 14 ಭಿತ್ತಿಪತ್ರಗಳನ್ನು ವಶಪಡಿಸಿಕೊಂಡರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





