ಸರಕಾರಿ ಆದೇಶದಲ್ಲಿ ತಿದ್ದುಪಡಿ
ಉಡುಪಿ, ಜು.30: ಹೊಸದಾಗಿ ಯಾಂತ್ರೀಕೃತ ದೋಣಿ ನಿರ್ಮಿಸಲು ಮೀನುಗಾರಿಕಾ ಇಲಾಖೆಯಿಂದ ಸಾಧ್ಯತಾ ಪತ್ರವನ್ನು ಪಡೆಯುವುದನ್ನು ಕಡ್ಡಾಯಗೊಳಿಸಲಾಗಿತ್ತು. ಇಂತಹ ಹೊಸದೋಣಿಯನ್ನು 15 ವರ್ಷದೊಳಗೆ ನಿರ್ಮಿಸಲು ಶರ್ತವನ್ನು ವಿಧಿಸಲಾಗಿತ್ತು. ಇದೀಗ ಮೀನುಗಾರರ ಬೇಡಿಕೆಗೆ ಸ್ಪಂದಿಸಿರುವ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಹೊಸ ದೋಣಿಯನ್ನು ನಿರ್ಮಿಸಲು ನಿಗದಿಪಡಿಸಿದ ಅವಧಿಯನ್ನು ಒಂದು ವರ್ಷದಿಂದ ಎರಡು ವರ್ಷಕ್ಕೆ ಹೆಚ್ಚಿಸಿ ತಿದ್ದುಪಡಿ ಆದೇಶ ಹೊರಡಿಸಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟನೆ ತಿಳಿಸಿದೆ. ಎಂಐಟಿ ವಿದ್ಯಾರ್ಥಿ ನಾಪತ್ತೆ
ಮಣಿಪಾಲ, ಜು.30: ಮಣಿಪಾಲ ಎಂಐಟಿಯ ವಿದ್ಯಾರ್ಥಿ, ದಿಲ್ಲಿ ಮೂಲದ ಶ್ಯಾಮ್ ಸುಂದರ್ ಸಿಂಗ್ ಎಂಬವರ ಮಗ ಆಯೂಷ್ ಗೌರವ್ ಗುರುವಾರದಿಂದ ನಾಪತ್ತೆಯಾಗಿದ್ದಾರೆ.
ಶ್ಯಾಮ್‌ಸುಂದರ್ ತನ್ನ ಕುಟುಂಬದೊಂದಿಗೆ ಮಣಿಪಾಲಕ್ಕೆ ಬಂದಿದ್ದು, ಜು.29ರಂದು ಆಯೂಷ್ ಗೌರವ್‌ಗೆ ಕರೆ ಮಾಡಿದಾಗ ತಾನು ಲ್ಯಾಪ್‌ಟಾಪ್ ಸರ್ವಿಸ್ ಸೆಂಟರ್ ಬಳಿ ಇರುವುದಾಗಿ ತಿಳಿಸಿದ್ದು, ಬಳಿಕ ಕರೆ ಮಾಡಿದಾಗ ಮೊಬೈಲ್ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





