ಉತ್ತರಪ್ರದೇಶ: ಕೆಟ್ಟುನಿಂತ ಕಾರಿನಿಂದ ಎಳೆದೊಯ್ದು ತಾಯಿ ಮಗಳ ಸಾಮೂಹಿಕ ಅತ್ಯಾಚಾರ
![ಉತ್ತರಪ್ರದೇಶ: ಕೆಟ್ಟುನಿಂತ ಕಾರಿನಿಂದ ಎಳೆದೊಯ್ದು ತಾಯಿ ಮಗಳ ಸಾಮೂಹಿಕ ಅತ್ಯಾಚಾರ ಉತ್ತರಪ್ರದೇಶ: ಕೆಟ್ಟುನಿಂತ ಕಾರಿನಿಂದ ಎಳೆದೊಯ್ದು ತಾಯಿ ಮಗಳ ಸಾಮೂಹಿಕ ಅತ್ಯಾಚಾರ](https://www.varthabharati.in/sites/default/files/images/articles/2016/07/31/bulandshahr.jpg)
ಬುಲಂದೇಶ್ವರ್,ಜುಲೈ 31: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತಾಯಿ ಮತ್ತು ಮಗಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರಗೈದ ಬರ್ಬರ ಘಟನೆ ಉತ್ತರಪ್ರದೇಶದ ಬುಲಂದದೇಶ್ವರ್ನಿಂದ ವರದಿಯಾಗಿದೆ.ಮೂವತ್ತೈದು ವರ್ಷದ ಮಹಿಳೆ ಹಾಗೂ ಹದಿನಾಲ್ಕು ವರ್ಷವಯಸ್ಸಿನ ಪುತ್ರಿ ಅತ್ಯಾಚಾರಕ್ಕೊಳಗಾದವರು. ನೋಯಿಡದಿಂದ ಶಾಜಹಾನ್ಪುರಕ್ಕೆ ಕುಟುಂಬ ಸಮೇತ ಹೋಗುತ್ತಿದ್ದಾಗ ದೋಸ್ತ್ಪುರ ಗ್ರಾಮಕ್ಕೆ ತಲುಪಿದಾಗ ಐವರಿದ್ದ ತಂಡ ಕಾರನ್ನು ತಡೆದು ನಿಲ್ಲಿಸಿ ಈ ದುಷ್ಕೃತ್ಯವೆಸಗಿದೆ ಎಂದು ವರದಿ ತಿಳಿಸಿದೆ.
ರಸ್ತೆಯ ಮಧ್ಯೆ ಇದ್ದ ವಸ್ತು ಢಿಕ್ಕಿಯಾದ್ದರಿಂದ ಇವರ ಕಾರು ಕೆಟ್ಟು ನಿಂತಿತ್ತು. ನಂತರ ರಸ್ತೆಯ ಬದಿಯಲ್ಲಿ ಅಡಗಿ ಕೂತ ದುಷ್ಕರ್ಮಿಗಳ ತಂಡ ಕಾರು ಪ್ರಯಾಣಿಕರಿಗೆ ಬಂಧೂಕು ತೋರಿಸಿ ಕಾರು ಪ್ರಯಾಣಿಕರಿಂದ ಹನ್ನೊಂದು ಸಾವಿರ ರೂಪಾಯಿ, ಚಿನ್ನ, ಮೊಬೈಲ್ ಫೋನ್ಗಳನ್ನು ದೋಚಿದೆ. ಕುಟುಂಬದ ಪುರುಷರನ್ನು ಹಗ್ಗದಿಂದ ಕಟ್ಟಿಹಾಕಿ ತಾಯಿ ಮಗಳನ್ನು ಬೇರೊಂದು ಸ್ಥಳಕ್ಕೆ ಎಳೆದೊಯ್ದು ಅತ್ಯಾಚಾರಮಾಡಿದ್ದಾರೆ. ನಂತರ ಆರೋಪಿಗಳು ಓಡಿ ಪರಾರಿಯಾದರು ಎಂದು ವರದಿ ತಿಳಿಸಿದೆ.
ಹಾನಿಗೀಡಾದ ಕಾರನ್ನು ದುರಸ್ತಿಮಾಡಲು ಸಾಧ್ಯವಾಗದೆ ಅಂದು ರಾತ್ರಿಯಿಡೀ ಕುಟುಂಬ ನಿರ್ಜನ ಸ್ಥಳದಲ್ಲಿ ಇರಬೇಕಾಗಿ ಬಂದಿತು. ಶನಿವಾರ ಬೆಳಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಕುಟುಂಬ ದೂರು ನೀಡಿತ್ತು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈವರೆಗೂಯಾರನ್ನೂ ಬಂಧಿಸಿಲ್ಲ. ಘಟನೆ ನಡೆದ ಸ್ಥಳದಿಂದ ನೂರು ಮೀಟರ್ ದೂರದಲ್ಲಿ ಪೊಲೀಸ್ ಚೆಕ್ಪೋಸ್ಟ್ ಇತ್ತೆಂದು ವರದಿ ವಿವರಿಸಿದೆ.