ಬಿಜೆಪಿಯ ದಲಿತ ಸಂಸದರು ರಾಜೀನಾಮೆ ನೀಡಲಿ: ಕೇಜ್ರಿವಾಲ್
ದಲಿತ ಹಲ್ಲೆ ಪ್ರಕರಣ
ಹೊಸದಿಲ್ಲಿ, ಜು.31: ‘ತಥಾಕಥಿತ ಹಿಂದುತ್ವ ರಕ್ಷಕರು’ ಎಂಬ ಬಿಜೆಪಿ ಸಂಸದ ಉದಿತ್‌ರಾಜ್‌ರ ಟೀಕೆಗೆ ಒತ್ತು ನೀಡಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ದಲಿತರ ಮೇಲೆ ದೇಶಾದ್ಯಂತ ನಡೆಯುತ್ತಿರುವ ಹಲ್ಲೆಯನ್ನು ಪ್ರತಿಭಟಿಸಿ ಪಕ್ಷಕ್ಕೆ ರಾಜೀನಾಮೆ ನೀಡುವಂತೆ ಅವರಿಗೆ ಹಾಗೂ ಇತರ ದಲಿತ ಬಿಜೆಪಿ ಸಂಸದರಿಗೆ ಕರೆ ನೀಡಿದ್ದಾರೆ.
ಬಿಜೆಪಿ ಗೂಂಡಾಗಳು ದಲಿತರ ಮೇಲೆ ದೇಶಾದ್ಯಂತ ನಡೆಸುತ್ತಿರುವ ದಾಳಿಯನ್ನು ಪ್ರತಿಭಟಿಸಿ ಉದಿತ್‌ಜೀ ಹಾಗೂ ಬಿಜೆಪಿಯ ಎಲ್ಲ ದಲಿತ ಸಂಸದರು ರಾಜಿನಾಮೆ ನೀಡಬೇಕೆಂದು ಅವರು ಟ್ವೀಟಿಸಿದ್ದಾರೆ.
ಹಿಂದೂ ಧರ್ಮವು ಮತಾಂತರದಿಂದಾಗಿ ಅಪಾಯದಲ್ಲಿಲ್ಲ. ಆದರೆ, ಅವರ ತಥಾಕಥಿತ ರಕ್ಷಕರಿಂದ ಅಪಾಯಕ್ಕೆ ಸಿಲುಕಿದೆಯೆಂದು ಉದಿತ್‌ರಾಜ್ ನಿನ್ನೆ ಹೇಳಿದ್ದರು.
ಜನರು ತಮ್ಮದೇ ಧರ್ಮೀಯರ ಮೇಲೆ ಹಲ್ಲೆ ನಡೆಸುವ ಯಾವುದೇ ಧರ್ಮ ಪ್ರಪಂಚದಲ್ಲಿಲ್ಲ ಎಂದಿದ್ದ ಅವರು, ಕೇವಲ ದಲಿತರ ಮೇಲೇಕೆ ಹಲ್ಲೆ ನಡೆಯುತ್ತಿದೆ? ಎಂದು ಪ್ರಶ್ನಿಸಿದ್ದರು.
Next Story





