ಮನೆಯ ಮೇಲೆ ಸಂಘಪರಿವಾರ ದಾಳಿ
ಗೋಹತ್ಯೆ
ಮುಝಫ್ಫರ್‌ನಗರ,ಜು.31: ಇಲ್ಲಿಯ ಕಧ್ಲಿ ಗ್ರಾಮದಲ್ಲಿ ಗೋಹತ್ಯೆ ನಡೆದಿದೆ ಎಂದು ಆರೋಪಿಸಿ ದುಷ್ಕರ್ಮಿಗಳ ಗುಂಪೊಂದು ಮನೆಯ ಮೇಲೆ ದಾಳಿ ನಡೆಸಿದ್ದು,ಉದ್ವಿಗ್ನ ಸ್ಥಿತಿ ಸೃಷ್ಟಿಯಾಗಿದೆ. ಮನೆಯ ಮಾಲಕನನ್ನು ಬಂಧಿಸಿರುವ ಪೊಲೀಸರು ದಾಂಧಲೆ ನಡೆಸಿದವರ ವಿರುದ್ಧವೂ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಝಿಶಾನ್ ಕುರೇಶಿ ಮತ್ತು ಆತನ ಕುಟುಂಬ ಸದಸ್ಯರು ದನವೊಂದನ್ನು ಕೊಂದಿದ್ದಾರೆಂದು ಆರೋಪಿಸಿ ಸ್ಥಳೀಯ ಸಂಘಪರಿವಾರದ ಗುಂಪೊಂದು ಆತನ ಮನೆಗೆ ಮುತ್ತಿಗೆಯನ್ನು ಹಾಕಿ ಹಾನಿಗೊಳಿಸಿದೆ. ಸಕಾಲದಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೋಹತ್ಯೆ ಆರೋಪದಲ್ಲಿ ಕುಟುಂಬ ಸದಸ್ಯರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಕುರೇಶಿಯನ್ನು ಬಂಧಿಸಿದ್ದಾರೆ.
ದಂಗೆ,ಮನೆಗೆ ಹಾನಿ,ಅತಿಕ್ರಮ ಪ್ರವೇಶ ಇತ್ಯಾದಿ ಆರೋಪಗಳಲ್ಲಿ ಹಲವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿಯಿರುವುದರಿಂದ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
Next Story





