ಶಾಸಕರ ಅನುದಾನ ಬಿಡುಗಡೆ
ಮಂಗಳೂರು, ಜು.31: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯ 2015-16ನೆ ಸಾಲಿನ ಅನುದಾನದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಲಾಗಿದೆ.
ಪಂಜಿಕಲ್ಲು ಸರಕಾರಿ ಪ್ರೌಢಶಾಲೆ ಆಟದ ಮೈದಾನ ವಿಸ್ತರಣೆ ಕಾಮಗಾರಿಗೆ 2 ಲಕ್ಷ ರೂ., ಮಣಿನಾಲ್ಕೂರು ಗ್ರಾಮದ ಕುಟ್ಟಿಕಳ ಸರಕಾರಿ ಶಾಲೆಯ ಆವರಣದ ಬಳಿ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ 2.50 ಲಕ್ಷ ರೂ., ಉಳಿ ಗ್ರಾಮದ ಅಗರಗಂಡಿ ನೆಕ್ಕಿಲಪಲ್ಕೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ 2 ಲಕ್ಷ ರೂ., ಬಡಗ ಕಜೆಕಾರು ಗ್ರಾಮದ ಮಿತ್ತಳಿಕೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ 1 ಲಕ್ಷ ರೂ., ಕುರಿಯಾಳ ಗ್ರಾಮದ ಮೇಗಿನ ಕುರಿಯಾಳ ರಸ್ತೆ ಅಭಿವೃದ್ಧಿಗೆ 1.50 ಲಕ್ಷ ರೂ. ಮಂಜೂರಾಗಿದೆ.
ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆ ತಡ್ಯಾಲು ಗುಡ್ಡೆ ರಸ್ತೆ ಡಾಮರೀಕರಣಕ್ಕೆ 4 ಲಕ್ಷ ರೂ., ಬಿ ಮೂಡ ಗ್ರಾಮದ ನಂದರಬೆಟ್ಟು ಅಂಗನವಾಡಿ ರಸ್ತೆ ಕಾಂಕ್ರಿಟೀಕರಣಕ್ಕೆ 1.20 ಲಕ್ಷ ರೂ., ಕಡೇಶ್ವಾಲ್ಯ ಗ್ರಾಮದ ಸೇರಾ ಬಟ್ರಬೈಲು ರಸ್ತೆ ಕಾಂಕ್ರಿಟೀಕರಣಕ್ಕೆ 5 ಲಕ್ಷ ರೂ., ವೀರಕಂಬ ಗ್ರಾಮದ ಕೆಲಿಂಜ ಬೆಳತಡ್ಕ ಮಸೀದಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ 5 ಲಕ್ಷ ರೂ., ವೀರಕಂಬ ಗ್ರಾಮದ ಸಿರಿಪ್ರಾಜೆ-ಪಾತ್ರ ತೋಟ ರಸ್ತೆ ಕಾಂಕ್ರಿಟೀಕರಣಕ್ಕೆ 5 ಲಕ್ಷ ರೂ., ಮಂಚಿ ಸರಕಾರಿ ಹಿ.ಪ್ರಾ.ಶಾಲೆಯ ಕಟ್ಟಡ ದುರಸ್ತಿಗೆ 1 ಲಕ್ಷ ರೂ., ಬಾಳ್ತಿಲ ಗ್ರಾಮದ ಕಶೆಕೋಡಿ ಅಂಗನವಾಡಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು 1 ಲಕ್ಷ ರೂ. ಮಂಜೂರಾಗಿದೆ.
ಕೊಳ್ನಾಡು ಗ್ರಾಮದ ಕೋಜುಗೋಳಿ ಅಂಗನವಾಡಿ ಕಟ್ಟಡ ಕಾಮಗಾರಿಗೆ 1 ಲಕ್ಷ ರೂ., ಕೊಳ್ನಾಡು ಗ್ರಾಮದ ಹೊಸಮನೆ ಅಂಗನವಾಡಿ ಕಟ್ಟಡ ಕಾಮಗಾರಿಗೆ 1 ಲಕ್ಷ ರೂ., ನೆಟ್ಲಮುಡ್ನೂರು ಗ್ರಾಮದ ಭಗವಂತ ಕೋಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ ರೂ., ಬಡಗಬೆಳ್ಳೂರು ಗ್ರಾಮದ ಕಲ್ಪನೆ ವರಟೀಲು ರಸ್ತೆ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ ರೂ., ಸಜೀವ ಮುನ್ನೂರು ಗ್ರಾಮದ ಮುಲಾಯಿಬೆಟ್ಟು ರಸ್ತೆ ದುರಸ್ತಿ ಕಾಮಗಾರಿಗೆ 5 ಲಕ್ಷ ರೂ. ಮಂಜೂರುಗೊಳಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.





