ಆಟಿಡೊಂಜಿ ದಿನ ಕಾರ್ಯಕ್ರಮ
ಉಡುಪಿ, ಜು.31: ಉಡುಪಿ ಸಂತೋಷ್ ಇಂಡಸ್ಟ್ರೀಸ್ ಸ್ವರ್ಣಶಿಲ್ಪಿ ಬಳಗದ ವತಿಯಿಂದ ‘ಆಟಿಡೊಂಜಿ ದಿನ’ ಕಾರ್ಯಕ್ರಮವನ್ನು ಇತ್ತೀಚೆಗೆ ನಡೆಸಲಾಯಿತು.
ಕಾರ್ಯಕ್ರಮವನ್ನು ಕಲ್ಪನಾ ಮೋರೆ ಉದ್ಘಾಟಿಸಿದರು. ಈ ಸಂದರ್ಭ ವಿವಿಧ ಜಾನಪದ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. ಹಿರಿಯ ಕುಶಲಕರ್ಮಿ ಎರ್ಮಾಳು ರಮೇಶ ಆಚಾರ್ಯ, ಬಾಲಕೃಷ್ಣ ಆಚಾರ್ಯ, ಪ್ರಕಾಶ ಆಚಾರ್ಯ, ಉದಯ ಉಪ್ಪೂರು, ವಾಮನ್ ನಾಯಕ್, ದಿನೇಶ್ ಪ್ರಸಾದ್ ಕುಕ್ಕಿಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
Next Story





