‘ಪ್ರಕೃತಿ ಕಡೆ, ನಮ್ಮ ನಡೆ’ ವನಮಹೋತ್ಸವ ಸಪ್ತಾಹ ಸಮಾರೋಪ
ಉಳ್ಳಾಲ, ಜು.31: ಉಳ್ಳಾಲ ಹಝ್ರತ್ ಸೈಯದ್ ಮದನಿ ದರ್ಗಾ ಆಡಳಿತ ಸಮಿತಿ ಹಮ್ಮಿಕೊಂಡಿದ್ದ ‘ಪ್ರಕೃತಿ ಕಡೆ,ನಮ್ಮ ನಡೆ’ ವನಮಹೋತ್ಸವ ಸಪ್ತಾಹ ಕಾರ್ಯಕ್ರಮ ಒಂಬತ್ತು ಕೆರೆಯಲ್ಲಿರುವ ಟಿಪ್ಪುಸುಲ್ತಾನ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಪನಗೊಂಡಿತು. ಸಮಾರೋಪ ಸಮಾರಂಭದ ಪ್ರಯುಕ್ತ ಸೈಯದ್ ಮದನಿ ಚಾರಿ ಟೇಬಲ್ ಟ್ರಸ್ಟ್, ಟಿಪ್ಪು ಸುಲ್ತಾನ್ ಪಿಯು ಕಾಲೇಜು ಹಾಗೂ ಎನ್ನೆಸ್ಸೆಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವನಮಹೋತ್ಸವ ಆಚರಿಸಲಾಯಿತು. ಸೈಯದ್ ಮದನಿ ದರ್ಗಾಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ದರ್ಗಾ ಸಮಿತಿ ಸದಸ್ಯರಾದ ಅಬ್ದುಲ್ ಖಾದರ್, ಆಸಿಫ್ ಅಬ್ದುಲ್ಲಾ, ಫಾರೂಕ್ ಉಳ್ಳಾಲ್, ಅಬೂಬಕರ್ ಕೋಟೆಪುರ, ಮುಸ್ತಫಾ ಮಂಚಿಲ, ಮೊಯ್ದಿನ್ ಆಡಳಿತಾಧಿಕಾರಿ ಅಬ್ದುಲ್ಲತೀಫ್, ಲೆಕ್ಕಾಧಿಕಾರಿ ಶಿಹಾಬ್ ತಂಙಳ್, ಪರಿಸರ ಪ್ರೇಮಿಗಳಾದ ಕೃಷ್ಣಪ್ಪ, ಮಾಧವ ಉಳ್ಳಾಲ್, ಅಳೇಕಳ ಸೈಯದ್ ಮದನಿ ಶಾಲೆಯ ಮುಖ್ಯ ಶಿಕ್ಷಕ ಕೆಎಂಕೆ ಮಂಜನಾಡಿ, ಕೋಟೆಪುರ ಟಿಪ್ಪುಸುಲ್ತಾನ್ ಶಾಲೆಯ ಮುಖ್ಯ ಶಿಕ್ಷಕ ಎಂ.ಎಚ್.ಮಲಾರ್, ಶಿಕ್ಷಕರಾದ ರಸೂಲ್ ಖಾನ್, ನಸೀಮಾ ಕಲ್ಲಾಪು, ಸೈಯದ್ ಮದನಿ ಬನಾನ್ ಕಾಲೇಜಿನ ಪ್ರಾಂಶುಪಾಲೆ ಝಾಯಿದಾ, ಹಝ್ರತ್ ಮಹಿಳಾ ಕಾಲೇಜಿ ಶಿಕ್ಷಕಿ ಸಂಗೀತಾ, ಫಿಲೋಮಿನಾ, ಭವ್ಯಾ ಮೊದಲಾ ದವರು ಉಪಸ್ಥಿತರಿದ್ದರು. ಟಿಪ್ಪು ಸುಲ್ತಾನ್ ಕಾಲೇಜಿನ ಪ್ರಾಂಶುಪಾಲ ಡಿ.ಬಿ.ಮೊಯ್ದಿನ್ ಸ್ವಾಗತಿಸಿದರು. ಉದ್ಯಮಿ ನಾಪತ್ತೆ: ಅಪಹರಣದ ಶಂಕೆ
ಉಡುಪಿ, ಜು.31: ಉಡುಪಿಯ ಉದ್ಯಮಿಯೊಬ್ಬರು ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದು, ಅವರನ್ನು ಅಪಹರಿಸಿರುವ ಸಾಧ್ಯತೆ ಇದೆ ಎಂದು ಅವರ ತಾಯಿ ಮಣಿಪಾಲ ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂಶಯವನ್ನು ವ್ಯಕ್ತಪಡಿಸಿದ್ದಾರೆ.
ವಿದೇಶದಲ್ಲೂ ಉದ್ಯಮವನ್ನು ಹೊಂದಿರುವ ಉಡುಪಿಯ ಹೊಟೇಲ್ ದುರ್ಗಾ ಇಂಟರ್‌ನ್ಯಾಶನಲ್‌ನ ಮಾಲಕ ಕೆ.ಭಾಸ್ಕರ ಶೆಟ್ಟಿ(52)ಕಳೆದ ಗುರುವಾರದಿಂದ ನಾಪತ್ತೆಯಾಗಿದ್ದು, ಅವರನ್ನು ಅಪಹರಿಸಿರಬಹುದು ಎಂಬ ಬಗ್ಗೆ ಸಂಶಯವಿದೆ ಎಂದು ತಾಯಿ ಗುಲಾಬಿ ಶೆಡ್ತಿ ಮಣಿಪಾಲ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಜು.28ರ ಮಧ್ಯಾಹ್ನ್ನ ಮನೆಗೆ ಹೋಗುವುದಾಗಿ ತಿಳಿಸಿ ಭಾಸ್ಕರ ಶೆಟ್ಟಿ ಹೊಟೇಲ್‌ನಿಂದ ತೆರಳಿದ್ದು ಆ ಬಳಿಕ ಯಾರಿಗೂ ಸಿಗದೆ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಕೂಡ ಸ್ವಿಚ್ಡ್‌ಆಫ್ ಆಗಿದೆ. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉದ್ಯಮಕ್ಕೆ ಸಂಬಂಧಿಸಿದ ವೃತ್ತಿವೈಷಮ್ಯ, ಆಸ್ತಿ ಕುರಿತಂತೆ ಕೌಟುಂಬಿಕ ಕಲಹಗಳು ಇವರ ನಾಪತ್ತೆ ಹಿಂದೆ ಇರುವ ಸಾಧ್ಯತೆಯ ಕುರಿತು ಅನುಮಾನಗಳು ವ್ಯಕ್ತವಾಗುತ್ತಿವೆ. ಜಾಗ, ಕಟ್ಟಡಗಳ ಖರೀದಿ ಹಾಗೂ ದೇಶ, ವಿದೇಶಗಳಲ್ಲಿ ವಿವಿಧ ಉದ್ದಿಮೆಗಳಲ್ಲಿ ಮಾಲಕರು/ಪಾಲುದಾರಿಕೆಯನ್ನು ಹೊಂದಿದ್ದ ಅವರನ್ನು ಹಣಕ್ಕಾಗಿ ಭೂಗತ ಲೋಕದವರು ಅಪಹರಿಸಿರುವ ಸಾಧ್ಯತೆಯ ಕುರಿತೂ ಶಂಕೆ ಇದೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದಷ್ಟೇ ಪೊಲೀಸರು ಹೇಳುತ್ತಿದ್ದಾರೆ.





