ಆ.13: ರಂಗಮನೆಯಲ್ಲಿ ಯಕ್ಷ ಸಂಭ್ರಮ
ಸುಳ್ಯ, ಜು.31: ಇಲ್ಲಿನ ಹಳೆಗೇಟಿನಲ್ಲಿರುವ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆಯಲ್ಲಿ ಆ.13ರಂದು ಸಂಜೆ 5:45ಕ್ಕೆ ವನಜ ರಂಗಮನೆ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಯಕ್ಷ ಸಂಭ್ರಮ ನಡೆಯಲಿದೆ ಎಂದು ರಂಗ ನಿರ್ದೇಶಕ ಜೀವನ್‌ರಾಮ್ ಸುಳ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ದಿ. ವನಜಾಕ್ಷಿ ಜಯರಾಮರವರ ನೆನಪಿನಲ್ಲಿ ಕೊಡಮಾಡುವ 2016ನೆ ಸಾಲಿನ ವನಜ ರಂಗಮನೆ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದ ದೇವಕಾನ ಕೃಷ್ಣಭಟ್‌ರಿಗೆ ನೀಡಲಾಗುವುದು. ಶಾಸಕ ಎಸ್.ಅಂಗಾರರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಶಾಸಕಿ ಶಕುಂತಲಾ ಶೆಟ್ಟಿ ಉದ್ಘಾಟಿಸಲಿದ್ದಾರೆ. ಜಾನಪದ ವಿದ್ವಾಂಸ ಡಾ.ಹನೂರು ಕೃಷ್ಣಮೂರ್ತಿ, ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ, ನ್ಯಾಯವಾದಿ ಬೆಟ್ಟ ಪಿ. ಈಶ್ವರ ಭಟ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರಂಗಮನೆ ಸದಸ್ಯರಾದ ಕೆ.ಕೃಷ್ಣಮೂರ್ತಿ, ನಾಗೇಶ್ ರೈ ಉಪಸ್ಥಿತರಿದ್ದರು.
Next Story





