ಬೆಳ್ತಂಗಡಿ: ಶ್ರೀ ರತ್ನತ್ರಯ ತೀರ್ಥ ಕ್ಷೇತ್ರದಲ್ಲಿ ಆಹಾರೋತ್ಸವ

ಬೆಳ್ತಂಗಡಿ,ಆ.1:ಶ್ರೀ ರತ್ನತ್ರಯ ತೀರ್ಥ ಕ್ಷೇತ್ರದಲ್ಲಿ ಜೈನ್ ಮಿಲನ್ ಅಧ್ಯಕ್ಷರಾದ ಧನಕೀರ್ತಿ ಆರಿಗ ಅವರ ಅಧ್ಯಕ್ಷತೆಯಲ್ಲಿ ಆಹಾರೋತ್ಸವ ಕಾರ್ಯಕ್ರಮ ಜರಗಿತು.
ಆಹಾರೋತ್ಸವದ ಉದ್ಘಾನೆಯನ್ನುಪುಷ್ಪರಾಜ್ ಜೈನ್ ಅಭೀಷ್ ಬಿಲ್ಡ್ಸ್ ಮಂಗಳೂರು ಇವರು ಜಾದೂ ಮೂಲಕ ನೆರವೇರಿಸಿ ಜೈನ್ ಭಾಂದವರಿಗೆ ಮಿಲನ್‌ನ ಅಗತ್ಯತೆ ಬಗ್ಗೆ ತಿಳಿಸಿದರು.
ಪಾಕತಜ್ಞ ಜಗತ್ಪಾಲ ಆರಿಗ ಬೆಳ್ತಂಗಡಿ ಇವರನ್ನು ಸನ್ಮಾನಿಸಲಾಯಿತು. ನಿರ್ದೇಶಕರಾದ ಬಿ. ಸೋಮಶೇಖರ ಶೆಟ್ಟಿಯವರು ಧರಣೇಂದ್ರ ಕೆ. ಜೈನ್ ಇವರಿಗೆ ಪ್ರಮಾಣವಚನ ಭೋದಿಸಿ ಮಿಲನ್ ಸದಸ್ಯರಾಗಿಸಿ ಜೈನ್ ಆಹಾರ ಪದ್ಧತಿ ಹಾಗೂ ಮಹತ್ವಗಳನ್ನು ತಿಳಿಸಿದರು. ಕುಮಾರಿ ಅನನ್ಯ ಜೈನ್ ಸಂಸ್ಕಾರಗಳು ವಿಷಯದಲ್ಲಿ ಧಾರ್ಮಿಕ ಭಾಷಣ ಮಾಡಿದರು.
ಜೈನ್ ಮಿಲನ್ ಸಾಂತ್ವಾನ ನಿಧಿಯ ಬಗ್ಗೆ ಖಜಾಂಜಿ ಸುದರ್ಶನ ಹೆಗ್ಡೆ ಮಾಹಿತಿ ನೀಡಿದರು. ಸ್ಥಾಪಕಾಧ್ಯಕ್ಷರಾದ ಭೋಜರಾಜ ಹೆಗ್ಡೆ ಪಡಂಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಮಾರು 50ಕ್ಕೂ ಮೇಲ್ಪಟ್ಟು ತಿಂಡಿಗಳು ಆಹಾರೋತ್ಸವದ ವಿಶೇಷತೆಯಾಗಿತ್ತು. ಆಹಾರೋತ್ಸವದ ನಿರ್ದೇಶಕರಾದ ರಾಜಶ್ರೀ ಹೆಗ್ಡೆ ಸ್ವಾಗತಿಸಿ ಸರಸ್ವತಿ ನಾ ಉಜಿರೆ ಧನ್ಯವಾದವಿತ್ತರು. ಕಾರ್ಯಕ್ರಮವನ್ನು ಮಿಲನ್ ಕಾರ್ಯದರ್ಶಿ ಪಿ.ವೃಷಭ ಅರಿಗ ನಿರೂಪಿಸಿದರು.





