ಕಾಜೂರಿನ ರಹ್ಮಾನಿಯಾ ಪ್ರೌಢಶಾಲೆಯಲ್ಲಿ ಪೋಷಕರ ಹಾಗೂ ಶಿಕ್ಷಣ ಅಭಿವೃದ್ಧಿ ಸಮಿತಿಯ ಸಭೆ

ಬೆಳ್ತಂಗಡಿ,ಆ.1: ಕಾಜೂರಿನ ರಹ್ಮಾನಿಯಾ ಪ್ರೌಢಶಾಲೆಯಲ್ಲಿ ಪೋಷಕರ ಹಾಗೂ ಶಿಕ್ಷಣ ಅಭಿವೃದ್ಧಿ ಸಮಿತಿಯ ಸಭೆ ನಡೆಯಿತು.
SYS ನ ಅಧ್ಯಕ್ಷರಾದ ಡಿ.ಹೆಚ್.ಅಬ್ದುಲ್ ರಝಾಕ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಶಾಲಾ ಕ್ಯಾಲೆಂಡರ್‌ನ್ನು ಬಿಡುಗಡೆಗೊಳಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ನಿತಿನ್ ಕುಮಾರ್.ಪಿ. ಯವರು ಶಾಲಾ ನೀತಿ-ನಿಯಮ ಹಾಗೂ ವಿದ್ಯಾರ್ಥಿಗಳ ಪ್ರಗತಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ ರಕ್ಷಕರ ಸಂಘದ ಉಪಾಧ್ಯಕ್ಷ ಶಿಕ್ಷಣಾಭಿವೃದ್ಧಿ ಸಮಿತಿ ಸದಸ್ಯ ಆದ ಪಿ.ಎ. ಮಹಮ್ಮದ್, ದರ್ಗಾ ಶರೀಫ್ ಕಾಜೂರು ಇದರ ಮ್ಯಾನೇಜರ್ ಹಮೀದ್, ಶಿಕ್ಷಣ ಸಮಿತಿಯ ಸದಸ್ಯರಾದ ಅಬ್ದುಲ್ ರಹಿಮಾನ್, ಜೆ.ಹೆಚ್.ಅಬೂಬಕ್ಕರ್ ಸಿದ್ದಿಕ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಯಾಗಿ ಕಾಜೂರು ಡೆವಲಪ್‌ಮೆಂಟ್ ಕಮಿಟಿ K.D.C ಇದರ ಅಧ್ಯಕ್ಷ ಕೆ.ಯು.ಮಹಮ್ಮದ್ ಹನೀಫ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಝಿಯಾ, ಸೌದಿ ಅರೇಬಿಯಾದ ಪ್ರಧಾನ ಕಾರ್ಯದರ್ಶಿ ಜಿ.ಹೆಚ್.ಹಾರೀಸ್, ಸದಸ್ಯರಾದ ಉಮ್ಮರ್ ಕುಕ್ಕಾವು, K.D.C. ಬೆಂಗಳೂರು ಇದರ ಕೋಶಾಧಿಕಾರಿ ಉ.ಐ ಮಹಮ್ಮದ್ ಅಲಿ, ಕಾಜೂರಿನ SYS ಪ್ರಧಾನ ಕಾರ್ಯದರ್ಶಿ ಕೆ.ಯು.ಇಬ್ರಾಹಿಂ, SSF ಕಾಜೂರು ಘಟಕದ ಉಪಾಧ್ಯಕ್ಷ ಕೆ.ಹೆಚ್. ಸಿದ್ದಿಕ್ ಭಾಗವಹಿಸಿದ್ದರು. ಇವರಿಗೆ ನೂತನವಾಗಿ ನಿರ್ಮಾಣವಾಗುತ್ತಿರುವ ಶಾಲೆಯಲ್ಲಿ ಆಧುನಿಕ ತಾಂತ್ರಿಕ ಶಿಕ್ಷಣ ವ್ಯವಸ್ಥೆಯ ಅಳವಡಿಕೆಗೆ ಸಹಕರಿಸಲು ಮನವಿ ಸಲ್ಲಿಸಲಾಯಿತು. ಈ ಬಗ್ಗೆ ಸಹಕರಿಸುವ ಭರವಸೆ ನೀಡಿದರು.
ಶಿಕ್ಷಕಿ ಕುಬ್ರಾ ಸ್ವಾಗತಿಸಿ, ಧನ್ಯವಾದವನ್ನಿತ್ತರು. ಶಿಕ್ಷಕರಾದ ಮಹಮ್ಮದ್. ಕೆ. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಝರೀನಾ ಬಾನು ವಿದ್ಯಾರ್ಥಿಗಳ ಪ್ರಗತಿ ಪರಿಶೀಲನೆಯಲ್ಲಿ ಸಹಕರಿಸಿದರು.





