ಮೈಸೂರಿನ ಕೋರ್ಟ್ ಶೌಚಾಲಯದಲ್ಲಿ ನಿಗೂಢ ಸ್ಫೋಟ

ಮೈಸೂರು, ಆ.1: ಇಲ್ಲಿನ ಕೋರ್ಟ್ ಆವರಣದಲ್ಲಿರುವ ಶೌಚಾಲಯದಲ್ಲಿ ಸ್ಫೋಟ ಸಂಭವಿಸಿದ್ದು, ಶೌಚಾಲಯ ಕಿಟಿಕಿಯ ಗಾಜುಗಳು ಪುಡಿಪುಡಿಯಾಗಿದೆ, ಸರಳುಗಳು ಚೆಲ್ಲಾಪಿಲ್ಲಿಯಾಗಿದೆ.
ಸಂಜೆ 4:10ಕ್ಕೆ ಸ್ಫೋಟ ಸಂಭವಿಸಿದ್ದು. ಯಾರಿಗೂ ಯಾವುದೇ ಅಪಾಯವಾಗಿಲ್ಲ. ಶೌಚಾಲಯದ ಆವರಣದಲ್ಲಿ ತಾಮ್ರದ ತಗಡು, ಇಲೆಕ್ಟ್ರಾನಿಕ್ಸ್ ವಸ್ತು ಪತ್ತೆಯಾಗಿದೆ. ಶೌಚಾಲಯದಲ್ಲಿ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿದ್ದು, ಬಾಂಬ್ ನಿಷ್ಕ್ರೀಯ ದಳದ ಸಿಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
-
Next Story





