ಹಾಸನ:ಪರಿಹಾರ ನೀಡದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ - ಯೋಜನಾ ಕಛೇರಿ ಪೀಠೋಪಕರಣ ಜಪ್ತಿ

ಹಾಸನ,ಆ.1: ಭೂಮಿ ಕಸಿದುಕೊಂಡು ಪರಿಹಾರ ನೀಡದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಯೋಜನಾ ಕಛೇರಿಯ ಪೀಠೋಪಕರಣವನ್ನು ವಕೀಲರ ಸಮ್ಮುಖದಲ್ಲಿ ಜಪ್ತಿ ಮಾಡಲಾಯಿತು.
ನಗರದ ಹೊಳೆನರಸೀಪುರ ರಸ್ತೆ, ಕೈಗಾರಿಕ ಪ್ರದೇಶದಲ್ಲಿರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಕಛೇರಿಗೆ ಭೂಮಿ ಕಳೆದುಕೊಂಡ ರೈತರೊಂದಿಗೆ ಬಂದ ವಕೀಲರು ಜಪ್ತಿಗೆ ಮುಂದಾದರು. ರಿಂಗ್ ರಸ್ತೆ ಮಾಡುವ ಉದ್ದೇಶದಲ್ಲಿ ತಾಲ್ಲೂಕಿನ ದುದ್ದ ಹೋಬಳಿಯ ಹಂಡ್ರಂಗಿ ಗ್ರಾಮದಲ್ಲಿ ರಿಂಗ್ ರಸ್ತೆ ಮಾಡುವ ಉದ್ದೇಶದಲ್ಲಿ ಪರಿಹಾರ ಕೊಡುವುದಾಗಿ 36 ರೈತರಿಂದ ಜಮೀನು ಪಡೆದಿದ್ದರು. ಈ ವೇಳೆ ಕಳೆದ 10 ವರ್ಷಗಳಿಂದ ಯಾವ ಪರಿಹಾರ ನೀಡಿರಲಿಲ್ಲ. ರಿಂಗ್ ರಸ್ತೆಯು ಆಗಲಿಲ್ಲ. ಈ ವಿಚಾರವಾಗಿ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ಕೋರ್ಟ್ ಆದೇಶದ ಮೆರೆಗೆ ಪರಿಹಾರ ಹಣ ಕೊಡುವಂತೆ ವಕೀಲರಾದ ಜಿ. ರಂಗಸ್ವಾಮಿ ರೈತರ ಜೊತೆಯಲ್ಲಿ ರಸ್ತೆ ಅಭಿವೃದ್ಧಿ ನಿಗಮದ ಯೋಜನಾ ಕಛೇರಿಗೆ ತೆರಳಿದರು. ಕೂಡಲೇ ಹಣ ಪರಿಹಾರ ಹಣ ನೀಡಲು ಕೇಳಿದಾಗ ಸ್ಪಂದಿಸದ ಕಾರಣ ಕಛೇರಿ ಒಳಗೆ ಇದ್ದ ಪೀಠೋಪಕರಣಗಳಾದ ಕಂಪ್ಯೂಟರ್ ಟೇಬಲ್, ಪ್ರಿಂಟರ್, ಸ್ಕ್ಯಾನಿಂಗ್, ಕುರ್ಚಿಗಳು ಇತರೆಯನ್ನು ಹೊರ ಹಾಕಿದರು.
ಹಂಡ್ರಂಗಿ ಗ್ರಾಮದ ಪುಟ್ಟಸ್ವಾಮಿಯ ಒಂದು ಎಕರೆ ಭೂಮಿ ಬೆಲೆ ನ್ಯಾಯಾಲಯದ ಆದೇಶದಂತೆ 32 ಲಕ್ಷ ರೂಗಳಾಗಿದೆ. ಹಂಡ್ರಂಗಿ ಗ್ರಾಮದ ದಾಸೇಗೌಡರ ಎರಡುವರೆ ಎಕರೆಯ 2 ಕೋಟಿ ರೂ, ಯತೀಶ್ ಅವರ 24 ಗುಂಟೆ ಸೇರಿದಂತೆ ಇತರರು ಸೇರಿ 200 ಕೋಟಿಗೂ ಹೆಚ್ಚಿನ ಭೂಮಿ ಕಳೆದು ಕೊಂಡ ರೈತರಿಗೆ ಪರಿಹಾರ ನೀಡಬೇಕಾಗಿದೆ.





