ಗ್ರಾಮಗಳಲ್ಲೇ ಸರ್ಕಾರಿ ಸೇವೆ ಲಭ್ಯವಾಗಬೇಕು : ಹೆಚ್.ಎಸ್.ಪ್ರಕಾಶ್

ಹಾಸನ,ಆ.1: ಸರ್ಕಾರದ ಇಲಾಖೆಗಳು ಹಾಗೂ ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಸೌಲಬ್ಯ ಮತ್ತು ಸೇವೆಗಳನ್ನು ಒದಗಿಸಿದಾಗ ಜನಸಾಮಾನ್ಯರಲ್ಲಿ ಹೆಚ್ಚಿನ ಅನುಕೂಲ ದೊರೆಯಲಿದೆ. ಎಂದು ಶಾಸಕರಾದ ಹೆಚ್.ಎಸ್.ಪ್ರಕಾಶ್ ಅಭಿಪ್ರಾಯ ಪಟ್ಟಿದ್ದಾರೆ.
ತಾಲ್ಲೂಕಿನ ಸಾಲಗಾಮೆಯಲ್ಲಿ ಏರ್ಪಡಿಸಿದ್ದ ಕಂದಾಯ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮಾಂತರ ಪ್ರದೇಶಗಳಲ್ಲಿ ರೈತಾಪಿ ವರ್ಗ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿರುತ್ತದೆ. ಹೋಬಳಿ ಮತ್ತು ಗ್ರಾಮ ಮಟ್ಟಗಳಲ್ಲಿ ಕಂದಾಯ ಅದಾಲತ್ ಹಾಗೂ ಇತರರ ಚಟುವಟಿಕೆಗಳನ್ನು ನಡೆಸುವುದರಲ್ಲಿಂದ ತಮ್ಮೂರಿನಲ್ಲೇ ಸೇವಾ ಸೌಲಭ್ಯ ದೊರೆತಂತಾಗುತ್ತದೆ. ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದರು.
ಉಪವಿಭಾಗಾಧಿಕಾರಿ ಡಾ:ನಾಗರಾಜ್ ಮಾತನಾಡಿ ಮುಂದಿನ ದಿನಗಳಲ್ಲಿ ಹೆಚ್ಚು ಗ್ರಾಮಗಳಲ್ಲಿ ಕಂದಾಯ ಅದಾಲತ್ ನಡೆಸಿ ಸ್ಥಳದಲ್ಲೇ ಪರಿಹಾರ ದೊರಕಿಸಿಕೊಡಲಾಗುವ್ಯದು, ಜನಸಾಮಾನ್ಯರಿಗೆ ಅನಗತ್ಯ ಅಲೆದಾಟ ತಪ್ಪಿಸಲು ಶ್ರಮಿಸಲಾಗುತ್ತಿದೆ ಎಚಿದರು.
ಕಂದಾಯ ಅದಾಲತ್ ನಲ್ಲಿ ಹಲವು ಆರ್.ಟಿ.ಸಿ.ತಿದ್ದುಪಡಿ ಪೌತಿ ಖಾತೆ ಬದಲಾವಣೆ ಸೇರಿದಂತೆ ಹಲವು ಪ್ರಕರಣಗಳನ್ನು ಸ್ಥಳದಲ್ಲಿ ಇತ್ಯರ್ಥಪಡಿಸಲಾಯಿತು. ಸುಮಾರು 180 ಅರ್ಜಿಗಳು ಅದಾಲತ್‌ನಲ್ಲಿ ಸ್ವೀಕಾರವಾದವು. ಜಿ.ಪಂ.ಸದಸ್ಯರಾದ ಶಾರದಮ್ಮ, ತಾಲ್ಲುಕು ಪಂಚಾಯಿತಿ ಉಪಾಧ್ಯಕ್ಷರಾದ ನಾಗರತ್ನ, ತಾ;ಪಂ.ಸದಸ್ಯರಾದ ವಿರೂಪಾಕ್ಷ, ಶಿವನಂಜಪ್ಪ, ಸಾಲಗಾಮೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಯದುರಾಜ್, ಬೈಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವೀಣಾ ಪ್ರಕಾಶ್, ಉಗನೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸವಿತ ಸೀಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪರಮೇಶ್ ತಹಸೀಲ್ದಾರ್ ಮಂಜುನಾಥ್, ವಿವಿಧ ಇಲಾಖಾ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.





