ಭಟ್ಕಳ: ‘ಲೈಪ್ ಲೈನ್‌ಎಕ್ಸ್‌ಪ್ರೆಸ್ಗೆ ಅದೂ್ದರಿ ಸಾ್ವಗತ
ಡಿಸಿಯಿಂದ ಆರೋಗ್ಯ ಸೇವೆಗೆ ಚಾಲನೆ

ಭಟ್ಕಳ, ಆ.1: ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಆರೋಗ್ಯ ಭಾಗ್ಯಕರುಣಿಸಲು ಸಂಚಾರಿ ರೈಲು ಆಸ್ಪತ್ರೆ ‘ಲೈಪ್ ಲೈನ್‌ಎಕ್ಸ್‌ಪ್ರೆಸ್’ ಭಟ್ಕಳ ಪ್ರವೇಶಿಸಿದ್ದು, ಇಂದಿನಿಂದ ನಿಲ್ದಾಣದಲ್ಲಿ ಆರೋಗ್ಯ ಸೇವೆ ಆರಂಭಿಸಿದೆ. ಆರೋಗ್ಯ ಸೇವೆಗಳಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ನಕುಲ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಲೈಫ್‌ಲೈನ್ ಎಕ್ಸ್‌ಪ್ರಸ್‌ರೈಲಿನಲ್ಲಿ ಸೇವೆಯನ್ನು ಪಡೆಯಲು ಯಾವುದೇ ನಿರ್ಬಂಧ, ಸೀಮಾ ರೇಖೆಗಳಿರುವುದಿಲ್ಲ. ಎಲ್ಲರೂ ಆರೋಗ್ಯ ಸೇವೆಗಳನ್ನು ಪಡೆಯಬಹುದು ಎಂದರು.
ಸೀಳುತುಟಿಯವರು ಮತ್ತು ಮೂರ್ಚೆರೋಗದವರಿಗೆ ಇದೊಂದು ಆಶಾದಾಯಕ ಆಸ್ಪತ್ರೆಯಾಗಿದೆ. ಇಲ್ಲಿಗೆ ಮುಂಬೈ, ದಿಲ್ಲಿಯ ಹೆಸರಾಂತ ಆಸ್ಪತ್ರೆಗಳ ವೈದ್ಯರು ಆಗಮಿಸುತ್ತಿದ್ದು, ಅವರ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು. ದೇಶದ ವಿವಿಧ ಭಾಗಗಳ ಖ್ಯಾತ ವೈದ್ಯರು ಆಗಮಿಸುತ್ತಿರುವುದರಿಂದ ಇಲ್ಲಿನ ವೈದ್ಯರಿಗೆ ಒಂದು ದಿನದ ಅಧ್ಯಯನ ಶಿಬಿರವನ್ನೂ ಆಯೋಜಿಸಲಾಗಿದೆ ಎಂದರು.
ವಿಶ್ವದಲ್ಲಿಯೇ ರೈಲುಹಳಿಯ ಮೇಲೆ ಆಸ್ಪತ್ರೆಯನ್ನು ಆರಂಭಿಸಿದ ಹೆಮ್ಮೆ ನಮ್ಮ ದೇಶದ್ದು. ಬಳಿಕ ಚೀನಾ, ದಕ್ಷಿಣ ಆಫ್ರಿಕಾಗಳಲ್ಲಿ ಆರಂಭಿಸಲಾಗಿದೆ. ಬಾಂಗ್ಲಾದೇಶದಲ್ಲಿ ಬೋಟ್‌ನಲ್ಲಿ ಆಸ್ಪತ್ರೆಯನ್ನು ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
ಲೈಫ್‌ಲೈನ್‌ಎಕ್ಸ್‌ಪ್ರೆಸ್‌ನ ಉಸ್ತುವಾರಿ ಡಾ.ರಜನೀಶ್ ಮಾತನಾಡಿ, 25 ವರ್ಷಗಳ ಇತಿಹಾಸವಿರುವ ಈ ಆಸ್ಪತ್ರೆ ಈವರೆಗೆ 10 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಆರೋಗ್ಯ ಸೇವೆ ನೀಡಿದೆ. 1 ಲಕ್ಷಕ್ಕೂ ಅಧಿಕ ರೋಗಿಗಳಿಗೆ ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಿದೆ. 1991ರಲ್ಲಿ ಆರಂಭವಾದ ಆರೋಗ್ಯ ಸೇವೆ ಉತ್ತರ ಕನ್ನಡಕ್ಕೆ ಲಭ್ಯವಾದುದರ ಹಿಂದೆ ಸ್ಥಳೀಯ ಐಎಫ್‌ಎಸ್ ಅಧಿಕಾರಿ ದಾಮೋದರ ಅವರ ಶ್ರಮ ಇದೆ ಎಂದರು.
ಕಣ್ಣು, ಕಿವಿ, ಮೂಗು, ಗಂಟಲು ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ಸೇವೆ ಇಲ್ಲಿ ಲಭ್ಯವಿರುವುದು. ಉಚಿತ ಕನ್ನಡಕ, ಕಿವಿ ಕೇಳದವರಿಗೆ ಶ್ರವಣ ಸಾಧನವನ್ನೂ ಒದಗಿಸಲಾಗುವುದು. ಜನ್ಮದಿಂದ ಕಣ್ಣಿನ ತೊಂದರೆ ಇರುವವರಿಗೂ ಚಿಕಿತ್ಸೆ ಲಭ್ಯವಿದೆ ಎಂದರು.
ಮಾಜಿ ಶಾಸಕ ಜೆ.ಡಿ. ನಾಯ್ಕ ಮಾತನಾಡಿ, ಈ ಆಸ್ಪತ್ರೆಯಲ್ಲಿ ದೊರೆಯುವ ಆರೋಗ್ಯ ಸೇವೆಯು ಅತ್ಯುತ್ತಮವಾಗಿದೆ. ನುರಿತ ವೈದ್ಯರ ತಂಡ ಆಗಮಿಸಿ ಚಿಕಿತ್ಸೆ ನೀಡುತ್ತಾರೆ. ಸಾರ್ವಜನಿಕರು ಅಗತ್ಯ ಇದ್ದವರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು ಎಂದು ಕರೆ ನೀಡಿದರು.







