ಮಂಗಳೂರು : ನಿಶ್ಚಿತಾರ್ಥವಾಗಿದ್ದ ಯುವತಿ ಇನ್ನೊಬ್ಬನಿಂದ ವಿವಾಹ
ಮಂಗಳೂರು,ಆ.1: ವಿವಾಹ ನಿಶ್ಚಿತಾರ್ಥವಾಗಿದ್ದ ಕೇರಳದ ಯುವತಿಯೊಬ್ಬಳು ಗಲ್ಪ್ನಿಂದ ಮಂಗಳೂರು ವಿಮಾನ ನಿಲ್ದಾಣ ಕ್ಕೆ ಬಂದ ಸಂದರ್ಭದಲ್ಲಿ ನಾಪತ್ತೆಯಾಗಿ ನಗರದಲ್ಲಿ ವಿವಾಹವಾಗಿರುವ ಘಟನೆ ಸೋಮವಾರ ನಡೆದಿದೆ.
ಕೇರಳ ರಾಜ್ಯದ ಪಯ್ಯನ್ಯೂರು ಕೇಳೋತ್ ನಿವಾಸಿ ನವ್ಯ ವಿಮಾನ ನಿಲ್ದಾಣದಿಂದ ನಾಪತ್ತೆಯಾಗಿ ನಗರದಲ್ಲಿ ಅನಿನ್ ಎಂಬಾತನೊಂದಿಗೆ ವಿವಾಹವಾಗಿದ್ದಾಳೆ. ಗಲ್ಫ್ನಲ್ಲಿ ಉದ್ಯೋಗಿಯಾಗಿದ್ದ ಯುವತಿಗೆ ವಿವಾಹ ನಿಶ್ಚಿತಾರ್ಥವಾಗಿತ್ತು.ಮುಂಜಾನೆ ವೇಳೆಗೆ ಬಜಪೆ ವಿಮಾನ ನಿಲ್ದಾಣ ಮೂಲಕ ಕೇರಳಕ್ಕೆ ಆಗಮಿಸುತ್ತಿದ್ದಳು.
ಯುವಕ ಮತ್ತು ಆಕೆಯ ಪ್ರಿಯಕರ ಈರ್ವರು ಎಂಜಿನಿಯರ್ ಪದವೀದರರಾಗಿದ್ದು ಗಲ್ಫ್ನಲ್ಲಿ ಉದ್ಯೋಗದಲ್ಲಿದ್ದರು. ಅವರೀರ್ವರು ಸೋಮವಾರ ಮುಂಜಾನೆ ವಿಮಾನ ನಿಲ್ದಾಣಕ್ಕೆ ತಲುಪಿದ್ದರು ಎನ್ನಲಾಗಿದೆ. ವಿಮಾನ ನಿಲ್ದಾಣದಿಂದ ಯುವತಿ ನಾಪತ್ತೆಯಾಗಿರುವ ಬಗ್ಗೆ ಹೆತ್ತವರು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದೂರು ನೀಡಲು ಬಂದ ಸಂದರ್ಭದಲ್ಲಿ ಯುವತಿ ನಗರದಲ್ಲಿ ಮದುವೆಯಾಗಿರುವ ಬಗ್ಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾಳೆ.
Next Story