Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಎಲ್ಲರ ಚಿತ್ತ ರಿಯೋನತ್ತ..

ಎಲ್ಲರ ಚಿತ್ತ ರಿಯೋನತ್ತ..

ವಾರ್ತಾಭಾರತಿವಾರ್ತಾಭಾರತಿ1 Aug 2016 11:20 PM IST
share
ಎಲ್ಲರ ಚಿತ್ತ ರಿಯೋನತ್ತ..

ಜಗತ್ತಿನೆಲ್ಲ ಕ್ರೀಡಾಭಿಮಾನಿಗಳ ಕಣ್ಣು ಈಗ ಬ್ರೆಝಿಲ್‌ನ ರಿಯೊನತ್ತ ನೆಟ್ಟಿದೆ. ಹಲವಾರು ಕಾರಣಗಳನ್ನು ನೀಡಿ ಜಗತ್ತಿನ ಅತ್ಯಂತ ದೊಡ್ಡ ಕ್ರೀಡಾ ಕೂಟವಾಗಿರುವ ಒಲಿಂಪಿಕ್ಸ್ ನಡೆಸಲು ಅಸಾಧ್ಯವೆಂಬ ಹಿತಶತ್ರುಗಳ ಸವಾಲಿಗೆ ರಿಯೋ ಸಡ್ಡುಹೊಡೆದು ನಿಂತಿದೆ. ಈ ಹಿನ್ನೆಲೆಯಲ್ಲಿ ನಮ್ಮ ನಾಡಿನ ಪ್ರಗತಿಪರ ಚಿಂತಕಿ, ಲೇಖಕಿ ಡಾ. ಎಚ್. ಎಸ್. ಅನುಪಮಾರವರು ಒಲಿಂಪಿಕ್ಸ್ ನಗರಕ್ಕೆ ಭೇಟಿಕೊಟ್ಟು ಅಲ್ಲಿನ ವಿವಿಧ ಮಾಹಿತಿಗಳನ್ನು ಕಲೆಹಾಕಿದ ತಮ್ಮ ಸ್ವಾನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ. 

ಇವತ್ತು ರಿಯೊ ಡಿ ಜನೈರೊ ಎಲ್ಲ ತೆರನ ಪ್ರವಾಸಿ ಆಸಕ್ತಿಗಳಿಗೆ ನೀರೆರೆಯುವ ನಗರ. ಅದು ವ್ಯಾಪಾರಿ ಕೇಂದ್ರ. ಪ್ರವಾಸಿ ಕೇಂದ್ರ, ಆರೋಗ್ಯ ಪ್ರವಾಸಿ ಕೇಂದ್ರ, ಚಾರಣಿಗರ ನಗರ, ಬೆಚ್ಚನೆಯ ಬೀಚುಗಳ ನಗರ, ಫುಟ್ಬಾಲ್ ಪ್ರೇಮಿಗಳ ಕಣ್ಮಣಿ ಎಲ್ಲ ಆಗಿದೆ. ಅದು ಎಲ್‌ಜಿಬಿಟಿ ನಗರವೂ ಹೌದು. ಅತಿ ಹೆಚ್ಚು ಸಲಿಂಗಿ ಸಮುದಾಯದವರು ಇರುವ, ಬರುವ ನಗರ ಇದು. ಒಂದು ಪ್ರದೇಶವಿಡೀ ಅವರಿಗೆಂದೇ ಮೀಸಲಾಗಿದೆ. ರಿಯೊನಲ್ಲಿ ಹಣ್ಣಿದೆ ಹಾಲಿದೆ; ಕಾಫಿಯಿದೆ ವೈನಿದೆ; ಮೀನಿದೆ, ತರಕಾರಿ ಇದೆ; ಸಿಹಿತಿಂಡಿಯಿದೆ, ಬಾರ್ಬಿಕ್ಯೂ ಇದೆ; ಆಟವಿದೆ, ನರ್ತನವಿದೆ; ಹೋರಾಟವಿದೆ, ಸೋಲಿದೆ; ಕೊಳೆತು ಹೋಗುವಷ್ಟು ಸಂಪನ್ಮೂಲವಿದೆ, ಅನ್ನವಿಲ್ಲದೆ ಸಾಯುವಷ್ಟು ಬಡತನವೂ ಇದೆ.

2016ರ ಒಲಿಂಪಿಕ್ಸ್ ಎಂಬ ಆಟದ ಹಬ್ಬಕ್ಕೆ ಬ್ರೆಝಿಲ್‌ನ ರಿಯೊ ಡಿ ಜನೈರೊ ಗುಡಿಸಿ ಸಾರಿಸಿ ಸುಣ್ಣಬಣ್ಣವಾಗುತ್ತ ರಂಗವಲ್ಲಿ ಇಟ್ಟುಕೊಂಡು ತಯಾರಾಗುತ್ತಿದೆ. ಆದರೆ ಬ್ರೆಝಿಲ್ ಎಂಬ ಭಾರತ ಕ್ಕಿಂತ ದೊಡ್ಡ ಸಂಪದ್ಭರಿತ ರಾಷ್ಟ್ರಕ್ಕೆ ಕೆಲವರು ಶತ್ರುಗಳು, ಹಲವರು ಹಿತಶತ್ರುಗಳು. ಎಲ್ಲರ ಕಣ್ಣಿರುವುದು ಅಲ್ಲಿನ ಸಂಪತ್ತಿನ ಮೇಲೆ. ಕೆಂಗಣ್ಣು ಅದನ್ನು ಬಾಚಿಕೊಳ್ಳಲು ಸುಲಭ ಮಾಡದ ಸರಕಾರದ ಮೇಲೆ. ಹೀಗಿರುತ್ತ್ತಾ ‘ಜೀಕಾ ವೈರಸ್ ದಾಳಿ’ ಎಂಬ ಗುಲ್ಲು ಸೃಷ್ಟಿಸಿ ಒಲಿಂಪಿಕ್ಸ್‌ಗೆ ಮೊದಲ ಆತಂಕ ಒಡ್ಡಲಾಯಿತು. ‘ರಿಯೊ ಒಲಿಂಪಿಕ್ಸ್ ದಯನೀಯವಾಗಿ ವಿಫಲವಾಗಲು ಎಂಟು ಕಾರಣಗಳು’, ‘ಏಕೆ ಅಲ್ಲಿ ಒಲಿಂಪಿಕ್ಸ್ ನಡೆಯಬಾರದಿತ್ತು?’, ‘ವಿಫಲತೆಗೆ ಏಕೈಕ ಕಾರಣ’ ಎಂದೆಲ್ಲ ಪಟ್ಟಿ ಮಾಡಿ ಬ್ರೆಝಿಲ್‌ನ ಉದ್ದಗಲ ಆಳ ಅಳೆದು ತೀರ್ಪು ಕೊಡಲಾ ಯಿತು. ಬ್ರೆಝಿಲ್‌ನ ದಿಲ್ಮಾ ರೌಸೆಫ್ ಅವರ ಎಡಪಂಥೀಯ ಸರಕಾರ ಸಂಪೂರ್ಣ ಭ್ರಷ್ಟವಾಗಿ, ದಿವಾಳಿಯಾಗಿ ಆಗಲೇ ಉರುಳಿ ಬಿದ್ದಿದೆ; ರಿಯೊದಲ್ಲಿ ನಗರಾಡಳಿತವೇ ಇಲ್ಲವೆಂಬಷ್ಟು ಕಾನೂನು ಹದಗೆಟ್ಟಿದೆ ಇತ್ಯಾದಿಯಾಗಿ ಪಶ್ಚಿಮದ ರಾಜಕಾರಣ ವಿಶ್ಲೇಷಕರು ಬರೆದಾಯಿತು. ಅದೇನೇ ಇರಲಿ, ರಿಯೊ ಒಲಿಂಪಿಕ್ಸ್ ವಿಫಲವಾಗುತ್ತದೆ ಎಂದು ಆರು ತಿಂಗಳಿನಿಂದ ಕಣಿ ನುಡಿಯುತ್ತಿರುವವರ ಮಾತು ಸುಳ್ಳಾಗಲೆಂದು ಹಲವರು ಶ್ರಮಿಸುತ್ತಿದ್ದಾರೆ. ಕ್ರೀಡಾಳುಗಳು ಕೈಕಾಲು ಹುರಿ ಮಾಡಿಕೊಳ್ಳುತ್ತಿದ್ದಾರೆ. ಸಕಲೆಂಟು ವೃತ್ತಿ, ಹವ್ಯಾಸ, ವರ್ಗ, ಹಿತಾಸಕ್ತಿಯ ಜನರೂ ತಂತಮ್ಮ ಉದ್ದೇಶ ಸಾಧನೆಗೆ ರಿಯೊಗೆ ಹೊರಟು ನಿಂತಿದ್ದಾರೆ. ಒಟ್ಟಾರೆ ಈಗ ಎಲ್ಲರ ಚಿತ್ತ, ರಿಯೋನತ್ತ... 

ನಾವೂ ರಿಯೋಗೆ ಹೋಗಿಬಂದೆವು. ಸೊಳ್ಳೆಗಳಿಂದ ಹರಡುವ ಜೀಕಾ ವೈರಸ್ ಕಾಯಿಲೆ ಇನ್ನೇನು ಬ್ರೆಝಿಲ್‌ನಿಂದಾಚೆ ದ. ಅಮೆರಿಕ ತುಂಬ ಪಸರಿಸಿ, ವಿಶ್ವದೆಲ್ಲೆಡೆ ವ್ಯಾಪಿಸಿ, ಸೊಳ್ಳೆಗಳಂತೆಯೇ ಮನುಷ್ಯರು ಪುತಪುತನೆ ಸತ್ತು ನಾಶಗೊಳ್ಳುವರೆಂದು ಜಗತ್ತು ಬೆಚ್ಚುವ ಹೊತ್ತಿಗೆ ನಾವು ಬ್ರೆಝಿಲ್‌ಗೆ ಹೊರಟುಬಿಟ್ಟಿದ್ದೆವು. ತುಟ್ಟಿಯ ಕಾರ್ನಿವಾಲ್ ಸೀಸನ್ ತಪ್ಪಿಸಿ ಜೀಕಾ ಸೀಸನ್ನಿನಲ್ಲಿ ರಿಯೊ ಡಿ ಜನೈರೊ ತಲುಪಿದೆವು. ಜೀಕಾ ಭೀತಿ ಆಧಾರರಹಿತ ಹಾಗೂ ವ್ಯಾಕ್ಸೀನು ಕಂಪೆನಿಗಳು ಹುಟ್ಟಿಸಿರಬಹುದಾದ ಸುಳ್ಳುಭಯ ಎಂದು ನಂತರ ತಿಳಿದರೂ ಹೊರಟಾಗ ನಮಗಷ್ಟೇನೂ ತಲೆಬಿಸಿಯಾಗಿರಲಿಲ್ಲ. ಎಷ್ಟೆಂದರೂ ಸೊಳ್ಳೆಗಳ, ರೋಗಗಳ, ರೋಗಿಗಳ ನಡುವೆ ಇರುವವರಲ್ಲವೆ? ಸೊಳ್ಳೆ ಕಚ್ಚದಂತೆ ಮುಖ ಕೈಮೈ ಮುಚ್ಚಿಕೊಂಡು, ಎಲ್ಲೆಡೆ ರಿಪೆಲೆಂಟ್ ಬಳಿದುಕೊಳ್ಳುತ್ತ ಗಗನಯಾನಿಗಳಂತೆ ತೋರುತ್ತಿದ್ದ ಸಹ ಪ್ರವಾಸಿಗರನ್ನು ನೋಡಿ ನಗುತ್ತಿದ್ದೆವು. ರಿಯೊ ಎಂಬ ಸುಂದರ ನಗರವನ್ನು ವಿಮಾನ ಸುತ್ತುಹಾಕಿ ಇಳಿಯತೊಡಗಿದ ಕೂಡಲೇ ಬಹುಶಃ ಎಲ್ಲರಿಗೂ ಜೀಕಾ ಮರೆತು ಹೋಗಿರಬೇಕು. ಅಷ್ಟು ಚೆಲುವಾದ, ಕಡಲ ಸೆರಗಿನಲ್ಲಿ ಟಿಜುಕ ಕಾಡಿನಿಂದಾವೃತವಾದ ಆಧುನಿಕ ಹಸಿರು ನಗರ ರಿಯೊ. ನಮ್ಮ ನಿರೀಕ್ಷೆಗಿಂತಲೂ ಚೆಲುವಾಗಿ, ವಿಶಿಷ್ಟವಾಗಿ ಕಂಡ ನಗರ ಅದು.

ನದಿಯಲ್ಲದ ಜನವರಿಯ ನದಿ
 
‘ರಿಯೊ ಡಿ ಜನೈರೊ’ ಪದಗುಚ್ಛದ ಅರ್ಥ ರಿವರ್ ಆಫ್ ಜನವರಿ ಅಥವಾ ಜನವರಿಯ ನದಿ. ಕ್ರಿ. ಶ. 1502ರ ಜನವರಿ ಒಂದನೇ ತಾರೀಕು ಪೋರ್ಚುಗೀಸ್ ನೌಕಾ ಸಾಹಸಿಗಳ ಗುಂಪು ತುಪಿ, ಪುರಿ, ಬೊತೊಕುಡೊ ಜನರಿದ್ದ ಭೂಪ್ರದೇಶವನ್ನು ತಲುಪಿತು. ಸುತ್ತಮುತ್ತ ನೀರಿನಿಂದಾವೃತವಾಗಿದ್ದ ಭೂ ಪ್ರದೇಶ ಯಾವುದೋ ನದಿಯ ಅಳಿವೆಯಂತೆ ಅವರಿಗೆ ಕಾಣಿಸಿತು. ಜನವರಿ ಒಂದನೆ ತಾರೀಕು ಕಂಡದ್ದರಿಂದ ಅದಕ್ಕೆ ಜನವರಿಯ ನದಿ - ರಿಯೊ ಡಿ ಜನೈರೊ ಎಂದು ಪೋರ್ಚುಗೀಸ್ ಭಾಷೆಯಲ್ಲಿ ಕರೆದರು. ಹಾಗೆ ನೋಡಿದರೆ ಅದು ನದಿಯಲ್ಲ, ಕೊಲ್ಲಿ, ‘ಬೇ’. ಅತ್ತ ದಕ್ಷಿಣ ಅಮೆರಿಕದ ಪೆಸಿಫಿಕ್ ದಂಡೆಯ ಪೆರುವಿನಲ್ಲಿ ಸ್ಪೇನಿಗರು ಲೀಮಾ ನಗರ ಕಟ್ಟಿದರೆ ಇತ್ತ ಪೂರ್ವ ದಂಡೆಯಲ್ಲಿ ಪೋರ್ಚುಗೀಸರು 1565ರಲ್ಲಿ ‘ಸೈಂಟ್ ಸೆಬಾಸ್ಟಿಯನ್ ರಿಯೊ ಡಿ ಜನೈರೊ’ ನಗರ ಕಟ್ಟಿದರು. ಪೋರ್ಚುಗಲ್ಲಿನ ರಾಣಿ ನೆಪೋಲಿಯನ್ನನ ಯುದ್ಧವಿಜಯಗಳಿಗೆ ಹೆದರಿ ತನ್ನ ರಾಜಧಾನಿಯನ್ನು ಲಿಸ್ಬನ್ನಿನಿಂದ ರಿಯೊಗೆ ಸ್ಥಳಾಂತರಿಸಿದ ಕಾಲದಲ್ಲಿ ‘ಯುನೈಟೆಡ್ ಕಿಂಗ್‌ಡಂ ಆಫ್ ಪೋರ್ಚುಗಲ್’ನ ರಾಜಧಾನಿಯಾಗಿ ರಿಯೊ ಮೆರೆಯಿತು. ಯೂರೋಪಿನ ಹೊರಗಿರುವ ಯೂರೋಪ್ ರಾಜವಂಶದ ರಾಜಧಾನಿ ಎಂಬ ಹೆಗ್ಗಳಿಕೆ ರಿಯೊಗೆ ದೊರೆಯಿತು. ನಗರಕ್ಕೆ ಲಿಸ್ಬನ್ನಿನ ರಾಜಪರಿವಾರ ಗಣ್ಯರೊಡನೆ ಬಂದಿಳಿಯಿತು. ಮೊದಲು ಪೋರ್ಚುಗೀಸ್ ಆಳ್ವಿಕರ ಮುಖ್ಯಸ್ಥಾನವಾಗಿದ್ದದ್ದು 1763ರ ನಂತರ ಬ್ರೆಝಿಲ್‌ನ ರಾಜಧಾನಿಯಾಯಿತು. 1960ರಲ್ಲಿ ಬ್ರಸಿಲಿಯಾಗೆ ರಾಜಧಾನಿ ಸ್ಥಳಾಂತರವಾದರೂ ರಿಯೊ ಬ್ರೆಝಿಲ್‌ನ ವಾಣಿಜ್ಯ ರಾಜಧಾನಿಯಾಗಿ ಮುಂದುವರಿದಿದೆ.


ಪೋರ್ಚುಗಲ್‌ನ ಹೊರಗಿರುವ ಅತಿ ದೊಡ್ಡ ಪೋರ್ಚುಗೀಸ್ ನಗರ ರಿಯೊ 65 ಲಕ್ಷ ಜನಸಂಖ್ಯೆ ಹೊಂದಿದೆ. ಸುತ್ತಮುತ್ತಲ ಪ್ರದೇಶವೂ ಸೇರಿದರೆ 1.3 ಕೋಟಿ ಜನ ಇಲ್ಲಿದ್ದಾರೆ. ಅವರಲ್ಲಿ ಶೇ. 51 ಬಿಳಿಯರು, ಶೇ. 11 ಕರಿಯರು ಹಾಗೂ ಉಳಿದವರು ಅನೇಕ ಕುಲ, ತಳಿ, ಜನಾಂಗಗಳಿಗೆ ಸೇರಿದವರು. ಮಿಶ್ರತಳಿಯ ಮೆಸ್ಟಿಜೊಗಳೂ ಬಹಳಸಂಖ್ಯೆಯಲ್ಲಿದ್ದಾರೆ. ಇಲ್ಲಿ ಹೆಂಗಸರ ಸಂಖ್ಯೆಯೇ ಹೆಚ್ಚು ಶೇ. 53 ಇದೆ! ಪೋರ್ಚುಗೀಸರು ಬರುವ ಮುನ್ನ ರಿಯೊನಲ್ಲಿ 20 ವಿವಿಧ ಭಾಷೆಗಳನಾಡುವ 7 ಸ್ಥಳೀಯ ಕುಲಗಳಿದ್ದವು. ನಂತರ ಅಪಾರ ಸಂಖ್ಯೆಯ ವಿದೇಶೀಯರು ವಲಸೆ ಬಂದರು. ಹಾಗೆ ಯೂರೋಪಿನಿಂದ ಬಂದವರಲ್ಲಿ ಬಹುಪಾಲು ಜನ ಕೃಷಿ ಕೆಲಸ ಮಾಡುವವರೇ ಇದ್ದು ಹೊಸ ಅವಕಾಶ ಅರಸಿ ಬಂದಿದ್ದರು. ಅಂಗೋಲಾ, ಮೊಜಾಂಬಿಕ್ ಮತ್ತಿತರ ಪ. ಆಫ್ರಿಕಾ ನೆಲಗಳಿಂದ ಕರಿಯರು ಬಂದರು. ಆಫ್ರಿಕಾದ ಕರಿಯರ ಸಂಸ್ಕೃತಿಯಿಂದಲೇ ಸಾಂಬಾ ನೃತ್ಯ ಮತ್ತು ಸಾಂಬಾ ಉತ್ಸವ ‘ಕಾರ್ನಿವಾಲ್’ ರೂಪ ತಳೆದವು. ಇವತ್ತು ರಿಯೊ ಡಿ ಜನೈರೊ ಎಲ್ಲ ತೆರನ ಪ್ರವಾಸಿ ಆಸಕ್ತಿಗಳಿಗೆ ನೀರೆರೆಯುವ ನಗರ. ಅದು ವ್ಯಾಪಾರಿ ಕೇಂದ್ರ. ಪ್ರವಾಸಿ ಕೇಂದ್ರ, ಆರೋಗ್ಯ ಪ್ರವಾಸಿ ಕೇಂದ್ರ, ಚಾರಣಿಗರ ನಗರ, ಬೆಚ್ಚನೆಯ ಬೀಚುಗಳ ನಗರ, ಫುಟ್ಬಾಲ್ ಪ್ರೇಮಿಗಳ ಕಣ್ಮಣಿ ಎಲ್ಲ ಆಗಿದೆ. ಅದು ಎಲ್‌ಜಿಬಿಟಿ ನಗರವೂ ಹೌದು. ಅತಿ ಹೆಚ್ಚು ಸಲಿಂಗಿ ಸಮುದಾಯದವರು ಇರುವ, ಬರುವ ನಗರ ಇದು. ಒಂದು ಪ್ರದೇಶವಿಡೀ ಅವರಿಗೆಂದೇ ಮೀಸಲಾಗಿದೆ. ರಿಯೊನಲ್ಲಿ ಹಣ್ಣಿದೆ ಹಾಲಿದೆ; ಕಾಫಿಯಿದೆ ವೈನಿದೆ; ಮೀನಿದೆ, ತರಕಾರಿ ಇದೆ; ಸಿಹಿತಿಂಡಿಯಿದೆ, ಬಾರ್ಬಿಕ್ಯೂ ಇದೆ; ಆಟವಿದೆ, ನರ್ತನವಿದೆ; ಹೋರಾಟವಿದೆ, ಸೋಲಿದೆ; ಕೊಳೆತು ಹೋಗುವಷ್ಟು ಸಂಪನ್ಮೂಲವಿದೆ, ಅನ್ನವಿಲ್ಲದೆ ಸಾಯುವಷ್ಟು ಬಡತನವೂ ಇದೆ. ಎದ್ದು ಕಾಣುವಂತೆ ಅಲ್ಲಿಲ್ಲದೆ ಇದ್ದದ್ದು ಇಂಗ್ಲಿಷ್ ಮಾತ್ರ. ಎಂದೇ ಇಡಿಯ ರಿಯೊವನ್ನು ನಾವು ಕನ್ನಡದಲ್ಲೆ ಮಾತನಾಡಿಸಿ ಬಂದೆವು!

ಅರಣ್ಯ ನಗರಿ - ಬೆಚ್ಚನೆಯ ಬೀಚುಗಳು

ಗ್ವನಬಾರಾ ಬೇಯ ನೆಲಮುಗಿಲುಗಳ ನಡುವೆ ಹರಡಿಕೊಂಡಿರುವ ಬೆಟ್ಟ-ಅರಣ್ಯ ಪ್ರದೇಶದಲ್ಲಿ ರಿಯೊ ನಗರ ಅರಳಿದೆ. ಅದರ ಚೆಲುವಿನಲ್ಲಿ ಎದ್ದು ಕಾಣುವ ಅಂಶವೆಂದರೆ ನಗರ ಹೊಂದಿರುವ ಕಾಡು. ನಮ್ಮೂರುಗಳಲ್ಲಿ ಹೈವೇ ಅಗಲೀಕರಣ ಮತ್ತು ರಸ್ತೆ ನಿರ್ಮಾಣಕ್ಕೆಂದು ಕುಸಿದು ಬಿದ್ದ ಗುಡ್ಡಗಳು ಹಾಗೂ ಮರಗಳ ಮಾರಣಹೋಮ ನೋಡಿ ದುಃಖಿಸುತ್ತಿದ್ದವರಿಗೆ ರಿಯೊ ನಗರ ಈ ಪರಿ ಅರಣ್ಯ ಉಳಿಸಿಕೊಂಡದ್ದು ಖುಷಿ ನೀಡಿತು. ರಿಯೊನಲ್ಲಿರುವುದು ವಿಶ್ವದ ಅತಿ ದೊಡ್ಡ ‘ನಗರ ಅರಣ್ಯ’. ಬೃಹತ್ ಜನಸಂಖ್ಯೆಯ ಹೊರತಾಗಿಯೂ ಕಾಡನ್ನು ಹಾಗೇ ಉಳಿಸಿಕೊಂಡು ಬರಲು ಯತ್ನಿಸಲಾಗಿದೆ. ಕೋಪಕಬಾನಾ ಎಂಬ ಸಮುದ್ರ ದಂಡೆಯಲ್ಲಿದ್ದ ಅರಮನೆ ಮತ್ತು ಮುಖ್ಯ ನಗರದ ನಡುವೆ ಸಂಪರ್ಕ ಕಲ್ಪಿಸಲು ನಗರದ ಮೊದಲ ಸುರಂಗಮಾರ್ಗ ಕೊರೆಯಲಾಯ್ತು. ಈಗ ರಿಯೊ ನಗರದಲ್ಲಿ 26 ಸುರಂಗಗಳಿವೆ. ಬೆಟ್ಟಸಾಲುಗಳ ಕೊರೆದು ಮಾಡಿದ ಸುರಂಗಗಳು ನಗರದ ಹಲವು ಭಾಗಗಳನ್ನು ಬೆಸೆಯುತ್ತವೆ. 65 ಲಕ್ಷ ಜನರಿರುವ ನಗರದಲ್ಲಿ ರಸ್ತೆಗಳು ಕಿಕ್ಕಿರಿದ ಹಾಗೆನಿಸಲಿಲ್ಲ. ಟ್ರಾಫಿಕ್ ಒತ್ತಡ ಕೈಕೊಡಲಿಲ್ಲ. ರಸ್ತೆಗಳ ಪಕ್ಕ ಸೈಕಲ್‌ನವರಿಗೂ, ನಡೆಯುವವರಿಗೂ ಪ್ರತ್ಯೇಕ ಜಾಗ ಕಲ್ಪಿಸಲಾಗಿದೆ. ಅಂಟಾರ್ಕ್ಟಿಕಾ ಕಡೆಯಿಂದ ಶೀತಜಲ ಹರಿವು ಇದ್ದರೂ ಬೆಚ್ಚನೆಯ ನೀರಿನ ಬೀಚುಗಳು ಅಲ್ಲಿವೆ. ಇಪಾನೆಮಾ ಮತ್ತು ಕೋಪಕಬಾನಾ ಪ್ರಮುಖ ದಂಡೆಗಳು. ‘ದ ಗರ್ಲ್ ಫ್ರಂ ಇಪಾನೆಮಾ’ ಎಂಬ ಒಂದು ಪ್ರಖ್ಯಾತ ಬ್ರೆಝಿಲ್ ಜಾಝ್ ಹಾಡು 1962ರಲ್ಲಿ ಬಂದಿದೆ. ಇಪಾನೆಮಾದಲ್ಲಿಳಿದ ಕೂಡಲೇ ಬಸ್ಸಿನಲ್ಲಿದ್ದ ಸಹ ಪ್ರವಾಸಿಗರು ಆ ಹಾಡು ಹಾಡತೊಡಗಿದರು. ಪ್ರವಾಸಿಗರಿಂದ, ಅವರ ನಾನಾ ಚಟುವಟಿಕೆಗಳಿಗೆ ಇಂಬು ಕೊಡುವ ಕಾಯಕದವರಿಂದ ಆ ಬೀಚುಗಳು ತತ್ತರಿಸುತ್ತಿದ್ದವು. ಮೈಲುಗಟ್ಟಲೆ ಉದ್ದದ ಬೀಚಿನಲ್ಲಿ ಸಾವಿರಗಟ್ಟಲೆ ಪ್ರವಾಸಿಗರು. ಬಿಸಿಲು ಕಾಯಿಸುತ್ತ, ಸಮುದ್ರ ಸ್ನಾನ ಮಾಡುತ್ತ, ದೋಣಿ ವಿಹಾರ ಮಾಡುತ್ತ, ಈಜುತ್ತ, ಬೀಚ್ ಆಟಗಳನಾಡುತ್ತ ಕುಣಿವ ಪ್ರವಾಸಿಗರಿಂದ ಮರಳ ದಂಡೆಗಳು ತುಂಬಿ ತುಳುಕುತ್ತಿದ್ದವು. ಬೀಚಿನುದ್ದಕ್ಕೂ ದಣಿದವರಿಗಾಗಿ ಎಳನೀರು ಮತ್ತಿತರ ತಿನಿಸು ಮಾರುವ, ಬಟ್ಟೆ ಮಾರುವ ಸಂಖ್ಯಾನಾಮದ ಅಂಗಡಿಗಳಿದ್ದವು. ಪ್ರವಾಸ ಬಂದಲ್ಲೂ ಫಿಟ್ನೆಸ್ ಗಮನ ಬಿಡದವರಿಗಾಗಿ ಬೀಚ್ ಮತ್ತು ಲಗೂನ್ ಬಳಸಿ ಸಾಗುವ 8 ಕಿಮೀ ಉದ್ದದ ದಂಡೆಯನ್ನು ಮಿನಿ ವ್ಯಾಯಾಮಶಾಲೆಯನ್ನಾಗಿ ಮಾಡಿದ್ದಾರೆ. ಸೈಕಲ್ ತುಳಿಯು ವವರು, ಓಡುವವರು, ಸ್ಕೇಟಿಂಗ್ ಮಾಡುವವರು, ಕಸರತ್ತು ಮಾಡುವವರು ಆ ರಸ್ತೆಯಲ್ಲಿ ತುಂಬಿದ್ದರು. ಬೀಚ್ ರಸ್ತೆಯ ಮತ್ತೊಂದು ಬದಿ ಸಂಜೆ ಆರರ ನಂತರ ಎಲ್ಲ ತರಹದ ಅಂಗಡಿಗಳು ತಲೆಯೆತ್ತುತ್ತವೆ. ಕಲಾಕೃತಿ, ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳಿಂದ ಹಿಡಿದು ಬಾರ್, ಆರ್ಕೆಸ್ಟ್ರಾ, ಮ್ಯೂಸಿಕ್-ಸಾಂಬಾ ಷೋ ತನಕ ಎಲ್ಲವೂ ಅಲ್ಲಿ ಕಾಣುತ್ತದೆ.
ನಾವು ಸುಮ್ಮನೆ ಕಾಲೆಳೆಯುತ್ತ ತಿರುಗಿದೆವು. ಬೀಚುಗಳು ನಮಗೆ ಹೊಸದಲ್ಲ. ನಿರ್ಜನ ಕಡಲ ದಂಡೆಯಲ್ಲಿ ಅಲೆಗಳು ಉರುಳುವುದನ್ನು ನೋಡುತ್ತ ಗಂಟೆಗಟ್ಟಲೆ ಕಳೆದಿದ್ದೆವು. ಮಳೆಗಾಲದ ಕಡಲ ರೌದ್ರವನ್ನೂ, ಹುಣ್ಣಿಮೆ ಬೆಳಕಲ್ಲಿ ಬೆಳ್ಳಿಯಲೆಗಳ ಉರುಳುವಿಕೆಯನ್ನೂ ವಿರಳ ಜನ ದಂಡೆಗಳಲ್ಲಿ ಕಂಡಿದ್ದೆವು. ಆದರೆ ಕಿಕ್ಕಿರಿದ ಈ ಸಮುದ್ರ ದಂಡೆಗಳು ಮನದಲ್ಲಿ ಯಾವ ಅಲೆಯನ್ನೂ ಏಳಿಸಲಾರದೆ ಹೋದವು.

ಶುಗರ್ ಲೋಫ್

ನಗರ ಪ್ರವೇಶಿಸುವಲ್ಲಿ ಶುಗರ್ ಲೋಫ್ ಬೆಟ್ಟವಿದೆ. ಸಕ್ಕರೆಯ ಕ್ಯೂಬುಗಳನ್ನು ಸಮುದ್ರ ದಂಡೆಯಲ್ಲಿ ಕವುಚಿ ಹಾಕಿದಂತೆ ಕಾಣುವ ನುಣ್ಣನೆಯ ಬೆಟ್ಟಕ್ಕೆ ಆ ಹೆಸರು ಬಂದಿದೆ. ಏಕಶಿಲಾ ಬೆಟ್ಟ ಅದು. ಇಡೀ ನಗರದ ಪಕ್ಷಿನೋಟ ನೀಡುವ ಶುಗರ್ ಲೋಫ್ ಬೆಟ್ಟದ ಚಾರಣ ರಿಯೊ ಪ್ರವಾಸೋದ್ಯಮಕ್ಕೆ ಗರಿಯಂತಿದೆ. ದೂರದಲ್ಲಿ ಒಂದೆಡೆ ಶಾಂತ ನೀಲ ಅಟ್ಲಾಂಟಿಕ್ ಕಡಲು, ಇಪಾನೆಮ, ಕೋಪಕಬಾನ ಬೀಚುಗಳು, ಸೂರ್ಯ ಸ್ನಾನ ಮಾಡುವ ಸಾವಿರಾರು ಜನ, ತೇಲುವ ಹಾಯಿಗಳು; ಇನ್ನೊಂದೆಡೆ ಹಸಿರು ಮುಕ್ಕಳಿಸುವ ಬೆಟ್ಟ ಬಯಲ ಪ್ರದೇಶ, ಕೊಲ್ಲಿ ನೀರಿನ ನಡುವೆ ಅರಳಿದ ಪುಟ್ಟಪುಟ್ಟ ದ್ವೀಪಗಳು, ವಿಶಾಲ ರಿಯೊ ನಗರ. ಪ್ರಕೃತಿಯ ಚೆಲುವೆಲ್ಲ ಗ್ವನಬಾರಾ ಬೇ ಆಗಿ ಕಣ್ಣೆದುರು ಬಿಚ್ಚಿಕೊಳ್ಳುತ್ತದೆ. ನನ್ನದು ಕಣ್ ಸಫಾರಿ, ಉಳಿದವರದು ಕ್ಯಾಮೆರಾ ಷಟರ್ ಸಫಾರಿ. ಫೋಟೋ ತೆಗೆದಷ್ಟೂ ಸಾಕೆನಿಸುತ್ತಿಲ್ಲ, ಗೈಡ್ ಕೊಟ್ಟ ಸಮಯವೂ ಸಾಕೆನಿಸುತ್ತಿಲ್ಲ. ಆಯಿಲ್ ಪೇಂಟಿಂಗ್ ನೋಡುತ್ತಿರುವ ಭಾಸ ಹುಟ್ಟಿಸುವಷ್ಟು ಸುಂದರ ಭೂದೃಶ್ಯಗಳು. ಕೇಬಲ್ ಕಾರಿನಲ್ಲಿ ಕುಳಿತು ಎರಡು ಹಂತಗಳಲ್ಲಿ ಬೆಟ್ಟ ಹತ್ತಿಳಿಯುವ ವೇಳೆಗೆ ಫೆಬ್ರವರಿಯ ಬಿಸಿಲಿಗೆ ನಮ್ಮ ಚರ್ಮ ಸುಟ್ಟು ಕಪ್ಪಾಯಿತು. ಆದರೂ ಹೊಸ ಅನುಭವ ಲೋಕ ತೆರೆದು ಕೊಂಡಿತು. ನಮ್ಮ ಸುತ್ತಮುತ್ತ ನಾವರಿಯದ ಭಾಷೆಯಲ್ಲಿ ನೂರಾರು ದನಿಗಳು ಉಲಿಯುತ್ತಿದ್ದವು. ಚೇಡಿಸುತ್ತ, ನಗುತ್ತ, ಹರಟುತ್ತ, ಸಂತಸ ಪಡುತ್ತಿದ್ದವು. ಚಿಟ್ಟೆ, ಪುಟ್ಟ ಹಕ್ಕಿ, ಹದ್ದುಗಳೆಲ್ಲ ಕೈಮೈ ಸವರುತ್ತ ಹೋದವು. ಆಗ, ನಿರಂತರ ದಣಿವಿಗೋ, ಅಪರಿಚಿತ ವಾತಾವರಣದಲ್ಲಿ ಸುಡುವ ಬಿಸಿಲಿಗೋ, ನಿದ್ರೆಯಿರದ ರಾತ್ರಿಯನ್ನು ನುಂಗಿ ಬಂದ ಹಗಲಿನ ಅಮಲಿಗೋ ಅಂತೂ ಕಿರಿಯವಳು ಕೆಲ ನಿಮಿಷಗಳ ವಿಸ್ಮತಿಯ ಲೋಕಕ್ಕೆ ಜಾರಿಬಿಟ್ಟಳು. ಕಣ್ಣು ಕತ್ತಲಿಟ್ಟು ಎಚ್ಚರ ತಪ್ಪಿದವಳ ಕಂಡು ನಮಗಿಂತ ಉಳಿದವರು ಗಾಬರಿಯಾದರು. ಅನಾಮತ್ತು ಎತ್ತಿ ಕೊಂಡೊಯ್ದು ಮಲಗಿಸಿ ಉಪಚರಿಸಿದ ಸೆಕ್ಯುರಿಟಿ ತರುಣ ಯಾರ್ಯಾರನೋ ಕರೆಸುವ ತಯಾರಿ ನಡೆಸಿದ. ನಾವು ಬೇಡ, ಬೇಡವೆನ್ನುತ್ತಿರುವಷ್ಟರಲ್ಲಿ ತನ್ನ ಸ್ವಪ್ನಲೋಕದಲ್ಲಿ ಏನೇನು ಕಂಡಳೋ, ಅವಳೇ ಎದ್ದು ಕೂತಳು. ನಾವಲ್ಲಿಂದ ಹೊರಬೀಳುವವರೆಗೂ ಆ ತರುಣ ನಮ್ಮ ಹಿಂದೇ ಅಷ್ಟು ದೂರದಲ್ಲಿ ಕಾವಲಿನಂತೆ ಸುಳಿದಾಡಿದ. ಅವನಿಗೆ ಇಂಗ್ಲಿಷ್ ಬಾರದು. ನಮಗೆ ಪೋರ್ಚುಗೀಸ್ ಬಾರದು. ಆದರೂ ಹೊರಡುವಾಗ ನಮಗೆ ಗೊತ್ತಿದ್ದ ಒಂದೇ ಒಂದು ಪೋರ್ಚುಗೀಸ್ ಪದ ‘ಒಬ್ರಗಾಡೊ’ (ಧನ್ಯವಾದ) ಹೇಳಿದೆವು. ಈ ಭೂಮಿಯ ಯಾವುದೋ ಒಂದು ಅಪರಿಚಿತ ಮೂಲೆ ಯಲ್ಲೂ ನಿಮಗಾಗಿ ಮಿಡಿಯುವ ಒಂದು ಜೀವ ಸಿಕ್ಕಿಬಿಡುತ್ತದೆ! ಬಾಂಧವ್ಯದ ಒಂದು ಎಳೆ ದಕ್ಕಿಬಿಡುತ್ತದೆ!! ಅದಕ್ಕೇ ಅಲ್ಲವೆ ಈ ಭೂಮಿ ಇಷ್ಟು ಸುಂದರವಾಗಿದೆ?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X