Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ‘‘ಇದು ನಿಮ್ಮ ತಾಯಿ,ಇದರ ರಕ್ಷಣೆ ನಿಮ್ಮ...

‘‘ಇದು ನಿಮ್ಮ ತಾಯಿ,ಇದರ ರಕ್ಷಣೆ ನಿಮ್ಮ ಹೊಣೆ’’

ಗುಜರಾತ್ ದಲಿತ ದಂಗೆಯ ಅತ್ಯುಗ್ರ ಅಸ್ತ್ರ

ರವಿಕಿರಣ್ ಶಿಂಧೆರವಿಕಿರಣ್ ಶಿಂಧೆ1 Aug 2016 11:27 PM IST
share
‘‘ಇದು ನಿಮ್ಮ ತಾಯಿ,ಇದರ ರಕ್ಷಣೆ ನಿಮ್ಮ ಹೊಣೆ’’

ಪ್ರತಿಭಟನೆಗೆ ದಲಿತರು ಕ್ರಾಂತಿಕಾರಿ ಹಾಗೂ ವಿಶಿಷ್ಟ ವಿಧಾನ ಅನುಸರಿಸಿದರು. ಹಸುಗಳ ಶವವನ್ನು ಸುರೇಂದ್ರನಗರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಶಿ ಹಾಕಿದರು. ಹಸು ಶವಗಳನ್ನು ಎಸೆಯುತ್ತಾ, ‘‘ಇದು ನಿಮ್ಮ ತಾಯಿ; ಇದರ ರಕ್ಷಣೆ ನಿಮ್ಮ ಹೊಣೆ’’ ಎಂದು ಮೂದಲಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡಿತು.

ಗಾಂಧಿನಗರದಿಂದ 20 ಕಿಲೋಮೀಟರ್ ದೂರದಲ್ಲಿ, ಮಹಿಳೆಯರಿಂದಲೇ ತುಂಬಿದ್ದ ಕೊಠಡಿಯೊಂದರಲ್ಲಿ ಇಬ್ಬರು ಪುರುಷರು ನಿಂತಿದ್ದರು. ಬಹುತೇಕ ಮಧ್ಯವಯಸ್ಕ ಮಹಿಳೆಯರಿದ್ದ ಇಡೀ ಕೊಠಡಿಯಲ್ಲಿ ಗಂಭೀರತೆ ಮನೆ ಮಾಡಿತ್ತು. ಬಹುತೇಕ ಮಹಿಳೆಯರ ಕಣ್ಣುಗಳಲ್ಲಿ ದೃಢನಿರ್ಧಾರದ ನೋಟ ಇಣುಕುತ್ತಿತ್ತು. ಪುರುಷರು ತಮ್ಮ ಬಲಗೈ ಮುಂದಕ್ಕೆ ಚಾಚಿ ಪ್ರತಿಜ್ಞೆ ಬೋಧಿಸುತ್ತಿದ್ದರೆ, ಎಲ್ಲ ಮಹಿಳೆಯರು ಅದನ್ನು ಅನುಸರಿಸಿದರು.

‘‘ನಾನು ಅಥವಾ ನನ್ನ ಕುಟುಂಬದ ಸದಸ್ಯರು ಇನ್ನು ಮುಂದೆ ಹಸುವಿನ ಶವ ಎತ್ತುವುದಿಲ್ಲ’’ ಎಂಬ ಪ್ರತಿಜ್ಞೆ ಜೈಭೀಮ್ ಎಂಬ ಘೋಷಣೆಯೊಂದಿಗೆ ಮುಕ್ತಾಯವಾಗಿತು. ಈ ಪ್ರತಿಜ್ಞಾ ಸ್ವೀಕಾರದ ವೀಡಿಯೊ ಜುಲೈ 24ರಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುವಂತೆ ದಲಿತ ಸ್ವಯಂಸೇವಕರು ನೋಡಿಕೊಂಡರು.
ಗುಜರಾತ್‌ನ ಗೀರ್ ಸೋಮನಾಥ್ ಜಿಲ್ಲೆಯ ಉನಾದಲ್ಲಿ ಸತ್ತ ಹಸುವಿನ ಚರ್ಮ ಸುಲಿಯುತ್ತಿದ್ದ ನಾಲ್ಕು ಮಂದಿ ದಲಿತರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದನ್ನು ಖಂಡಿಸಿ ರಾಜ್ಯಾದ್ಯಂತ ನಡೆಯುತ್ತಿರುವ ವ್ಯವಸ್ಥಿತ ಪ್ರತಿಭಟನೆಯ ಭಾಗ ಇದು. ಇದು ಆರಂಭವಾದದ್ದು ಜುಲೈ 11ರಂದು ಈ ಅಮಾನವೀಯ ಹಲ್ಲೆ ದೃಶ್ಯಾವಳಿಯನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ಬಳಿಕ.
ದಲಿತ ದೌರ್ಜನ್ಯದ ಈ ಭೀಕರ ಪ್ರಕರಣದಲ್ಲಿ, ಗೋರಕ್ಷಕರೇ ತಮ್ಮ ಸಾಹಸವನ್ನು ಪ್ರದರ್ಶಿಸುವ ಸಲುವಾಗಿ ವೀಡಿಯೊ ಚಿತ್ರೀಕರಣ ಮಾಡಿದ್ದಾರೆ. ಹಸುವಿನ ತಂಟೆಗೆ ಬಂದರೆ ಇಂಥ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಸಂದೇಶವನ್ನು ರವಾನಿಸುವ ಸಲುವಾಗಿ ಈ ಕೃತ್ಯ. ದುರದೃಷ್ಟವಶಾತ್ ಅವರ ಯೋಚನೆ ತಲೆ ಕೆಳಗಾಗಿ ಅವರಿಗೇ ತಿರುಗುಬಾಣವಾಯಿತು. ದಲಿತರಲ್ಲಿ ಭೀತಿ ಹುಟ್ಟಿಸುವ ಬದಲು ಈ ವೀಡಿಯೊ, ಅವರ ಸಂಘಟನೆಗೆ ಕಾರಣವಾಯಿತು. ಈ ವೀಡಿಯೊ ಆಧಾರದಲ್ಲೇ ದಲಿತ ಸಮುದಾಯವನ್ನು ಸಂಘಟಿಸಿ, ರಾಜ್ಯವ್ಯಾಪಿ ಪ್ರತಿಭಟನೆ ಸಂಘಟಿಸಲಾಯಿತು. ಗುಜರಾತ್‌ನ ಮುಖ್ಯ ಕಾರ್ಯದರ್ಶಿ ಜಿ.ಆರ್.ಅಲೋರಿಯಾ ಇಂಡಿಯನ್ ಎಕ್ಸ್‌ಪ್ರೆಸ್ ಜತೆ ಮಾತನಾಡುತ್ತಾ ಸ್ಪಷ್ಟಪಡಿಸಿದಂತೆ, ಆರೋಪಿಗಳು ಅಪ್‌ಲೋಡ್ ಮಾಡಿದ ಈ ವೀಡಿಯೊ, ದಲಿತರಿಗೆ ತಮ್ಮ ಸಮುದಾಯವನ್ನು ಸಂಘಟಿಸಿ, ಪ್ರತಿಭಟನೆ ಹಮ್ಮಿಕೊಳ್ಳಲು ನೆರವಾಯಿತು ಎಂದು ಒಪ್ಪಿಕೊಂಡಿದ್ದರು. ದಲಿತ ಸಂತ್ರಸ್ತರಿಗೆ ಎಚ್ಚೆತ್ತುಕೊಳ್ಳಲು ಸಾಮಾಜಿಕ ಜಾಲತಾಣ ನೆರವಾಯಿತು ಎಂದು ಹೇಳಿದ್ದರು.
ಜುಲೈ 11ರಿಂದ 18ರವರೆಗೆ ದಲಿತರ ವಿರುದ್ಧದ ದೌರ್ಜನ್ಯಗಳ ಬಗ್ಗೆ ಮಾಯಾವತಿ ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸುತ್ತಿದ್ದರೆ, ದಲಿತರು ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ವಿರುದ್ಧದ ದೌರ್ಜನ್ಯಕ್ಕೆ ಸಾಕ್ಷಿಯಾಗಿ ಬಿಂಬಿಸಿದರು. ಕೆಲ ಸಾಮಾಜಿಕ ಹೋರಾಟಗಾರರು ಹಾಗೂ ನವಸಾರ್ಜನ್‌ನಂಥ ಸಂಘಟನೆಯ ಕಾರ್ಯಕರ್ತರು, ಜುಲೈ 18ರ ಬೃಹತ್ ಪ್ರತಿಭಟನಾ ರ್ಯಾಲಿಗೆ ಜನ ಸಂಘಟಿಸಲು ವಾಟ್ಸ್ ಆ್ಯಪ್ ಹಾಗೂ ಫೇಸ್‌ಬುಕ್‌ನಂಥ ವೇದಿಕೆಗಳನ್ನು ಸಮರ್ಥವಾಗಿ ಬಳಸಿಕೊಂಡರು. ಪ್ರತಿಭಟನೆಗೆ ದಲಿತರು ಕ್ರಾಂತಿಕಾರಿ ಹಾಗೂ ವಿಶಿಷ್ಟ ವಿಧಾನ ಅನುಸರಿಸಿದರು. ಹಸುಗಳ ಶವವನ್ನು ಸುರೇಂದ್ರನಗರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಶಿ ಹಾಕಿದರು. ಹಸುಗಳ ಶವಗಳನ್ನು ಎಸೆಯುತ್ತಾ, ‘‘ಇದು ನಿಮ್ಮ ತಾಯಿ; ಇದರ ರಕ್ಷಣೆ ನಿಮ್ಮ ಹೊಣೆ’’ ಎಂದು ಮೂದಲಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡಿತು.
‘‘ಇಂತಹ ಪರಿಣಾಮಕಾರಿ ಪ್ರತಿಭಟನೆ ಕೈಗೊಂಡಿದ್ದಕ್ಕಾಗಿ ನಾವು ನಿಜವಾಗಿಯೂ ದಲಿತರಿಗೆ ಗೌರವ ಅರ್ಪಿಸಬೇಕು. ಇದುವರೆಗೂ ದೌರ್ಜನ್ಯಕ್ಕೆ ಬಲಿಯಾಗುತ್ತಲೇ ಬಂದ ಸಮುದಾಯ ಇದೀಗ ವಿನೂತನ ವಿಧಾನದಲ್ಲಿ ಜಾಗೃತರಾಗುತ್ತಿದ್ದಾರೆ’’ ಎಂದು ಜೆಎನ್‌ಯು ಪ್ರೊಫೆಸರ್ ಮತ್ತು ಸಮಾಜಶಾಸ್ತ್ರಜ್ಞ ಪ್ರೊ. ವಿವೇಕ್ ಕುಮಾರ್, ನ್ಯಾಷನಲ್ ದಸ್ತಕ್ ಜತೆ ಮಾತನಾಡುತ್ತಾ ವಿವರಿಸಿದರು.
 
ಜುಲೈ 18ರ ಈ ಪ್ರತಿಭಟನೆ ಮತ್ತು ಮೇಲ್ಮನೆಯಲ್ಲಿ ಮಾಯಾವತಿಯವರ ಆಕ್ರೋಶ ಕಟ್ಟೆಯೊಡೆದ ಬಳಿಕವಷ್ಟೇ ಮುಖ್ಯ ವಾಹಿನಿ ಮಾಧ್ಯಮಗಳು ಉನಾ ಘಟನೆಯ ಬಗ್ಗೆ ಕಣ್ಣು ತೆರೆದವು. ಇದಾದ ಕೆಲವೇ ಗಂಟೆಗಳಲ್ಲಿ ಬಿಜೆಪಿ ಉತ್ತರ ಪ್ರದೇಶ ಘಟಕದ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ಅವರು ಮಾಯಾವತಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ಕುರಿತ ವೀಡಿಯೊ, ‘‘ಇದು ವಿಸ್ತೃತ ಯೋಜನೆಯ ಅಂಗವೇ ಅಥವಾ ಕಾಕತಾಳೀಯವೇ’’ ಎಂಬ ಶೀರ್ಷಿಕೆಯೊಂದಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭವಾಯಿತು. ‘‘ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯ ವೇಳೆ ಗೋ ರಾಜಕೀಯ ಆರಂಭಿಸಿದ ಆರೆಸ್ಸೆಸ್ ಹಾಗೂ ಬಿಜೆಪಿಗೆ ಉನಾ ಘಟನೆ ಮತ್ತು ದಲಿತರ ಪ್ರತಿಭಟನೆ ದೊಡ್ಡ ಅವಮಾನ’’ ಎಂದು ‘ಇಂಡಿಯಾ ಟುಡೇ’ ಮಾಜಿ ಸಂಪಾದಕ ದಿಲೀಪ್ ಮಂಡಲ್ ಅಭಿಪ್ರಾಯಪಟ್ಟರು. ಗುಜರಾತ್ ದಲಿತ ಬಂಡಾಯವನ್ನು ಮುಚ್ಚಿಹಾಕುವ ಸಲುವಾಗಿ ಬಿಜೆಪಿ ಸ್ನೇಹಿ ಮಾಧ್ಯಮಗಳು ದಯಾಶಂಕರ್ ಸಿಂಗ್ ಅವರ ಪತ್ನಿ ಸ್ವಾತಿ ಸಿಂಗ್ ಅವರನ್ನು ಅಸ್ತ್ರವಾಗಿ ಕಂಡುಕೊಂಡವು. ತನ್ನ 12 ವರ್ಷದ ಮಗಳಿಗೆ ಕಿರುಕುಳ ನೀಡಿದ ಆರೋಪ ಹೊರಿಸಿ, ಮಾಯಾವತಿ ಮತ್ತು ಇತರ ಬಿಎಸ್ಪಿಮುಖಂಡರ ವಿರುದ್ಧ ಸ್ವಾತಿ ಸಿಂಗ್ ಎಫ್‌ಐಆರ್ ದಾಖಲಿಸಿದ್ದು, ಈ ಚಾನೆಲ್‌ಗಳ ಪ್ರೈಂಟೈಮ್ ಸುದ್ದಿಯಾಯಿತು. ಆದರೆ ಬಿಎಸ್ಪಿಯ ನಸೀಮುದ್ದೀನ್ ಸಿದ್ದಿಕಿ ಯಾವುದೇ ಕೆಟ್ಟ ಭಾಷೆಯನ್ನು ಬಳಸಿಲ್ಲ ಎನ್ನುವುದು ಆ ಬಳಿಕ ಬಿಡುಗಡೆಯಾದ ವೀಡಿಯೊದಿಂದ ಖಚಿತವಾಯಿತು.
ಮುಖ್ಯವಾಹಿನಿ ಮಾಧ್ಯಮ ಉನಾ ಘಟನೆಯಿಂದ ಸ್ವಾತಿ ಸಿಂಗ್ ಪ್ರಕರಣದತ್ತ ಹೊರಳಿದರೂ, ಗುಜರಾತ್‌ನ ದಲಿತ ಹೋರಾಟ ಮಾತ್ರ ರಾಜ್ಯವ್ಯಾಪಿಯಾಗಿ ಬೆಳೆಯಿತು. ಇಡೀ ರಾಜ್ಯದಲ್ಲಿ ಪ್ರತಿಭಟನೆಯ ಕಾವು ಹಬ್ಬಿಸಲು ದಲಿತರು ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಬಳಸಿಕೊಂಡದ್ದು ಬಹುಶಃ ಇದೇ ಮೊದಲು. ‘‘ಇನ್ನೆಂದೂ ಸತ್ತ ಹಸುಗಳನ್ನು ತೆಗೆಯುವುದಿಲ್ಲ’’ ಎಂಬ ಪ್ರತಿಜ್ಞಾ ಸ್ವೀಕಾರದ ವೀಡಿಯೊ ಅಂತೂ ಹೋರಾಟವನ್ನು ಮುಂದಿನ ಘಟ್ಟಕ್ಕೆ ಕೊಂಡೊಯ್ದಿತು. ಈ ಹಳೆಯ ವೃತ್ತಿಯನ್ನು ಕೈಬಿಡುವುದು ತಮಗೆ ದುಬಾರಿಯಾಗಿ ಪರಿಣಮಿಸಿದರೂ, ಆತ್ಮಗೌರವ ಗಳಿಸಿಕೊಳ್ಳುವ ಸಲುವಾಗಿ ಮತ್ತು ತಮ್ಮ ಭವಿಷ್ಯದ ಪೀಳಿಗೆ ಇಂಥ ಗೋಸಂರಕ್ಷಕರಿಂದ ಹಲ್ಲೆಗೆ ಒಳಗಾಗುವುದನ್ನು ತಪ್ಪಿಸುವ ಸಲುವಾಗಿ ಈ ಐತಿಹಾಸಿಕ ಪ್ರತಿಜ್ಞೆ ಸ್ವೀಕರಿಸಿದರು.
ಮಹಾತ್ಮಾಗಾಂಧಿ ಬದಲಾಗಿ ಡಾ.ಅಂಬೇಡ್ಕರ್ ಅವರೇ ತಮ್ಮ ಹೋರಾಟದ ಮಾದರಿ ಎಂದು ದಲಿತರು ಕಂಡುಕೊಳ್ಳುವಲ್ಲೂ ಗುಜರಾತ್ ಪ್ರತಿಭಟನೆ ನೆರವಾಯಿತು. ಗಾಂಧೀಜಿಯವರ ತವರು ರಾಜ್ಯದಲ್ಲೂ ಪ್ರತಿಭಟನೆಯಲ್ಲಿ ಅಂಬೇಡ್ಕರ್ ಚಿತ್ರಗಳು, ಅಂಬೇಡ್ಕರ್ ಪರ ಘೋಷಣೆಗಳು ಹೋರಾಟದ ಪ್ರಮುಖ ಪಾತ್ರ ವಹಿಸಿದವು. ಏಕೆಂದರೆ ಅಂಬೇಡ್ಕರ್, ಜಾತಿ ಪದ್ಧತಿ ನಿರ್ಮೂಲನೆಯನ್ನು ಪ್ರತಿಪಾದಿಸಿದರೆ, ಗಾಂಧೀಜಿ ವರ್ಣ ಹಾಗೂ ಜಾತಿ ವ್ಯವಸ್ಥೆಯನ್ನು ತಮ್ಮ ಜೀವನದುದ್ದಕ್ಕೂ ಅನುಸರಿಸುತ್ತಲೇ ಬಂದಿದ್ದರು.
ಕೃಪೆ: huffingtonpost.in

share
ರವಿಕಿರಣ್ ಶಿಂಧೆ
ರವಿಕಿರಣ್ ಶಿಂಧೆ
Next Story
X