ಪ್ರತ್ಯೇಕ ಪ್ರಕರಣ: ಇಬ್ಬರ ನಾಪತ್ತೆ
ಕುಂದಾಪುರ, ಆ.1: ಹೆಸ್ಕತ್ತೂರಿನ ರಾಜೀವ ಕುಲಾಲ(39) ಎಂಬವರು ಜು.24ರಂದು ಮನೆಯಿಂದ ಕೆಲಸಕ್ಕೆಂದು ಹೋದವರು ಈವರೆಗೆ ವಾಪಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರೆ: ಎರ್ಮಾಳ್ ಗ್ರಾಮದ ಪೆಟ್ರೋಲ್ ಬಂಕ್ ಬಳಿ ನಿವಾಸಿ ಹುಸೈನ್ ಎಂಬವರ ಮಗಳು ರಮ್ಲಾತ್(24) ಜು.30ರಂದು ಮನೆಯಿಂದ ಹೋದವರು ನಾಪತ್ತೆಯಾದ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





