ಸೈನಿಕರ ಬೆಂಬಲಕ್ಕೆ ಮೊಂಬತ್ತಿ ಮೆರವಣಿಗೆ
ಉಡುಪಿ, ಆ.1: ಯುವ ಬ್ರಿಗೇಡ್ ಉಡುಪಿ ಘಟಕದ ವತಿಯಿಂದ ಕಾಶ್ಮೀರದಲ್ಲಿ ಹೋರಾಟ ನಡೆಸುತ್ತಿರುವ ಸೈನಿಕರಿಗೆ ಬೆಂಬಲ ಸೂಚಿಸುವ ಸಲುವಾಗಿ ಹಮ್ಮಿಕೊಳ್ಳಲಾದ ಮೊಂಬತ್ತಿ ಮೆರವಣಿಗೆಗೆ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಶ್ರೀವಿಶ್ವಪ್ರಸ್ನನ ತೀರ್ಥ ಸ್ವಾಮೀಜಿಯವರು ಶ್ರೀಕೃಷ್ಣ ಮಠದ ರಾಜಾಂಗಣದ ಮುಂಭಾಗದಲ್ಲಿ ಸೋಮವಾರ ಸಂಜೆ ಚಾಲನೆ ನೀಡಿದರು. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿ ನಡೆದು ಬಸ್‌ನಿಲ್ದಾಣದ ಬಳಿ ಮುಕ್ತಾಯಗೊಂಡಿತು.
ಗೃಹರಕ್ಷಕರಿಗೆ ನಗದು ಪುರಸ್ಕಾರ ಮಂಗಳೂರು, ಆ.1: ಉಳ್ಳಾಲ ಸಮುದ್ರತೀರದ ಅಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ 7ವರ್ಷದ ಬಾಲಕಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಗೃಹರಕ್ಷಕ ರಾಘವೇಂದ್ರರ ಸೇವೆಯನ್ನು ಗುರುತಿಸಿ ಆರಕ್ಷಕ ಮಹಾನಿರ್ದೇಶಕರು, ಗೃಹರಕ್ಷಕದಳದ ಮಹಾಸಮಾದೇಷ್ಟರು ಮತ್ತು ನಿರ್ದೇಶಕರು ಪೌರರಕ್ಷಣೆ ನಗದು ಪುರಸ್ಕಾರ ಮಂಜೂರು ಮಾಡಿದ್ದಾರೆ. ತಾರಾಮ ಶೆಟ್ಟಿ, ಹೊನ್ನಪ್ಪ ಗೌಡ, ಸುಂದರ ಪೂಜಾರಿ, ಇಬ್ರಾಹೀಂ ಬೊಳ್ಳಾಡಿ ಮತ್ತಿತರರು ಉಪಸ್ಥಿತರಿದ್ದರು.
Next Story





