ಇ-ಸೇವೆಗಳಲ್ಲಿ ಯುಎಇ ಪ್ರಾದೇಶಿಕ ಮುಂದಾಳು
ದುಬೈ, ಆ. 1: ಇ-ಸೇವೆಗಳಲ್ಲಿ ಯುಎಇ ವಲಯದಲ್ಲೇ ಮೊದಲ ಸ್ಥಾನದಲ್ಲಿದೆ ಹಾಗೂ ಜಾಗತಿಕ ಮಟ್ಟದಲ್ಲಿ ಎಂಟನೆ ಸ್ಥಾನದಲ್ಲಿದೆ ಎಂದು ವಿಶ್ವಸಂಸ್ಥೆಯ ನೂತನ ವರದಿಯೊಂದು ತಿಳಿಸಿದೆ.
ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ ಬಿಡುಗಡೆ ಮಾಡಿದ ‘2016 ಇ-ಗವರ್ನ್‌ಮೆಂಟ್ ಡೆವಲಪ್‌ಮೆಂಟ್ ಇಂಡೆಕ್ಸ್ (ಇಜಿಡಿಐ)ನಲ್ಲಿ ಯುಎಇಯ ಸಾಧನೆಯನ್ನು ಪಟ್ಟಿ ಮಾಡಲಾಗಿದೆ.
ಇ-ಸರ್ವಿಸಸ್ ಸೂಚ್ಯಂಕದಲ್ಲಿ ಯುಎಇಯ ಪ್ರಾದೇಶಿಕ ಪ್ರಾಬಲ್ಯವನ್ನು ಈ ವರದಿ ಖಚಿತಪಡಿಸಿದೆ. ಯುಎಇ ಕೊಲ್ಲಿ, ಅರಬ್ ಜಗತ್ತು ಮತ್ತು ಪಶ್ಚಿಮ ಏಶ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಈ ಕ್ಷೇತ್ರದಲ್ಲಿ ಯುಎಇ ಏಶ್ಯದಲ್ಲಿ ಮೂರನೆ ಹಾಗೂ ಜಗತ್ತಿನಲ್ಲಿ ಎಂಟನೆ ಸ್ಥಾನದಲ್ಲಿದೆ.
Next Story





