ಎರಡನೆ ಟೆಸ್ಟ್: ಬೃಹತ್ ಮುನ್ನಡೆಯತ್ತ ಭಾರತ
ಅಜಿಂಕ್ಯ ರಹಾನೆ ಅರ್ಧಶತಕ

ಜಮೈಕಾ, ಆ.1: ಕೆ.ಎಲ್. ರಾಹುಲ್ ಬಾರಿಸಿದ ಆಕರ್ಷಕ ಶತಕ(158) ಹಾಗೂ ಅಜಿಂಕ್ಯರಹಾನೆ(ಔಟಾಗದೆ 74) ಅರ್ಧಶತಕದ ನೆರವಿನಿಂದ ಭಾರತ ತಂಡ ವೆಸ್ಟ್‌ಇಂಡೀಸ್ ವಿರುದ್ಧದ ಎರಡನೆ ಟೆಸ್ಟ್ ಪಂದ್ಯದಲ್ಲಿ ಭಾರೀ ಮುನ್ನಡೆ ಸಾಧಿಸುವತ್ತ ಹೆಜ್ಜೆ ಇಟ್ಟಿದೆ.
ಮೂರನೆ ದಿನವಾದ ಸೋಮವಾರ ಭೋಜನ ವಿರಾಮದ ವೇಳೆಗೆ 151.4 ಓವರ್‌ಗಳಲ್ಲಿ 425 ರನ್ ಗಳಿಸಿರುವ ಭಾರತ ಒಟ್ಟು 229 ರನ್ ಮುನ್ನಡೆಯಲ್ಲಿದೆ. ಭೋಜನವಿರಾಮ ಪೂರ್ವಪಂದ್ಯದಲ್ಲಿ 26.4 ಓವರ್‌ಗಳಲ್ಲಿ ಕೇವಲ 67 ರನ್ ಬಿಟ್ಟುಕೊಟ್ಟಿರುವ ವಿಂಡೀಸ್ ಬೌಲರ್‌ಗಳು ಸಹಾ(47) ವಿಕೆಟ್ ಉರುಳಿಸಲು ಸಫಲರಾಗಿದ್ದಾರೆ. ಸಹಾ ವಿಂಡೀಸ್ ನಾಯಕ ಹೋಲ್ಡರ್‌ಗೆ ಔಟಾದ ಬೆನ್ನಿಗೆ ಭೋಜನ ವಿರಾಮ ಪಡೆಯಲಾಯಿತು.
2ನೆ ದಿನವಾದ ರವಿವಾರ ಆಟ ಕೊನೆಗೊಂಡಾಗ ಭಾರತ 125 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 358 ರನ್ ಗಳಿಸಿತ್ತು. ಅಜಿಂಕ್ಯ ರಹಾನೆ(42) ಹಾಗೂ ವೃದ್ದಿಮಾನ್ ಸಹಾ(17) ಔಟಾಗದೆ ಉಳಿದಿದ್ದರು.
ಮೂರನೆ ಶತಕ ಬಾರಿಸಿದ ಕನ್ನಡಿಗ ರಾಹುಲ್(158 ರನ್, 303 ಎಸೆತ, 15 ಬೌಂಡರಿ 3 ಸಿಕ್ಸರ್) ಗ್ಯಾಬ್ರಿಯಲ್‌ಗೆ ವಿಕೆಟ್ ಒಪ್ಪಿಸಿದರು. ಚೇತೇಶ್ವರ ಪೂಜಾರ(46) ಹಾಗೂ ನಾಯಕ ವಿರಾಟ್ ಕೊಹ್ಲಿ(44)ಉಪಯುಕ್ತ ಕಾಣಿಕೆಯನ್ನು ನೀಡಿದ್ದರೂ, ಉತ್ತಮ ಆರಂಭವನ್ನು ದೊಡ್ಡ ಮೊತ್ತವಾಗಿಸಲು ವಿಫಲರಾದರು.
ಆರಂಭಿಕ ಆಟಗಾರ ಶಿಖರ್ ಧವನ್ ಆಫ್-ಸ್ಪಿನ್ನರ್ ರಾಸ್ಟನ್ ಚೇಸ್ ಬೌಲಿಂಗ್‌ನಲ್ಲಿ ಔಟಾದರು. 46 ರನ್ ಗಳಿಸಿದ್ದ ಪೂಜಾರ ಸ್ಪಿನ್ನರ್ ಚೇಸ್‌ರಿಂದ ರನೌಟಾದರು.
ತಂಡಕ್ಕೆ ರಾಹುಲ್ ಆಸರೆ: ಮೊದಲ ವಿಕೆಟ್‌ಗೆ ಧವನ್‌ರೊಂದಿಗೆ 87 ರನ್ ಸೇರಿಸಿದ್ದ ರಾಹುಲ್, ಪೂಜಾರ ಹಾಗೂ ನಾಯಕ ಕೊಹ್ಲಿ ಅವರೊಂದಿಗೆ ಕ್ರಮವಾಗಿ 2 ಹಾಗೂ 3ನೆ ವಿಕೆಟ್ ಜೊತೆಯಾಟದಲ್ಲಿ 121 ಹಾಗೂ 69 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು.
ಸ್ಕೋರ್ ವಿವರ
ವೆಸ್ಟ್‌ಇಂಡೀಸ್ ಪ್ರಥಮ ಇನಿಂಗ್ಸ್: 196 ರನ್‌ಗೆ ಆಲೌಟ್
ಭಾರತ ಪ್ರಥಮ ಇನಿಂಗ್ಸ್:151.4 ಓವರ್‌ಗಳಲ್ಲಿ 425/6
ರಾಹುಲ್ ಸಿ ಡೌರಿಚ್ ಬಿ ಗ್ಯಾಬ್ರಿಯಲ್ 158
ಧವನ್ ಸಿ ಬ್ರಾವೊ ಬಿ ಚೇಸ್ 27
ಚೇತೇಶ್ವರ ಪೂಜಾರ ರನೌಟ್ 46
ವಿರಾಟ್ ಕೊಹ್ಲಿ ಸಿ ಚಂದ್ರಿಕಾ ಬಿ ಚೇಸ್ 44
ಅಜಿಂಕ್ಯ ರಹಾನೆ ಔಟಾಗದೆ 74
ಆರ್.ಅಶ್ವಿನ್ ಎಲ್‌ಬಿಡಬ್ಲು ಬಿಶೂ 03
ಸಹಾ ಎಲ್‌ಬಿಡಬ್ಲು ಹೋಲ್ಡರ್ 47
ಇತರ 26
ವಿಕೆಟ್ ಪತನ: 1-87, 2-208, 3-277, 4-310, 5-327, 6-425
ಬೌಲಿಂಗ್ ವಿವರ:
ಗ್ಯಾಬ್ರಿಯಲ್ 28-8-62-1
ಕುಮಿನ್ಸ್ 21.4-4-74-0
ಹೋಲ್ಡರ್ 32-12-66-1
ಚೇಸ್ 29-3-91-2
ಬಿಶೂ 32-5-95-1
ಬ್ರಾತ್‌ವೇಟ್ 9-0-26-0







